Fact Check | ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 3 ದಿನಗಳ ವಾರಾಂತ್ಯ ಘೋಷಣೆ ಮಾಡಲಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಮುಂಬರುವ ಬೆಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಎಲ್ಲಾ ಕಂಪನಿಗಳಿಗೆ ಮೂರು ದಿನಗಳ ವಾರದ ರಜೆಯನ್ನು ಕಡ್ಡಾಯಗೊಳಿಸುವ ನೀತಿಯನ್ನು ಜಾರಿ ಮಾಡಲಿದ್ದಾರೆ.” ಎಂಬ ಪೋಸ್ಟ್‌ನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪೋಸ್ಟ್‌ ಈಗ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣದ ಬಳಕೆದಾರರು ಇದನ್ನೇ ನಿಜವೆಂದು ನಂಬಿಕೊಂಡಿದ್ದು ಕೆಲವರು ಈ ಕುರಿತು ವಿಮರ್ಶೆಯನ್ನು ನಡೆಸಲು ಪ್ರಾರಂಭಿಸಿದ್ದಾರೆ. ಆದರೆ ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಇದೇ ರೀತಿಯ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾಗಿವೆ. ಅದರಲ್ಲೂ ಮೂರು ದಿನಗಳ ಕಾಲ ದೇಶಾದ್ಯಂತ ರಜೆ ಇರಲಿದೆ ಸರ್ಕಾರಿ ನೌಕರರಿಗೆ ಇದರಿಂದ ಹೆಚ್ಚು ಲಾಭ ಎಂದು ಹಂಚಿಕೊಳ್ಳಲಾಗುತ್ತಿದೆ.

ವಾರಂತ್ಯದ ಕುರಿತು ಹಂಚಿಕೊಳ್ಳಲಾದ ಪೋಸ್ಟ್‌
ವಾರಂತ್ಯದ ಕುರಿತು ಹಂಚಿಕೊಳ್ಳಲಾದ ಪೋಸ್ಟ್‌

ಫ್ಯಾಕ್ಟ್‌ಚೆಕ್‌

ಈ ಕುರಿತು ಸತ್ಯ ಶೋಧನೆಯನ್ನು ನಡೆಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುವ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿಲ್ಲ. ಹಾಗೆಯೇ ಹಣಕಾಸು ಸಚಿವಾಲಯವು (MoF) ತಮ್ಮ ವೆಬ್‌ಸೈಟ್‌ನಲ್ಲಿ ಮೂರು ದಿನಗಳ ವಾರದ ರಜೆಗಳ ಕುರಿತು ಯಾವುದೇ ಅಧಿಕೃತ ಸುತ್ತೋಲೆಯನ್ನು ಹಂಚಿಕೊಂಡಿಲ್ಲ.

ಇನ್ನು ಇದಕ್ಕೆ ಸಂಬಂಧ ಪಟ್ಟ ಹಾಗೆ ಕೇಂದ್ರದ ಯಾವ ಸಚಿವರುಗಳು ಕೂಡ ಈ ಬಗ್ಗೆ ಮಾಧ್ಯಮಗಳಿಗೆ ಇದುವರೆಗೂ ಪ್ರತಿಕ್ರಿಯೆಯನ್ನು ನೀಡಿಲ್ಲ. ಇನ್ನು ಈ ಕುರಿತು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಸಹ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ಕೇಂದ್ರ ಸರ್ಕಾರದ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿರುವ ಮೂರು ದಿನಗಳ ವಾರಾಂತ್ಯದ ಸುದ್ದಿ ಸುಳ್ಳು ಎಂದು ಖಚಿತ ಪಡಿಸಿದೆ.


ಇದನ್ನೂ ಓದಿ : Fact Check | SFI ಜಿಲ್ಲಾಧ್ಯಕ್ಷರ ಫೋಟೋವನ್ನು ಮನೋರಂಜನ್‌ ಎಂದು ಸುಳ್ಳು ಹರಡಿದ ಕಿಡಿಗೇಡಿಗಳು


ವಿಡಿಯೋ ನೋಡಿ : Fact Check | SFI ಜಿಲ್ಲಾಧ್ಯಕ್ಷರ ಫೋಟೋವನ್ನು ಮನೋರಂಜನ್‌ ಎಂದು ಸುಳ್ಳು ಹರಡಿದ ಕಿಡಿಗೇಡಿಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *