Fact Check | ರಾಷ್ಟ್ರಪತಿ ಸೇರಿದಂತೆ ಗಣ್ಯರನ್ನು ಪ್ರಧಾನಿ ಮೋದಿ ಕಡೆಗಣಿಸಿದ್ದಾರೆ ಎಂಬುದು ಸುಳ್ಳು

“ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧನಕರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಶುಭಾಶಯಗಳನ್ನು ಪ್ರಧಾನಿ ನರೇಂದ್ರ ಮೋದಿ ಕಡೆಗಣಿಸಿದರು.” ಎಂದು ಸಾಮಜಿಕ ಜಾಲತಾಣದಲ್ಲಿ ವಿಡಿಯೋವೊಂದು ಮತ್ತು ಕೆಲವೊಂದು ಫೋಟೋಗಳು ವೈರಲ್‌ ಆಗುತ್ತಿದೆ.

ಈ ಕುರಿತು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದು, ಪ್ರಧಾನಿ ಮೋದಿ ಅವರ ನಡೆಗೆ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಈ ರೀತಿಯಾಗಿ ನಡೆದುಕೊಂಡರೆ ಎಂದು ಸತ್ಯ ಶೋಧನೆ ನಡೆಸಿದಾಗ ಈ ವಿಡಿಯೋ ಮತ್ತು ಫೋಟೋದಲ್ಲಿನ ಸತ್ಯ ಸಂಗತಿ ಬಹಿರಂಗಗೊಂಡಿದೆ.

ಫ್ಯಾಕ್ಟ್‌ಚೆಕ್‌

ಈ  ವೈರಲ್‌ ವಿಡಿಯೋ ಮತ್ತು ಫೋಟೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಇದು 6 ಡಿಸೆಂಬರ್ 2023 ರಂದು ಸೆರೆ ಹಿಡಿದ ವಿಡಿಯೋ ಎಂದು ತಿಳಿದು ಬಂದಿದೆ. ಇದು ಡಾ. ಬಿ.ಆರ್ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಂಜಲಿ ಸಲ್ಲಿಸಲು ಪ್ರಧಾನಿ ಮೋದಿ ಮತ್ತು ಇತರ ನಾಯಕರು ನವದೆಹಲಿಯ ಹೊಸ ಸಂಸತ್ ಭವನದಲ್ಲಿ ಒಂದಾಗಿ ಕಾಣಿಸಿಕೊಂಡಿರುವ ಸಂದರ್ಭದ್ದಾಗಿದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಲೋಕಸಭಾ ಸ್ಪೀಕರ್ ಮಾಧ್ಯಮಗಳಿಗೆ ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳಲು ಅನುವು ಮಾಡಿ ಕೊಡುತ್ತಿರುವುದನ್ನು ಸಂಪೂರ್ಣ ವಿಡಿಯೋದಲ್ಲಿ ಕಾಣಬಹುದು. ಆದರೆ ಪ್ರಧಾನಿ ಮೋದಿ ಅವರು ಮೊದಲು ತೆರಳಿದರು,

ಈ ವೇಳೆ ಅವರು ಬೇಗ ನಮಸ್ಕರಿಸಿ ಮುಂದೆ ತೆರಳುತ್ತಾರೆ.. ಇದೇ ಸಂದರ್ಭದಲ್ಲಿ ತೆಗೆಯಲಾದ ಫೋಟೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ : Fact Check: ಶಬರಿಮಲೆಯ ವಾವರ್ ಮಸೀದಿಯೊಳಗಿನ ಬೋರ್ಡ್‌ನಲ್ಲಿ ಅನ್ಯ ದೇವರನ್ನು ಪೂಜಿಸಬೇಡಿ ಎಂದು ಬರೆಯಲಾಗಿಲ್ಲ


ಈ ವಿಡಿಯೋ ನೋಡಿ : Fact Check: ಶಬರಿಮಲೆಯ ವಾವರ್ ಮಸೀದಿಯೊಳಗಿನ ಬೋರ್ಡ್‌ನಲ್ಲಿ ಅನ್ಯ ದೇವರನ್ನು ಪೂಜಿಸಬೇಡಿ ಎಂದು ಬರೆಯಲಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *