“ಈ ವಿಡಿಯೋ ನೋಡಿ.. ಸೋಮಾಲಿಯಾದ ಒಬ್ಬ ಪ್ರಜೆ ಜಪಾನ್‌ನಲ್ಲಿ ಮಹಿಳೆಯರಿಗೆ ಹೆಚ್ಚು ಹೆಚ್ಚು ಕಿರುಕುಳ ನೀಡುತ್ತಿದ್ದ. ಈತನನ್ನು ಬಂಧಿಸಲು ತೆರಳಿದ ಪೊಲೀಸರೊಂದಿಗೆ ಈತ ವಾಗ್ವಾದ ನಡೆಸಿದ್ದಾನೆ. ಬಳಿಕ ಈತನನ್ನು ಜಪಾನ್ ಸರ್ಕಾರ ಗಡಿಪಾರು ಮಾಡಿದೆ.” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಸಾಕಷ್ಟು ಮಂದಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ನಡೆಸಲು ಮುಂದದಾಗ ಇದೇ ರೀತಿಯ ಹಲವು ವಿಡಿಯೋಗಳು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಕಾರುವ ರೀತಿಯ ಹಲವು ಸುಳ್ಳು ಅಪಾದನೆಗಳೊಂದಿಗೆ ಇರುವ ವಿಡಿಯೋಗಳು ಪತ್ತೆಯಾಗಿವೆ. ಇದಕ್ಕೆ ಪ್ರತಿಯಾಗಿ ಬೇರೆ ಬೇರೆ ಮತಗಳ ವಿರುದ್ಧದ ಸುಳ್ಳು ಹೇಳಿಕೆಯುಳ್ಳ ವಿಡಿಯೋಗಳು ಕೂಡ ಕಂಡು ಬಂದಿವೆ. ಆದರೆ ಈ ವಿಡಿಯೋವನ್ನು ಹೆಚ್ಚು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್
ಈ ವೀಡಿಯೊ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಈ ಸಂಪೂರ್ಣ ವಿಡಿಯೋ ಡಿಸೆಂಬರ್ 2019 ರದ್ದು ಎಂದು BOOM ವರದಿ ಮಾಡಿರುವುದು ಕಂಡು ಬಂದಿದೆ. ಜಪಾನ್‌ನಲ್ಲಿ ಅಕ್ರಮವಾಗಿ ತಂಗಿದ್ದಕ್ಕಾಗಿ ಆಫ್ರಿಕನ್ ವ್ಯಕ್ತಿಯನ್ನು ಗಡೀಪಾರು ಮಾಡಲಾಗಿದೆ ಎಂದು ಹಲವು ವರದಿಗಳು ಕಂಡು ಬಂದಿವೆ. ವಿಡಿಯೋದಲ್ಲಿನ ಬರಹದಂತೆ ಪೊಲೀಸರಿಂದ ಬಂಧಿಸಲ್ಪಡುತ್ತಿರುವ ಈ ವ್ಯಕ್ತಿ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಇದೊಂದು ಸುಳ್ಳು ಆಪಾದನೆಯಾಗಿದೆ.
ಇನ್ನು ಈ ವಿಡಿಯೋವನ್ನು ಇದೇ ವರ್ಷ ಅಂದ್ರೆ ಜೂನ್ 6, 2023 ರಂದು ಸಹ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಈ ವಿಡಿಯೋ ಕುರಿತು ಸಂಪೂರ್ಣವಾದ ಮಾಹಿತಿ ಲಭ್ಯವಾಗಿದ್ದು, ವಿಡಿಯೋದಲ್ಲಿ ಪೊಲೀಸರು ಈತನನ್ನು ಬಂಧಿಸಲು ಇರುವ ಕಾರಣದ ಮಾಹಿತಿಯು ಲಭ್ಯವಾಗಿದೆ.
ಅದರಲ್ಲಿ ಎಲ್ಲಿಯೂ ಕೂಡ ಈತ ಮಹಿಳೆಯರಿಗೆ ಕಿರುಕುಳ ನೀಡದ್ದಕ್ಕೆ ಗಡಿಪಾರಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ :Fact Check | ಶಿವಕಾಶಿಯಲ್ಲಿ ಲಕ್ಷ ಶಿವಲಿಂಗಗಳು ಪತ್ತೆಯಾಗಿವೆ ಎಂದು ಸಿರ್ಸಿಯಲ್ಲಿನ ಸಹಸ್ರಲಿಂಗ ವಿಡಿಯೋ ಹಂಚಿಕೆ
ವಿಡಿಯೋ ನೋಡಿ : Fact Check | ಶಿವಕಾಶಿಯಲ್ಲಿ ಲಕ್ಷ ಶಿವಲಿಂಗಗಳು ಪತ್ತೆಯಾಗಿವೆ ಎಂದು ಸಿರ್ಸಿಯಲ್ಲಿನ ಸಹಸ್ರಲಿಂಗ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.