“ಈ ವಿಡಿಯೋ ನೋಡಿ ಹಿಂದೂ ದೇವಾಲಯದಲ್ಲಿ ಅರಬ್ ಪುರುಷರು ನೃತ್ಯ ಮಾಡುತ್ತಿದ್ದಾರೆ.. ಅರಬ್‌ನಲ್ಲೂ ಬದಲಾವಣೆ ಆಗುತ್ತಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಮೂಲಕ ಅರಬ್‌ನ ಜನರು ಹಿಂದೂ ಧರ್ಮವನ್ನು ಸೇರ ಬಯಸುತ್ತಿದ್ದಾರೆ ಎಂಬ ಅರ್ಥದಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಆದರೆ ವಾಸ್ತವದಲ್ಲಿ ವಿಡಿಯೋ ಕುರಿತು ಪರಿಶೀಲನೆ ನಡೆಸಿದಾಗ ಅಸಲಿ ವಿಚಾರ ಹೊರ ಬಂದಿದೆ. ಈ ವಿಡಿಯೋದಲ್ಲಿ ಹಲವು ರೀತಿಯಾಗಿ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳುತ್ತಿದ್ದು, ಪರಿಶೀಲನೆ ನಡೆಸದೆ, ವಿಡಿಯೋದಲ್ಲಿರುವುದು ನಿಜವೇ ಎಂಬುದನ್ನು ತಿಳಿಯದೇ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ ಅಂದ್ರೆ ತಪ್ಪಾಗೋದಿಲ್ಲ.
ಫ್ಯಾಕ್ಟ್‌ಚೆಕ್
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ವೈರಲ್ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆ. ಈ ವೇಳೆ ಎಂಡಿ ನಜೀ಼ಮ್ ಉದ್ದಿನ್ ಎಂಬ ಯುಟ್ಯೂಬ್ ಖಾತೆ ಕಾಣಿಸಿಕೊಂಡಿದ್ದು ಅದರಲ್ಲಿ ಅರೆಬಿಯನ್ ಡ್ಯಾನ್ಸ್ ಎಂದು ಇದೇ ವಿಡಿಯೋವನ್ನು 15 ಫೆಬ್ರವರಿ 2024ರಂದು ಹಂಚಿಕೊಳ್ಳಲಾಗಿದೆ.
ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ,ವೈರಲ್ ವಿಡಿಯೋದಲ್ಲಿನ ಕೃಷ್ಟನ ಹಾಡು ಈ ವಿಡಿಯೋದಲ್ಲಿ ಕಂಡು ಬಂದಿಲ್ಲ. ಅದರ ಬದಲಾಗಿ ಅರೆಬಿಯನ್ ಸಾಂಸ್ಕೃತಿಕ ನೃತ್ಯದ ಹಿನ್ನಲೆ ಸಂಗೀತ ಕೇಳಿ ಬಂದಿದೆ. ಯುಟ್ಯೂಬ್‌ನಲ್ಲಿನ ಅರೆಬಿಕ್ ಶೈಲಿಯ ನೃತ್ಯದ ಕುರಿತು ಇನ್ನಷ್ಟು ಹುಡುಕಿದಾಗ ಮೂಲ ಅರೆಬಿಕ್ ನೃತ್ಯಕ್ಕೂ ವೈರಲ್ ವಿಡಿಯೋದ ನೃತ್ಯಕ್ಕೂ ಸಾಕಷ್ಟು ಹೊಲಿಕೆಯಿದೆ.
ಆದರೆ ವೈರಲ್ ವಿಡಿಯೋದಲ್ಲಿನ ನೃತ್ಯ ಮತ್ತು ಅದರ ಹಿನ್ನೆಲೆಯಲ್ಲಿ ಬರುವ ಶ್ರೀಕೃಷ್ಣನ ಸಂಗೀತಕ್ಕೂ ಯಾವುದೇ ರೀತಿಯ ಹೋಲಿಕೆಗಳು ಕಂಡು ಬಂದಿಲ್ಲ. ಹಾಡಿನಲ್ಲಿನ ಸಾಲಿಗೂ ನೃತ್ಯಕ್ಕೂ ಯಾವುದೇ ರೀತಿಯಾದ ಸಂಬಂಧವೇ ಇಲ್ಲ ಎಂಬುದು ತಿಳಿದು ಬಂದಿದೆ. ಹೀಗಾಗಿ ವಿಡಿಯೋದ ಮೂಲ ಧ್ವನಿಯನ್ನು ತಿರುಚಿರುವ ಕಿಡಿಗೇಡಿಗಳು, ಇದಕ್ಕೆ ಕೃಷ್ಣನ ಹಾಡನ್ನ ಹಾಕಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂಬುದು ಸಾಬೀತಾಗಿದೆ. ಇದೇ ರೀತಿಯ ಹಲವಾರು ಅರೇಬಿಕ್ ನೃತ್ಯದ ವಿಡಿಯೋಗಳು ಕಂಡು ಬಂದಿವೆ.
ಒಂದು ವೇಳೆ ಅರಬ್ ಪುರುಷರು ಹಿಂದೂ ದೇವಾಲಯದಲ್ಲಿ ಸಂಭ್ರದಿಂದ ನೃತ್ಯ ಮಾಡಿದ್ದರೆ ವರದಿಗಳು ಆಗಬೇಕಾಗಿತ್ತು. ಆದರೆ ಅಂತಹ ಯಾವುದೇ ವರದಿಗಳು ಕಂಡು ಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check: ದುಬೈನ ಮಸೀದಿಯೊಂದರಲ್ಲಿ ಮುಸ್ಲಿಂ ಮಹಿಳೆಯರು ರಾಮ ಭಜನೆ ಹಾಡಿದ್ದಾರೆ ಎಂಬುದು ಸುಳ್ಳು
ಈ ವಿಡಿಯೋ ನೋಡಿ : Fact Check: ದುಬೈನ ಮಸೀದಿಯೊಂದರಲ್ಲಿ ಮುಸ್ಲಿಂ ಮಹಿಳೆಯರು ರಾಮ ಭಜನೆ ಹಾಡಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ