Fact Check | ದೇಣಿಗೆಯ ಹಣವನ್ನು ಭಾರತೀಯ ಸೇನೆ ಶಸ್ತ್ರಾಸ್ತ್ರ ಖರೀದಿಗೆ ಬಳಸುತ್ತಿದೆ ಎಂಬುದು ಸುಳ್ಳು

“ಭಾರತೀಯ ಸೇನೆy AFBCWF ಬ್ಯಾಂಕ್ ಖಾತೆಗೆ ನೀಡಿದ ದೇಣಿಗೆಯನ್ನು ಭಾರತೀಯ ಸೇನೆಯು ಸೇನೆ ಮತ್ತು ಅರೆಸೇನಾ ಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಿಕೊಳ್ಳಲಾಗುತ್ತಿದೆ” ಎಂಬ ಸುದ್ದಿಯೊಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಇದನ್ನೇ ನಿಜವೆಂದು ಹಲವಾರು ಮಂದಿ ನಂಬಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಸುಳ್ಳು
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಸುಳ್ಳು

ಇನ್ನು ಇದೇ ಸುದ್ದಿಯ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ ಸಾಕಷ್ಟು ಮಂದಿ ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಸುದ್ದಿಯ ಕುರಿತು ಹಲವಾರು ಸುದ್ದಿ ಸಂಸ್ಥೆಗಳು ಈ ಹಿಂದೆಯೇ ಫ್ಯಾಕ್ಟ್‌ಚೆಕ್‌ ನಡೆಸಿ ಸತ್ಯ ತಿಳಿಸಿದ್ದರು ಇಂದಿಗೂ ಸಾಕಷ್ಟು ಮಂದಿ ಇದನ್ನೆ ನಿಜವೆಂದು ನಂಬಿ ಶೇರ್‌ ಮಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಆದರೆ ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ನಿಜ ಸುದ್ದಿ ಮತ್ತೊಮ್ಮೆ ಬಯಲಾಗಿದೆ. ಅಸಲಿಗೆ ಭಾರತೀಯ ಸೇನೆಯು ರಕ್ಷಣಾ ಸಚಿವಾಲಯಕ್ಕಾಗಿ ನಡೆಸುತ್ತಿರುವ AFBCWF ಗೆ ನೀಡಿದ ದೇಣಿಗೆಗಳನ್ನು ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಗಾಯಗೊಂಡ, ಅಂಗವೈಕಲ್ಯಕ್ಕೆ ಒಳಪಟ್ಟ ಅಥವಾ ಸಾವನ್ನಪ್ಪಿದ ಸೈನಿಕರ ಕುಟುಂಬಗಳಿಗೆ ಹಣಕಾಸಿನ ನೆರವು ಅಥವಾ ಅನುದಾನವನ್ನು ನೀಡಲು ಬಳಸಲಾಗುತ್ತದೆ.

AFBCWF ನ ವೆಬ್‌ಸೈಟ್‌ನಲ್ಲಿ ಉಲ್ಲೇಖವಾಗಿರುವ ಮಾಹಿತಿ
                AFBCWF ನ ವೆಬ್‌ಸೈಟ್‌ನಲ್ಲಿ ಉಲ್ಲೇಖವಾಗಿರುವ ಮಾಹಿತಿ

ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈ AFBCWF  ದೇಣಿಗೆಯ ಕುರಿತು ಹಬ್ಬುತ್ತಿದ್ದ ಸುಳ್ಳು ಸುದ್ದಿಯ ಕುರಿತು ಸ್ವತಃ ಭಾರತೀಯ ಸೇನೆ ಎಡಿಜಿ ಪಿಐ ಅವರು 26 ಆಗಸ್ಟ್‌ 2016ರಂದು ಟ್ವೀಟ್‌ ಮಾಡಿ “ಯಾರು ಕೂಡ ಸುಳ್ಳು ಸುದ್ದಿಗಳನ್ನು ನಂಬಬೇಡಿ AFBCWF  ಗೆ ಬರು ದೇಣಿಗೆಗಳನ್ನು ಭಾರತೀಯ ಸೇನೆಯಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಗಾಯಗೊಂಡ ಅಥವಾ ಅಸುನೀಗಿದ ಸೈನಿಕ ಕುಟುಂಬಗಳಿಗೆ ಅನುದಾನ ನೀಡುವುದಾಗಿದೆ ಎಂದು ಸ್ಪಷ್ಟ ಪಡಿಸಿದ್ದರು.

ಇಷ್ಟು ಮಾತ್ರವಲ್ಲದೆ ಈ AFBCWF  ದೇಣಿಗೆಯಿಂದ ಭಾರತೀಯ ಸೇನೆ ಮತ್ತು ಅರಸೇನೆಗೆ ಯಾವುದೇ ರೀತಿಯಾದ ಆಯುಧಗಳನ್ನು ಖರೀದಿ ಮಾಡಲಾಗುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.


ಇದನ್ನೂ ಓದಿ : ಅಜಿತ್ ಹನುಮಕ್ಕನವರ್ ಹೇಳಿದ್ದು ಸುಳ್ಳು: ಟಿಪ್ಪು ಖಡ್ಗದ ಮೇಲೆ ‘ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ’ ಎಂದು ಬರೆದಿಲ್ಲ


ವಿಡಿಯೋ ನೋಡಿ : ಅಜಿತ್ ಹನುಮಕ್ಕನವರ್ ಹೇಳಿದ್ದು ಸುಳ್ಳು: ಟಿಪ್ಪು ಖಡ್ಗದ ಮೇಲೆ ‘ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ’ ಎಂದು ಬರೆದಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *