ನಮ್ಮ ಭಾರತದಲ್ಲಿ ಪುರಾಣದ ಕಥೆಗಳನ್ನು ವಿಜ್ಞಾನಕ್ಕೆ ತಳುಕು ಆಗುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ಭಾರತದ ಇತಿಹಾಸ ಐದು ಸಾವಿರ ವರ್ಷಗಳಷ್ಟು ಹಿಂದಿನದು ಎಂದು ಇತಿಹಾಸಕಾರರು ಹೇಳಿದರೆ. ಕೆಲವರು ತೇತ್ರಾಯುಗ, ದ್ವಾಪರ ಯುಗಗಳು 15-20 ಸಾವಿರ ವರ್ಷಗಳ ಹಿಂದೆಯೇ ಜರುಗಿದ್ದವು. ಹಿಂದೆ ಪುಷ್ಪಕ ವಿಮಾನ ಇತ್ತು, ಕ್ಲೋನಿಗ್ ತಂತ್ರಜ್ಞಾನ ಗೊತ್ತಿತ್ತು ಹೀಗೆ ನಾನಾ ರೀತಿಯ ಪ್ರತಿಪಾದನೆಗಳನ್ನು ವಾದಿಸುವವರಿದ್ದಾರೆ.
ಈಗ, “ಉತ್ತರ ಪ್ರದೇಶದ ಪ್ರಯಾಗರಾಜ್ ಅಲ್ಲಿ ಉತ್ಖತನ ಮಾಡುವಾಗ ಸಿಕ್ಕಿದ 21 ಬಿಲಿಯನ್ ವರ್ಷ ಹಳೆಯ ಸನಾತನ ಡ್ರೋನ್. ಜಗತ್ತಿನ ಅತ್ಯಂತ ಹಳೆಯ ಮತ್ತು ಮೂಲ ನಾಗರೀಕತೆ ನನ್ನ ಸನಾತನ ಆರ್ಯ ನಾಗರೀಕತೆ. ಜೈ ಸನಾತನ” ಎಂಬ ಪ್ರತಿಪಾದನೆಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇದನ್ನು ಕೆಲವರು ಚೀನಾದ ಪ್ರಾಚೀನ ನಗರವಾದ Sanxingduiಯ ಪುರಾತತ್ವ ಪ್ರದೇಶದಲ್ಲಿ ಸಿಕ್ಕ 2000 ವರ್ಷಗಳ ಹಿಂದಿನ ಡ್ರೋನ್ ಎಂದು ಪ್ರತಿಪಾಧಿಸಿ ಹಂಚಿಕೊಂಡಿದ್ದಾರೆ ಮತ್ತು ಇನ್ನೂ ಕೆಲವರು ಇದು ಪ್ರಾಚೀನ ಈಜಿಪ್ಟ್‌ನಲ್ಲಿ ದೊರಕಿದೆ. ಬಹು ಹಿಂದೆಯೇ ನಮ್ಮ ನಾಗರೀಕತೆಗಳು ಉನ್ನತಿಯನ್ನು ಸಾಧಿಸಿದ್ದವು ಎಂದು ಪ್ರತಿಪಾದಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್: ಈ ಕುರಿತು ರಿವರ್ಸ್ ಇಮೇಜ್ ನಲ್ಲಿ ಹುಡಕಿದಾಗ ಇದೇ ಚಿತ್ರವನ್ನು ಬಳಸಿ ಅನೇಕ ತಲೆಬರಹಗಳನ್ನು ನೀಡಿರುವುದು ಕಂಡು ಬಂದಿದೆ. ಆದರೆ ಚೀನಾದ ಇಕ್ಸಿಗುವಾ ವೀಡಿಯೋ ಚಾನೆಲ್‌ನಲ್ಲಿ ಮಾರ್ಚ್ 7, 2024ರಂದು ಅಪ್‌ಲೋಡ್ ಆದ ವೀಡಿಯೋ ಒಂದರಲ್ಲಿ ನೀಡಿದ ಶೀರ್ಷಿಕೆ ಪ್ರಕಾರ, “ಈ ಕಂಚಿನ ಡ್ರೋಣ್ AI ಸೃಷ್ಟಿಯಾಗಿದ್ದು, ಸಂಪೂರ್ಣ ಕಾಲ್ಪನಿಕವಾಗಿದೆ. ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಬೇಡಿ” ಎಂದಿದೆ. ಇನ್ನೂ 21 ಬಿಲಿಯನ್ ವರ್ಷಗಳ ಹಿಂದೆ ಮನುಷ್ಯರೇ ವಿಕಾಸ ಹೊಂದಿರಲಿಲ್ಲ. ಮತ್ತು ಭೂಮಿಯಲ್ಲಿ ಸರಿಯಾದ ವಿಕಾಸವೇ ಪ್ರಾರಂಭವಾಗಿರಲಿಲ್ಲವೇನೋ! ಆ ಬಳಿಕ ನಾವು ಎಕ್ಸ್ ನಲ್ಲಿ Convomf ಎಂಬ ಖಾತೆಯನ್ನು ಪರಿಶೀಲಿಸಿದ್ದೇವೆ. ಮಾರ್ಚ್ 7, 2024ರಂದು ಅಪ್‌ಲೋಡ್ ಆಗಿರುವ ಇದರಲ್ಲೂ ಡ್ರೋನ್ ಚಿತ್ರವಿದ್ದು ಇದನ್ನು ಎಐ ಮೂಲಕ ಮಾಡಲಾಗಿದೆ ಎಂದಿದೆ.ಹೆಚ್ಚಿನ ಖಚಿತ ಪಡಿಸುವಿಕೆಗೆ ನಾವು ವೈರಲ್ ಚಿತ್ರವು ನಿಜಕ್ಕೂ ಎಐ ಚಿತ್ರವೇ ಎಂದು ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಇದು ಎಐ ನಿರ್ಮಿತ ಚಿತ್ರವೆಂದು ಖಚಿತವಾಗಿದೆ. ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್ ವರ್ಷ ಹಳೆಯ ಡ್ರೋನ್ ಸಿಕ್ಕಿದೆ ಎಂದು ಹೇಳಿರುವ ವೈರಲ್ ಚಿತ್ರವು ಎಐ ಮೂಲಕ ಮಾಡಿದ್ದಾಗಿದೆ.
ಇದನ್ನು ಓದಿ: Fact Check: ಉಳುವವನೇ ಹೊಲದೊಡೆಯ ಕಾನೂನು ಮತ್ತು ಇಂದಿರಾಗಾಂಧಿ ಕುರಿತು ತಪ್ಪು ಮಾಹಿತಿ ಹಂಚಿಕೆ
ವಿಡಿಯೋ ನೋಡಿ: Fact Check | ಕನ್ನಡ ಸುದ್ದಿ ಮಾಧ್ಯಮಗಳಿಂದ ಶಾಲಾ ವೇಳಾಪಟ್ಟಿ ಬಗ್ಗೆ ಸುಳ್ಳು ಸುದ್ದಿ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.