ರಾಮ ಮಂದಿರದ ಉದ್ಘಾಟನೆಯ ಬಳಿಕ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ರಾಮ ಭಜನೆ ಮಾಡಲಾಗುತ್ತಿದೆ. ಮುಸ್ಲಿಂ ರಾಷ್ಟ್ರಗಳಲ್ಲಿಯೂ ಸಹ ಶ್ರೀ ರಾಮನ ಭಜನೆಯನ್ನು ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದ ಹಲಾವರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇತ್ತೇಚೆಗೆ, ದುಬೈನ ಮಸೀದಿಯೊಂದರಲ್ಲಿ ಮುಸ್ಲಿಂ ಮಹಿಳೆಯರು ರಾಮ ಭಜನೆ ಹಾಡುತ್ತಿರುವ ವಿಡಿಯೋ. ಇದು ಭಾರತದಲ್ಲಿ ನಡೆದಿದ್ದರೆ ಇಸ್ಲಾಂ ಅಪಾಯದಲ್ಲಿದೆ ಎನ್ನುತ್ತಿದ್ದರು. ಎಂದು ಪ್ರತಿಪಾದಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಈ ವಿಡಿಯೋವನ್ನು ದುಬೈನ ಮಸೀದಿಯಲ್ಲಿ ತೆಗೆಯಲಾಗಿಲ್ಲ, ಇದು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವ ಪ್ರಶಾಂತಿ ನಿಲಯಂನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದೆ. ಶ್ರೀ ಸತ್ಯ ಸಾಯಿಬಾಬಾ ಅವರ ಮಹಾಸಮಾಧಿಯ ಮುಂದೆ ಈ ಕಾರ್ಯಕ್ರಮ ನಡೆದಿದೆ. ವಿಡಿಯೋದಲ್ಲಿರುವ ಕೆಲವು ಭಕ್ತರು ಬಹ್ರೇನ್, ಇರಾನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸೇರಿದವರಾಗಿದ್ದಾರೆ.ಈ ವಿಡಿಯೋವನ್ನು ಶ್ರೀ ಸತ್ಯ ಸಾಯಿ ಅಧಿಕೃತ ಯೂಟೂಬ್ ಚಾನೆಲ್‌ನಿಂದ ಹಂಚಿಕೊಳ್ಳಲಾಗಿದ್ದು ವೀಡಿಯೊದ ವಿವರಣೆಯಲ್ಲಿ, “ಸರ್ವ ಧರ್ಮ ಸ್ವರೂಪ ಸಾಯಿ” – ಅರೇಬಿಯನ್ ಗಾಯಕವೃಂದ – 10 ಜುಲೈ 2012″. “ಮಧ್ಯಪ್ರಾಚ್ಯ ಮತ್ತು ಗಲ್ಫ್ ದೇಶಗಳನ್ನು ಒಳಗೊಂಡ ಸಾಯಿ ಸಂಘಟನೆಯ ಪ್ರದೇಶ 94 ರ “ಪ್ರಶಾಂತಿ” ತೀರ್ಥಯಾತ್ರೆಯು ಪ್ರಶಾಂತಿ ನಿಲಯವನ್ನು ಇಸ್ಲಾಮಿಕ್ ಉತ್ಸಾಹದಿಂದ ಆವರಿಸಿದೆ. ಬಹ್ರೇನ್, ಇರಾನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನ ಭಕ್ತರು ಪ್ರಶಾಂತಿ ನಿಲಯಂನಲ್ಲಿ ಅರೇಬಿಕ್ ರುಚಿಯನ್ನು ಒದಗಿಸಿದರು. ಎಂದು ಬರೆಯಲಾಗಿದೆ.
ಆದ್ದರಿಂದ ಸಧ್ಯ ದುಬೈನ ಮಸೀದಿಯೊಂದರಲ್ಲಿ ಮುಸ್ಲಿಂ ಮಹಿಳೆಯರು ರಾಮ ಭಜನೆ ಹಾಡುತ್ತಿರುವ ವಿಡಿಯೋ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ವಿವರಣೆ ಸುಳ್ಳು.
ಇದನ್ನು ಓದಿ: Fact Check: ನೆಹರೂರವರು ಬ್ರಿಟೀಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದರು ಎಂಬುದು ಸುಳ್ಳು
ವಿಡಿಯೋ ನೋಡಿ: Fact Check: ಬಿಜೆಪಿ ಕೌನ್ಸಿಲರ್ ಪೋಲಿಸರನ್ನು ತಳಿಸಿದ ವಿಡಿಯೋವನ್ನು ಕಾಂಗ್ರೆಸ್ ಶಾಸಕ ಎಂದು ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ