Fact Check | ಮದರಾಸದಲ್ಲಿ ಭಾರೀ ಶಸ್ತ್ರಾಸ್ತ ಪತ್ತೆ ಎಂದು ಸುಳ್ಳು ಸುದ್ದಿ ಹಬ್ಬಿದ ಕಿಡಿಗೇಡಿಗಳು..!

“ಉತ್ತರ ಪ್ರದೇಶದ ಬಿಜ್ನೋರ್‌ನ ಮದರಾಸ ಮೇಲೆ ನಡೆದ ದಾಳಿಯಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಪತ್ತೆ.!, ಆರು ಧರ್ಮ ಗುರುಗಳನ್ನ ಬಂಧಿಸಲಾಗಿದೆ. ಕಾಳಜಿಯ ಅಂಶವೆಂದರೆ ಎಲ್ಎಂಜಿ ಮಿಷನ್ ಗನ್‌ ಲಭ್ಯತೆ. ಒಂದು ನಿಮಿಷದಲ್ಲಿ 8,000 ಸುತ್ತು ಗುಂಡು ಹಾರಿಸುವ ಸಾಮರ್ಥ್ಯ ಮಷೀನ್ ಗನ್. ಈ ಜನರ ತಯಾರಿಯನ್ನು ಅರ್ಥ ಮಾಡಿಕೊಳ್ಳಿ ಹಿಂದುಗಳೇ.. ಎದ್ದೇಳಿ ಅವರು ನಿಮ್ಮ ಭವಿಷ್ಯವನ್ನು ನಿರ್ಧರಿಸಿದ್ದಾರೆ.”

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಸುಳ್ಳು ಬರಹ
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಸುಳ್ಳು ಬರಹ

“ಮೋದಿ ಹೋರಾಡಲು ತಡವಾಗಿದೆ ಈ ಸತ್ಯವನ್ನು ಪ್ರತಿಯೊಬ್ಬ ಹಿಂದೂ ಸಹೋದರರಿಗೆ ಹಂಚಿಕೊಳ್ಳಿ” ಎಂದು ಬರಹದೊಂದಿಗೆ ಸುಮಾರು 7 ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋಗಳನ್ನು ನೋಡಿದವರು ಇದು ನಿಜವಾದ ಘಟನೆ ಎಂದು ನಂಬುವುದರಲ್ಲಿ ಯಾವುದೇ ರೀತಿಯಾದ ಅನುಮಾನವಿಲ್ಲ. ಆದರೆ ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಅಸಲಿ ಸಂಗತಿಗಳು ಹೊರ ಬಂದಿದೆ.

ಸುಳ್ಳು ಸುದ್ದಿಯನ್ನೇ ನಿಜವವೆಂದು ನಂಬಿ ಸಾಮಾಜಜಿಕ ಜಾಲತಾಣದ ಬಳಕೆದಾರರು ಹಂಚಿಕೊಂಡಿರುವ ಪೋಸ್ಟ್‌ಗಳು
ಸುಳ್ಳು ಸುದ್ದಿಯನ್ನೇ ನಿಜವವೆಂದು ನಂಬಿ ಸಾಮಾಜಜಿಕ ಜಾಲತಾಣದ ಬಳಕೆದಾರರು ಹಂಚಿಕೊಂಡಿರುವ ಪೋಸ್ಟ್‌ಗಳು

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಹಲವು ಫೊಟೋಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಿದಾಗ ಇದೇ ರೀತಿಯ ಹಲವು ಫೋಟೋಗಳು ವಿವಿಧ ರಾಜ್ಯಗಳಲ್ಲಿ ವಿವಿಧ ಘಟನೆಗಳೊಂದಿಗೆ ಹಂಚಿಕೊಂಡಿರುವುದು ಪತ್ತೆಯಾಗಿದೆ. ಇನ್ನು ಹೆಚ್ಚು ಹುಡುಕಿದಾಗ ವೈರಲ್‌ ಫೋಟೋಗಳು ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದ್ದು ಎಂಬುದು ಕೂಡ ತಿಳಿದು ಬಂದಿದೆ.

ಫೋಟೋ :1 ಸೋಫಾ ಸೆಟ್‌ನ ಮೇಲೆ ಮಷಿನ್‌ ಗನ್‌ ಇರುವ ಚಿತ್ರ

ಕೆನಡಾ ಮೂಲದ ವೆಬ್‌ಸೈಟ್‌ನಲ್ಲೂ ಇದೇ ಚಿತ್ರ ಪತ್ತೆಯಾಗಿದೆ.
ಕೆನಡಾ ಮೂಲದ ವೆಬ್‌ಸೈಟ್‌ನಲ್ಲೂ ಇದೇ ಚಿತ್ರ ಪತ್ತೆಯಾಗಿದೆ. 

ಗೂಗಲ್‌ ರಿವರ್ಸ್ ಇಮೇಜ್ ಈ ಚಿತ್ರವನ್ನು ಹುಡುಕಿದಾಗ, ‘Tumblr’ ವೆಬ್‌ಸೈಟ್‌ನಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಈ ಫೋಟೋವನ್ನು 03 ಮಾರ್ಚ್ 2019 ರಂದು ಪ್ರಕಟಿಸಲಾಗಿದೆ. ಇದೇ ಫೋಟೋ ಕೆನಡಾ ಮೂಲದ ಇ-ಕಾಮರ್ಸ್ ವೆಬ್‌ಸೈಟ್ ‘CanSellAll’ ನಲ್ಲಿ ಪ್ರಾತಿನಿಧಿಕ ಚಿತ್ರವಾಗಿ ಕಂಡುಬಂದಿದ್ದು, ಈ ಫೋಟೋವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸಾಭೀತಾಗಿದೆ.

ಫೋಟೋ : 2 ಮುಸ್ಲಿಂ ಧರ್ಮಗುರುಗಳ ಬಂಧನ

ಮುಸ್ಲಿಂ ಧರ್ಮ ಗುರುಗಳ ಬಂಧನ
ಮುಸ್ಲಿಂ ಧರ್ಮ ಗುರುಗಳ ಬಂಧನ

ಈ ಫೊಟೋದಲ್ಲಿ ಕೆಲ ಮುಸ್ಲಿಂ ಧರ್ಮ ಗುರುಗಳನ್ನು ಬಂಧಿಸಿರುವುದು ನಿಜ. ಆದರೆ ಈ ಪ್ರಕರಣದ ಕುರಿತು ವೈರಲ್‌ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದಾಗ ಉತ್ತರ ಪ್ರದೇಶದ ಶಾಮ್ಲಿ ಪೋಲೀಸರ ಟ್ವೀಟ್ ಕಂಡು ಬಂದಿದೆ.

ಆ  ಟ್ವೀಟ್ ಪ್ರಕಾರ, ಮದರಾಸ ದಾಳಿ ವೇಳೆ ನಕಲಿ ದಾಖಲೆಗಳು ಮತ್ತು ವಿದೇಶಿ ಕರೆನ್ಸಿ ಹಾಗೂ ಮೊಬೈಲ್ ಫೋನ್‌ಗಳು ಪತ್ತೆಯಾದ ಹಿನ್ನಲೆ ಹಲವರುನ್ನು ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ  ಘಟನೆ ಜುಲೈ 2019 ರಲ್ಲಿ ನಡೆದಿದೆ.

ಫೋಟೋ -3 ಮಾರಕಾಸ್ತ್ರಗಳ ವಶ

ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದ ಚಿತ್ರ
ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದ ಚಿತ್ರ

ಫೋಟೋ -4 ಮಾರಕಾಸ್ತ್ರಗಳ ಜೊತೆ ಆರೋಪಿಗಳ ಬಂಧನ 

ಮಾರಕಾಸ್ತ್ರಗಳ ಜೊತೆ ಆರೋಪಿಗ:ಳ ಬಂಧನ
ಮಾರಕಾಸ್ತ್ರಗಳ ಜೊತೆ ಆರೋಪಿಗಳ ಬಂಧನ

ಫೋಟೋ 3 ಮತ್ತು 4 ನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದಾಗ 05 ಮಾರ್ಚ್ 2016 ರಂದು ‘ಗುಜರಾತ್ ಹೆಡ್‌ಲೈನ್’ ಎಂಬ ಸುದ್ದಿ ವೆಬ್‌ಸೈಟ್ ಮಾಡಿದ ಟ್ವೀಟ್‌ನಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ರಾಜ್‌ಕೋಟ್ ಪೊಲೀಸರು ಕುಚಿಯಾದ್‌ನಲ್ಲಿರುವ ಇಂಡಿಯಾ ಪ್ಯಾಲೇಸ್ ಹೋಟೆಲ್ ಮೇಲೆ ದಾಳಿ ನಡೆಸಿದಾಗ ಮಾರಕಾಸ್ತ್ರಗಳ ದಾಸ್ತಾನು ವಶಪಡಿಸಿಕೊಂಡಿದ್ದಾರೆ ಎಂದು ಈ ಲೇಖನ ವರದಿ ಮಾಡಿದೆ.

ಗುಜರಾತ್‌ ಹೆಡ್‌ಲೈನ್‌ ವರದಿ
                        ಗುಜರಾತ್‌ ಹೆಡ್‌ಲೈನ್‌ ವರದಿ

ದಿ ಟೈಮ್ಸ್ ಆಫ್ ಇಂಡಿಯಾ’ ಲೇಖನದ ಪ್ರಕಾರ, ರಾಜ್‌ಕೋಟ್ ಪೊಲೀಸರು ಈ ದಾಳಿಯಲ್ಲಿ ಕತ್ತಿಗಳು ಮತ್ತು ಚಾಕುಗಳು ಸೇರಿದಂತೆ 257 ಮಾರಕ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತು ನಾಲ್ವರು ಆರೋಪಿಗಳನ್ನು ಕೂಡ ಬಂಧಿಸಿದ್ದಾರೆ.

ದ ಟೈಮ್ಸ್‌ ಆಫ್‌ ಇಂಡಿಯಾದ ಲೇಖನ
                                       ದ ಟೈಮ್ಸ್‌ ಆಫ್‌ ಇಂಡಿಯಾದ ಲೇಖನ

ಹೀಗೆ ಹಲವು ಫೋಟೋಗಳು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದ್ದು, ಸಾಕಷ್ಟು ಮಂದಿ ಮುಸ್ಲಿಂ ಸಮುದಾಯದ ಮೇಲೆ ದ್ವೇಷವನ್ನು ಹುಟ್ಟಿಸುವ ಸಲುವಾಗಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುತ್ತಿರುವುದು ಸಾಬೀತಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮೊದಲು ಎಚ್ಚರ ವಹಿಸಿ


ಇದನ್ನೂ ಓದಿ : Fact Check: ನೆಹರೂರವರು ಬ್ರಿಟೀಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದರು ಎಂಬುದು ಸುಳ್ಳು


ಈ ವಿಡಿಯೋ ನೋಡಿ : Fact Check: ನೆಹರೂರವರು ಬ್ರಿಟೀಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *