ಸಾಮಾಜಿಕ ಜಾಲತಾಣದಲ್ಲಿ “ನಾಪತ್ತೆಯಾಗಿರುವ ಮಲೇಷ್ಯಾ ಏರ್‌ಲೈನ್ಸ್ ವಿಮಾನ MH370 ನ ಕೊನೆಯ ಕ್ಷಣದ ದೃಶ್ಯಾವಳಿಗಳು ಸೋರಿಕೆಯಾಗಿದೆ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಸಾಕಷ್ಟು ಮಂದಿ ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದು. ಈ ವಿಡಿಯೋದಲ್ಲಿ ಅಪಘಾತಕ್ಕೆ ಒಳಗಾದವರ ಕುರಿತು ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಆದರೆ ಈ MH370 ವಿಮಾನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಮಂದಿ ಇದೊಂದು ನಕಲಿ ವಿಡಿಯೋ ಈ ರೀತಿಯ ವಿಡಿಯೋ ವಿಮಾನ ಅಪಘಾತಕ್ಕೆ ಒಳಗಾದಾಗಿನಿಂದಲೂ ಹರಿದಾಡುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದರು. ಹೀಗಾಗಿ ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಈ ವಿಡಿಯೋ ಕುರಿತು ನೈಜ ವಿಚಾರ ಬಹಿರಂಗಗೊಂಡಿದೆ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿರುವ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಇದೊಂದು VFX ( Visual Effects ) ವೀಡಿಯೋವಾಗಿದ್ದು, ಇದರಲ್ಲಿ ಹಲವು ರೀತಿಯ ಗ್ರಾಫಿಕ್ಸ್‌ಗಳನ್ನು ಬಳಕೆ ಮಾಡಲಾಗಿದೆ ಎನ್ನಲಾಗಿದೆ. ಈ ವಿಡಿಯೋವಿನ ಹಿನ್ನೆಲೆಯಲ್ಲಿ ಮೋಡಗಳು ಸ್ಥಿರವಾಗಿರುವದನ್ನು ಕಾಣಬಹುದಾಗಿದೆ. ಹಾಗಾಗಿ ಇದು ಗ್ರಾಫಿಕ್ಸ್ ವಿಡಿಯೋ ಎಂಬುದು ಸ್ಪಷ್ಟವಾಗಿದೆ.
ಇನ್ನು ಈ ವೀಡಿಯೋ 2014 ರಿಂದ ಸಮಾಜಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೇ ರೀತಿಯ ಹಲವು ವಿಡಿಯೋಗಳು MH370 ವಿಮಾನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ಆದರೆ ಅವುಗಳು ಯಾವುದೂ MH370 ವಿಮಾನಕ್ಕೆ ಸಂಬಂಧಿಸದ್ದಲ್ಲ ಎಂದು ಈ ಹಿಂದೆ ವರದಿಯಾಗಿತ್ತು. ಇನ್ನು ಈ ವೈರಲ್ ವಿಡಿಯೋ ಕೂಡ ನಕಲಿ ಎಂದು ಫ್ಯಾಕ್ಟ್‌ಲೀ ವರದಿ ಮಾಡಿದೆ.
ಇದನ್ನೂ ಓದಿ : Fact Check | ರಾಷ್ಟ್ರಪತಿ ಸೇರಿದಂತೆ ಗಣ್ಯರನ್ನು ಪ್ರಧಾನಿ ಮೋದಿ ಕಡೆಗಣಿಸಿದ್ದಾರೆ ಎಂಬುದು ಸುಳ್ಳು
ವಿಡಿಯೋ ನೋಡಿ : Fact Check | ರಾಷ್ಟ್ರಪತಿ ಸೇರಿದಂತೆ ಗಣ್ಯರನ್ನು ಪ್ರಧಾನಿ ಮೋದಿ ಕಡೆಗಣಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.