Fact Check: 2024 ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ECI ಇನ್ನೂ ಪ್ರಕಟಿಸಿಲ್ಲ

Loka Sabha

2024ರ ಲೋಕಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ ದೇಶದ ರಾಜಕೀಯದೊಳಗೆ ತೀವ್ರ ಸಂಚಾರ ಪ್ರಾರಂಭವಾಗಿದೆ. ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಚುನಾವಣಾ ಪೂರ್ವ ತಯಾರಿಯಲ್ಲಿ ನಿರತರಾಗಿದ್ದಾರೆ. ಎಲ್ಲರೂ ಭಾರತೀಯ ಚುನಾವಣಾ ಆಯೋಗ ಹೊರಡಿಸುವ ಅಧಿಕೃತ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ. ಆದರೆ ಚುನಾವಣಾ ದಿನಾಂಕಕ್ಕೆ ಸಂಬಂದಿಸಿದಂತೆ ಅನೇಕ ಸುಳ್ಳುಗಳು ಹರಿದಾಡುತ್ತಿವೆ.

ಕೆಲವು ದಿನಗಳ ಹಿಂದೆ “2024ರ ಲೋಕಸಭಾ ಚುನಾವಣೆಯು ಏಪ್ರಿಲ್ 16 ರಂದು ನಡೆಯಲಿದೆ ಎಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ” ಎಂಬ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ ಇದು ಅಧಿಕೃತ ದಿನಾಂಕ ಅಲ್ಲದ ಕಾರಣ ECI ಮುಖ್ಯಸ್ಥರು ಇದೊಂದು ಸುಳ್ಳು ಸುದ್ದಿ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಸ್ಪಷ್ಟಪಡಿಸಿದ್ದರು.

ಈಗ, “ಭಾರತೀಯ ಚುನಾವಣಾ ಆಯೋಗ 2024ರ ಲೋಕಸಭಾ ಚುನಾವಣೆಯ ಅಧಿಕೃತ ದಿನಾಂಕವನ್ನು ಪ್ರಕಟಿಸಿದೆ” ಎಂಬ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌: ಈ ಕುರಿತು ಹುಡುಕಿದಾಗ 2024 ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ECI ಇನ್ನೂ ಪ್ರಕಟಿಸಿಲ್ಲ. ಮತ್ತು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಸಹ ಈ ಕುರಿತು ಯಾವುದೇ ಪ್ರಕಟಣೆಯನ್ನು ನೀಡದಿರುವುದು ಕಂಡು ಬಂದಿದೆ.“2024 ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಗೆ ಸಂಬಂಧಿಸಿದಂತೆ WhatsApp ನಲ್ಲಿ ಹರಿದಾಡುತ್ತಿರುವ ವೈರಲ್ ಸಂದೇಶವು ಆಧಾರರಹಿತ ಮತ್ತು ನಕಲಿ” ಎಂದು ECI ತನ್ನ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ಪೋಸ್ಟ್ ಅದೇ ವೈರಲ್ ಚಿತ್ರವನ್ನು ಒಳಗೊಂಡಿತ್ತು ಮತ್ತು 2024 ರ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಇಸಿಐ ಇನ್ನೂ ಘೋಷಿಸಿಲ್ಲ ಎಂದು ಹೇಳಿದೆ.

ಆದ್ದರಿಂದ ಸದ್ಯ ವೈರಲ್ ಆಗುತ್ತಿರುವ ಈ ಪೋಟೋ ಅಧಿಕೃತ ಚುನಾವಣಾ ಅಯೋಗದ ಪ್ರಕಟಣೆ ಆಗಿರದೆ ತಪ್ಪು ಮಾಹಿತಿ ಹರಡಲೆಂದೆ ತಯಾರಿಸಿದ ಪ್ರಕಟಣೆಯಾಗಿದೆ.


ಇದನ್ನು ಓದಿ: ಏಪ್ರಿಲ್ 16ಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ ಎಂಬುದು ನಿಜವೇ?


ವಿಡಿಯೋ ನೋಡಿ: Kaaba | ಕಾಬಾದಲ್ಲಿ ಅಲ್ಲೇಶ್ವರನ ಪೋಟೋ ಎಂದು ತಪ್ಪು ಪೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *