ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯೆ ರಾಮಮಂದಿರ ಅರ್ಚಕರಾಗಿ ನೇಮಕಗೊಂಡಿರುವ ಮೋಹಿತ್ ಪಾಂಡೆ ಕುರಿತು ವಿಡಿಯೋ, ಫೋಟೋ ಹರಿಬಿಡಲಾಗಿದೆ. ಅರ್ಚಕ ಮೋಹಿತ್ ಪಾಂಡೆ ಮಹಿಳೆಯೊಬ್ಬರ ಜೊತೆ ಅಶ್ಲೀಲ ಭಂಗಿಯಲ್ಲಿದ್ದು, ಚುಂಬಿಸುತ್ತಿರುವ ವಿಡಿಯೋ ಮತ್ತು ಫೋಟೋ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿದ್ದಾರೆ.
ಈ ಫೋಟೋದಲ್ಲಿನ ಅಸಲಿ ವಿಚಾರ ಕುರಿತು ಪರಿಶೀಲನೆ ನಡೆಸದೆ ಹಲವಾರು ಮಂದಿ ಈ ಫೋಟೋವನ್ನು ಶೇರ್ ಮಾಡುವುದರ ಜೊತೆಗೆ ವಿವಿಧ ಆಡಳಿತರೂಢ ಬಿಜೆಪಿಯನ್ನೂ ಇಲ್ಲಿ ಟೀಕಿಸಲಾಗುತ್ತಿದೆ. ಹಾಗಾಗಿ ಈ ವಿಚಾರ ರಾಜಕೀಯವಾಗಿಯೂ ಕೂಡ ಸದ್ದು ಮಾಡುತ್ತಿದೆ. ಅದರಲ್ಲೂ ಉತ್ತರ ಭಾರತದ ಕೆಲ ರಾಜಕೀಯ ಪಕ್ಷಗಳ ಸಾಮಾಜಿಕ ಜಾಲತಾಣದ ಹಲವು ಖಾತೆಗಳಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್
ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋಗೂ ರಾಮಮಂದಿರ ಅರ್ಚಕರಾಗಿ ನೇಮಕಗೊಂಡಿರುವ ಮೋಹಿತ್ ಪಾಂಡೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸೈಬರ್ ಕ್ರೈಮ್ ಪೊಲೀಸರು ವಿಡಿಯೋ ಸತ್ಯಾಸತ್ಯತೆ ಪರಿಶೀಲಿಸಿ ಇದೊಂದು ನಕಲಿ ಫೋಟೋ ಎಂದಿದ್ದಾರೆ. ಮತ್ತು ಸುಳ್ಳು ಸುದ್ದಿಯನ್ನು ಹಬ್ಬಿಸಿದ ಕಾರಣಕ್ಕೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
https://twitter.com/sank80551/status/1734384419350450230
ಇನ್ನು ಗುಜರಾತ್‌ನ ಕಾಂಗ್ರೆಸ್ ನಾಯಕ ಹಿತೇಂದ್ರ ಪಿತಾಡಿಯಾ ಇದೇ ಫೋಟೋವನ್ನು ಹಂಚಿಕೊಂಡಿದ್ದು, ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಹಿತೇಂದ್ರ ಪಿತಾಡಿಯಾ ವಿರುದ್ಧ ಐಪಿಸಿ ಸೆಕ್ಷನ್ 469, 509, ಐಪಿಸಿ 295ಎ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : Fact Check | ಶಿವಕಾಶಿಯಲ್ಲಿ ಲಕ್ಷ ಶಿವಲಿಂಗಗಳು ಪತ್ತೆಯಾಗಿವೆ ಎಂದು ಸಿರ್ಸಿಯಲ್ಲಿನ ಸಹಸ್ರಲಿಂಗ ವಿಡಿಯೋ ಹಂಚಿಕೆ
ವಿಡಿಯೋ ನೋಡಿ : Fact Check | ಶಿವಕಾಶಿಯಲ್ಲಿ ಲಕ್ಷ ಶಿವಲಿಂಗಗಳು ಪತ್ತೆಯಾಗಿವೆ ಎಂದು ಸಿರ್ಸಿಯಲ್ಲಿನ ಸಹಸ್ರಲಿಂಗ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.