“ಬೆಂಗಾಳಿ ಭಾಷೆ ಪಶ್ಚಿಮ ಆಫ್ರಿಕಾದಲ್ಲಿನ ಸಿಯೆರಾ ಲಿಯೋನ್ ಅಧಿಕೃತ ಭಾಷೆಯಾಗಿದೆ. ಈ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕು” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುರಂತವೆಂದರೇ ಈ ಸುದ್ದಿಯನ್ನು ಪರಿಶೀಲನೆ ನಡೆಸದೇ ಹಲವು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಈಗ ಮಾಧ್ಯಮಗಳ ಮೇಲಿ ವಿಶ್ವಾಸರ್ಹತೆಯ ಬಗ್ಗೆ ಪಶ್ನೆಗಳು ಮೂಡುವಂತೆ ಮಾಡಿದೆ.
ನ್ಯೂಸ್ 18, ಆಜ್ ತಕ್, ಢಾಕಾ ಟ್ರಿಬ್ಯುನ್ ದ ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿ ಸಂಸ್ಥೆಗಳೆ ಈ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದು, ಇದನ್ನೇ ಸಾಕಷ್ಟು ಜನ ನಾಗರಿಕರು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಈ ಜನ ದಾರಿ ತಪ್ಪಲು ಪ್ರಮುಖ ರಾಷ್ಟ್ರೀಯ ಮಾದ್ಯಮಗಳೇ ನೇರ ಕಾರಣ ಎಂದರೆ ತಪ್ಪಾಗುವುದಿಲ್ಲ. ಹಾಗಿದ್ದರೆ ವಾಸ್ತವ ಏನು ಎಂಬುದನ್ನು ಈ ಲೆಖನದಲ್ಲಿ ನೋಡೋಣ ಬನ್ನಿ..
ಫ್ಯಾಕ್ಟ್‌ಚೆಕ್
ಅಸಲಿಗೆ ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಕೆಲವೊಂದು ಕೀ ವರ್ಡ್ಸ್‌ಗಳನ್ನು ಗೂಗಲ್‌ನಲ್ಲಿ ಪರಿಶೀಲಿಸಲಾಯಿತು ಮತ್ತು ಕೆಲವೊಂದು ಪೋಸ್ಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು.. ಈ ವೇಳೆ ಇದೇ ರೀತಿ ಹಲವು ಸುದ್ದಿಗಳು ಕಂಡು ಬಂದವು ಹೀಗಾಗಿ ನಾವು ಸಿಯೆರಾ ಲಿಯೋನ್‌ನ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದ್ದೇವು. ಈ ವೆಬ್‌ಸೈಟ್‌ನಲ್ಲಿ ವಿವಿಧ ಜನಾಂಗೀಯ ಗುಂಪುಗಳ ಕಾರಣದಿಂದಾಗಿ ದೇಶದಲ್ಲಿ ಹಲವಾರು ಭಾಷೆಗಳು ಅಸ್ತಿತ್ವದಲ್ಲಿದೆ ಎಂಬ ಮಾಹಿತಿ ಲಭ್ಯವಾಯಯಿತು.
ಆದರೆ 2004 ರ ಸಿಯೆರಾ ಲಿಯೋನ್ ಜನಗಣತಿಯ ಪ್ರಕಾರ, ಸಿಯೆರಾ ಲಿಯೋನ್‌ನಲ್ಲಿ 18 ಪ್ರಾಥಮಿಕ ಭಾಷೆಗಳಿವೆ ಎಂದು ಲಾಭರಹಿತ ಸಂಸ್ಥೆಯಾದ ಟ್ರಾನ್ಸ್‌ಲೇಟರ್ಸ್ ವಿದೌಟ್ ಬಾರ್ಡರ್ಸ್ ವೆಬ್‌ಸೈಟ್ ಹಂಚಿಕೊಂಡ ಲೇಖನವು ಇದನ್ನೇ ಉಲ್ಲೇಖಿಸಿದೆ. ಸರಿಸುಮಾರು 97% ಜನಸಂಖ್ಯೆಯು ಅರ್ಥಮಾಡಿಕೊಳ್ಳುವ ಮತ್ತು ಮಾತನಾಡುವ ಮುಖ್ಯ ಭಾಷೆ ಕ್ರಿಯೋವಾಗಿದೆ.
ಇದರ ಜೊತೆಗೆ ಮೆಂಡೆ ಮತ್ತು ಟೆಮ್ನೆ ಎಂಬ ಎರಡು ಭಾಷೆಗಳು ಇತರೆ ಪ್ರಾಥಮಿಕ ಭಾಷೆಗಳಾಗಿವೆ. ಇನ್ನು ಸಿಯೆರಾ ಲಿಯೋನ್‌ನ ಸರ್ಕಾರಿ ಕಚೇರಿ, ಶಿಕ್ಷಣ, ಮತ್ತು ಉದ್ಯಮದಲ್ಲಿ ಇಂಗ್ಲೀಷ್ ಭಾಷೆಯನ್ನು ಬಳಸಲಾಗುತ್ತಿದೆ. ಇನ್ನು ಬೆಂಗಾಳಿ ಭಾಷೆಯ ಕುರಿತು ಈ ಮಾಹಿತಿಯಲ್ಲಿ ಯಾವುದೇ ರೀತಿಯ ಉಲ್ಲೇಖಗಳು ಕಂಡು ಬಂದಿಲ್ಲ. ಇನ್ನು ಇಲ್ಲಿ ಕಡಿಮೆ ಮಾತನಾಡುವ ಭಾಷೆ ಎಂದರೆ ಯಲುಂಕ ಎಂಬುದು ತಿಳಿದು ಬಂದಿದೆ. ಈ ಭಾಷೆಯನ್ನು ಪ್ರಥಮ ಆದ್ಯತೆಯಾಗಿ ಸುಮಾರು 0.68% ಮತ್ತು ಎರಡನೇ ಆದ್ಯತೆಯಾಗಿ ಮಾತನಾಡುತ್ತಾರೆ. ಈ ಕುರಿತು ಬಾಂಗ್ಲಾದೇಶದ ರೂಮರ್ ಸ್ಕ್ಯಾನರ್ ಬಾಂಗ್ಲಾದೇಶ್ ಕೂಡ ವರದಿ ಮಾಡಿದೆ.
ಇನ್ನು ವೈರಲ್ ಸುದ್ದಿಯ ಕುರಿತು ದ ಕ್ವಿಂಟ್‌ಗೆ ಪ್ರತಿಕ್ರಿಯೆ ನೀಡಿರುವ ರಾಜಕೀಯ ವಿಜ್ಞಾನದ ಸಹ ಪ್ರಾಧ್ಯಾಪಕಿ ಮತ್ತು ಎಮರ್ಸನ್ ಪ್ರಿಸನ್ ಇನಿಶಿಯೇಟಿವ್‌ನ ನಿರ್ದೇಶಕಿ ಮ್ನೀಶಾ ಗೆಲ್‌ಮನ್ ಅವರು ಕೂಡ ಯೆರಾ ಲಿಯೋನ್‌ನಲ್ಲಿ ಬಂಗಾಳಿ ಅಧಿಕೃತ ಭಾಷೆಯಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : Fact Check | ಮದರಾಸದಲ್ಲಿ ಭಾರೀ ಶಸ್ತ್ರಾಸ್ತ ಪತ್ತೆ ಎಂದು ಸುಳ್ಳು ಸುದ್ದಿ ಹಬ್ಬಿದ ಕಿಡಿಗೇಡಿಗಳು..!
ಈ ವಿಡಿಯೋ ನೋಡಿ :Fact Check | ಮದರಾಸದಲ್ಲಿ ಭಾರೀ ಶಸ್ತ್ರಾಸ್ತ ಪತ್ತೆ ಎಂದು ಸುಳ್ಳು ಸುದ್ದಿ ಹಬ್ಬಿದ ಕಿಡಿಗೇಡಿಗಳು..!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ