Fact Check: ಉದ್ಯಾನವನಗಳಲ್ಲಿ ಯೋಗ ಮಾಡುವುದನ್ನು ನಾವು ತಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಲ್ಲ

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವುದರಿಂದ ರಾಷ್ಟ್ರೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಮಣಿಸುವ ಸಲುವಾಗಿ ಸುಳ್ಳು ಸುದ್ದಿಗಳ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಸುಳ್ಳು ಪೋಸ್ಟರ್‌ಗಳನ್ನು ಹಂಚಿಕೊಂಡು ಕೆಲವು ರಾಜಕೀಯ ನಾಯಕರ ತೇಜೋವದೆಗೆ ಇಳಿದಿದ್ದಾರೆ.

ಈಗ, ರಸ್ತೆಯಲ್ಲಿ ನಮಾಜ್ ಮಾಡದಂತೆ ನೀವು ತಡೆಯುವುದಾದರೆ, ಉದ್ಯಾನವನಗಳಲ್ಲಿ ಯೋಗ ಕೂಡ ಮಾಡುವುದನ್ನು ನಾವು ತಡೆಯುತ್ತೇವೆ. – ಪ್ರಿಯಾಂಕಾ ವಾದ್ರಾ” ಎಂಬ ಪೋಸ್ಟರ್‌ ಒಂದನ್ನು ಸುಳ್ಳುಸುದ್ದಿಗಳನ್ನು ಹರಡಲು ಕುಖ್ಯಾತಿ ಪಡೆದಿರುವ ಮಹೇಶ್ ವಿಕ್ರಂ ಹೆಗ್ಡೆ ನೇತೃತ್ವದ ಪೋಸ್ಟ್‌ಕಾರ್ಡ್‌ ಹರಿಬಿಟ್ಟಿದ್ದೆ.

ಇದೇ ರೀತಿ, “ಬಸ್ ಮುಖಾಂತರ ಡಿಕೆಶಿ ಫಾರ್ಮ್‌ ಹೌಸ್‌ಗೆ ಹೋಗುತ್ತಿದ್ದ 15 ಕೋಟಿ ಪೋಲಿಸರ ವಶಕ್ಕೆ” ಎಂಬ ಪೋಸ್ಟರ್ ವಿಡಿಯೋ ಒಂದನ್ನು ಕೆಲವರು ಹಂಚಿಕೊಂಡು, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೆ ಆರೋಪ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್‌: “ಉದ್ಯಾವನದಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ” ಎಂಬ ಈ ರೀತಿಯ ಹೇಳಿಕೆಯನ್ನು ಪ್ರಿಯಾಂಕಾ ಗಾಂಧಿಯವರು ನೀಡಿರುವ ಕುರಿತು ಯಾವ ಮಾಧ್ಯಮಗಳು ಸಹ ವರದಿ ಮಾಡಿಲ್ಲ. ಅವರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲೂ ಸಹ ಇಂತಹ ಹೇಳಿಕೆಯನ್ನು ಹಂಚಿಕೊಂಡಿಲ್ಲ. ಈ ವೈರಲ್ ಪೋಸ್ಟರ್‌ 2020ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರಿಯಾಂಕಾ ಗಾಂಧಿ ಅವರಿಗೆ ಅವಮಾನ ಮಾಡುವ ಸಲುವಾಗಿ ಪೋಸ್ಟ್ ಕಾರ್ಡ್ ಕನ್ನಡ ಈ ಸುಳ್ಳು ಹರಡಿದೆ.

ಇದೇ ಪೋಸ್ಟರ್‌ ಹಿಂದಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಹರಿದಾಡುತ್ತಿದ್ದು ಪೋಸ್ಟ್‌ಕಾರ್ಡ್‌ ಈಗ ಕನ್ನಡಕ್ಕೆ ಅನುವಾದಿಸಿ ಹರಿಬಿಟ್ಟಿದ್ದಾರೆ. ಹೀಗಾಗಲೇ ಕೆಲವು ವರ್ಷಗಳ ಕೆಳಗೆ Factly ಮತ್ತು Bhoom live ಅವರು ಈ ಪೋಸ್ಟರ್‌ನ ಸಂದೇಶದ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿ ಇದು ಸುಳ್ಳು ಸುದ್ದಿ ಎಂದಿದ್ದಾರೆ.

ಇನ್ನೂ, ಡಿ,ಕೆ ಶಿವಕುಮಾರ್ ಅವರ ಮೇಲೆ ಮಾಡಿರುವ ಆರೋಪದ ಕುರಿತು ಯಾವುದೇ ಪತ್ರಿಕಾ ವರದಿಗಳು ಕಂಡು ಬಂದಿಲ್ಲ. ಇಂತಹ ಘಟನೆ ನಡೆದಿದ್ದರೆ ಕರ್ನಾಟಕದ ಮಾಧ್ಯಮಗಳು ವರದಿ ಮಾಡುತ್ತಿದ್ದವು. ವಿರೋಧ ಪಕ್ಷದ ನಾಯಕರು ಸಹ ಟೀಕೆಗಳನ್ನು ಮಾಡುತ್ತಿದ್ದರು. ಆದರೆ ಈ ರೀತಿಯ ಪ್ರಕರಣ ನಡೆದಿರುವುದಕ್ಕೆ ಸಾಕ್ಷಿ ಇಲ್ಲ. ಸಂಬಂಧವಿಲ್ಲದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ ಅಷ್ಟೇ.

ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರನ್ನು ಕೇಂದ್ರವಾಗಿರಿಸಿಕೊಂಡು ಅವರ ಕುರಿತು ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಮೂಡಲಿ ಎಂದು ಈ ಪೋಸ್ಟರ್‌ಗಳನ್ನು ಹರಿಬಿಡಲಾಗಿದೆ.


ಇದನ್ನು ಓದಿ: Fact Check | IUML ಪಕ್ಷದ ಕಚೇರಿಯ ಚಿತ್ರವನ್ನು ವಯನಾಡ್‌ನಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ ಎಂದು ಸುಳ್ಳು ಮಾಹಿತಿ ಹಂಚಿಕೆ


ವಿಡಿಯೋ ನೋಡಿ: ಮೈಸೂರಿನ ಸಭೆಯಲ್ಲಿ ದೇವೇಗೌಡರು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕರೆಕೊಟ್ಟಿದ್ದಾರೆ ಎಂಬುದು ಸುಳ್ಳು


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

 

Leave a Reply

Your email address will not be published. Required fields are marked *