“ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಮುಸಲ್ಮಾನರ ಶ್ರೇಯೋಭಿವೃದ್ಧಿ ಮತ್ತು ಇತರೆ ಮುಸ್ಲಿಂ ಕಲ್ಯಾಣ ಯೋಜನೆಗಳಿಗೆ ನಿಧಿ ಸಂಗ್ರಹಿಸಲು ದೇವಾಲಯದ ಭೂಮಿಯನ್ನು ಹರಾಜು ಮಾಡುವುದಾಗಿ ಘೋಷಿಸಿದ್ದಾರೆ ಎಂದು NTV ತೆಲುಗು ಮತ್ತು ವೇ 2 ನ್ಯೂಸ್ ವರದಿ ಮಾಡಿವೆ ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಲಾಗುತ್ತಿದೆ.
ಈ ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದನ್ನು NTV ತೆಲುಗು ಮತ್ತು ವೇ 2 ನ್ಯೂಸ್ ವರದಿ ಮಾಡಿರುವ ರೀತಿಯಲ್ಲೇ ಕಾಣ ಸಿಗುತ್ತವೆ. ಹಾಗಾಗಿ ಇದೇ ನಿಜವಾದ ಸುದ್ದಿ ಎಂದು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಪ್ರಖ್ಯಾತ ಸುದ್ದಿ ಸಂಸ್ಥೆಗಳ ಹೆಸರಿನಲ್ಲಿ ಕಂಡು ಬಂದ ಈ ಸುಳ್ಳು ಸುದ್ದಿಗಳನ್ನು ಪರಿಶೀಲಿಸದೆ ಶೇರ್ ಮಾಡುತ್ತಿದ್ದಾರೆ..
ಫ್ಯಾಕ್ಟ್‌ಚೆಕ್
ಈ ಕುರಿತು ಫ್ಯಾಕ್ಟ್‌ಚೆಕ್ ಮಾಡಿದಾಗ ದೇವಸ್ಥಾನದ ಜಮೀನು ಹರಾಜು ಮಾಡುವ ಮೂಲಕ ಮುಸ್ಲಿಂ ಕಲ್ಯಾಣ ಯೋಜನೆಗಳಿಗೆ ಹಣ ಸಂಗ್ರಹಿಸುವ ಬಗ್ಗೆ ರೇವಂತ್ ರೆಡ್ಡಿ ಯಾವುದೇ ಘೋಷಣೆ ಮಾಡಿಲ್ಲ ಎಂಬುದು ತಿಳಿದು ಬಂದಿದೆ..
ఈ వార్తకు ఎన్టీవీ కి ఎలాంటి సంబంధం లేదు, ఇది ఫేక్ న్యూస్ ,ఎన్ టీవీ పేరుతో ఇలాంటి ఫేక్ న్యూస్ లు క్రియేట్ చేసే వారిపై చట్టపరమైన చర్యలు తీసుకోబడతాయి.@BJP4Telangana @BRSparty @INCTelangana @revanth_anumula pic.twitter.com/u4il1xZa4H
— Chilukuri Srinivas Rao 🇮🇳 (@Itsmechilukuri) November 14, 2023
ಇನ್ನು ಈ ಕುರಿತು ಮಾಧ್ಯಮಗಳ ವರದಿ ಆಗಿವೆಯೇ ಎಂದು ಪರಿಶೀಲನೆ ನಡೆಸಿದಾಗ ಈ ರೀತಿಯ ಯಾವುದೇ ಸುದ್ದಿಯನ್ನು ಪ್ರಕಟಿಸಿಲ್ಲ.
This is not a #Way2News story. Some miscreants are spreading misinformation using our logo and the ‘attached post’ has gone viral. We confirm that this has not been published by us. pic.twitter.com/wapPITfxPK
— Fact-check By Way2News (@way2newsfc) November 14, 2023
ಈ ಕುರಿತು ಸುದ್ದಿ ಮಾಡಿದ್ದ NTV ತೆಲುಗು ಡಿಜಿಟಲ್ ಮ್ಯಾನೇಜರ್ ಟ್ವೀಟ್ ಮೂಲಕ NTV ಹೆಸರಿನ ವೈರಲ್ ಸ್ಕ್ರೀನ್‌ಶಾಟ್ ನಕಲಿ ಎಂದು ಖಚಿತಪಡಿಸಿದ್ದಾರೆ. ವೇ 2 ನ್ಯೂಸ್ ತನ್ನ ಲೋಗೋವನ್ನು ಬಳಸಿಕೊಂಡು ನಕಲಿ ವರದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ : Fact Check | ಮಲೇಷ್ಯಾ ಏರ್‌ಲೈನ್ಸ್ ವಿಮಾನ MH370 ವಿಡಿಯೋ ಸೋರಿಕೆ ಎಂದು ಹಳೆಯ ವಿಡಿಯೋ ಹಂಚಿಕೆ
ವಿಡಿಯೋ ನೋಡಿ : Fact Check | ರಾಷ್ಟ್ರಪತಿ ಸೇರಿದಂತೆ ಗಣ್ಯರನ್ನು ಪ್ರಧಾನಿ ಮೋದಿ ಕಡೆಗಣಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.