“ಇಲ್ಲ ಇದು ಪಾಕಿಸ್ತಾನವಲ್ಲ.. ಹೀಗೆ ಯೋಚಿಸುವುದೇ ಮಹಾಪಾಪ.. ಇದು ವಯನಾಡಿನ ಕಾಂಗ್ರೆಸ್ ಕಛೇರಿ, ಅಲ್ಲಿಂದ ರಾಹುಲ್ ಗಾಂಧಿ ಸಂಸದರಾಗಿದ್ದಾರೆ.. ಇದನ್ನು ನೋಡಿ ಜಾತ್ಯಾತೀತತೆಯ ಕವಚ ತೊಟ್ಟಿರುವ ಹಿಂದೂಗಳಿಗಾದರೂ ಬುದ್ದಿ ಬರಬೇಕು..” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
— मानव मानव (@rLeN2TlCJWGutpd) April 20, 2021
ಈ ಫೋಟೋವನ್ನು ವಾಟ್ಸ್‌ಆಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಾಕಷ್ಟು ಜನ ಇದನ್ನೇ ನಿಜ ಎಂದು ನಂಬಿಕೊಂಡು ಕಾಂಗ್ರೆಸ್ ಮುಸ್ಲಿಂ ಓಲೈಕೆಯ ರಾಜಕಾರಣ ಮಾಡುತ್ತಿದೆ ಎಂದು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಿಗೂ ಹಂಚಿಕೊಳ್ಳುತ್ತಿದ್ದಾರೆ. ಹಾಗದರೆ ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಕಟ್ಟಡದ ಫೋಟೋಗು ಕಾಂಗ್ರೆಸ್ ಯಾವುದಾದರೂ ಸಂಬಂಧವಿದೆಯೇ ಎಂದು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಈ ವೇಳೆ ವೈರಲ್ ಆಗುತ್ತಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದಾಗ 2019ರ ಟ್ವಿಟರ್ ಪೋಸ್ಟ್‌ವೊಂದು ಕಂಡು ಬಂದಿದೆ. ಈ ಪೋಸ್ಟ್‌ನಲ್ಲಿ ವೈರಲ್ ಫೋಟೋದಲ್ಲಿರುವ ಕಟ್ಟಡದ ಮುಂಭಾಗದ ಸ್ಪಷ್ಟವಾದ ಚಿತ್ರವು ಕಂಡು ಬಂದಿತ್ತು. ಈ ಚಿತ್ರವನ್ನು ಕೂಲಕುಂಶವಾಗಿ ನೋಡಿದಾಗ ಈ ಕಟ್ಟಡದ ಮೇಲ್ಭಾಗದ ಎಡಬದಿಯಲ್ಲಿ ಏಣಿಯ ಚಿಹ್ನೆ ಕಂಡು ಬಂದಿದೆ.
What is the congress party 's office in wayanad in kerala pic.twitter.com/YojqHG7Q8q
— Tanu (@shyamtanu90) April 3, 2019
ಈ ಏಣಿಯ ಚಿಹ್ನೆಯನ್ನು ಆಧಾರವಾಗಿ ಇಟ್ಟುಕೊಂಡು ಚುನಾವಣ ಆಯೋಗದ ಅಧಿಕೃತ ವೆಬ್‌ಪೇಜ್‌ನಲ್ಲಿ ಹುಡುಕಿದಾಗ ಈ ಚಿಹ್ನೆಯನ್ನು ಕೇರಳದ ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ಪಕ್ಷಕ್ಕೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ಪಕ್ಷದ ಹಸಿರು ಬಣ್ಣದ ಧ್ವಜ ಮತ್ತು ಅದರಲ್ಲಿರುವ ಅರ್ಧ ಚಂದ್ರ ಹಾಗೂ ನಕ್ಷತ್ರ ಚಿಹ್ನೆಯು ಕೂಡ ಇದೇ ಪಕ್ಷದ್ದು ಎಂಬುದು ತಿಳಿದು ಬಂದಿದೆ.
ಇನ್ನು ಇದೇ ಕಟ್ಟಡದಲ್ಲಿ ವ್ಯಕ್ತಿಯೊಬ್ಬನ ಚಿತ್ರ ಬಿಡಿಸಲಾಗಿದ್ದು, ಈ ಚಿತ್ರ ಯಾರದ್ದು ಎಂದು ಪರಿಶೀಲಿಸಿದಾಗ ಸೈಯ್ಯದ್ ಮೊಹಮದ್‌ಅಪ್ ಸಾಹೇಬ್ ಎಂಬುದು ಕೂಡ ತಿಳಿದು ಬಂದಿದೆ., ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ಪಕ್ಷದ ಕೇರಳ ರಾಜ್ಯಾಧ್ಯಕ್ಷರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇದು ಕಾಂಗ್ರೆಸ್ ಕಚೇರಿ ಅಲ್ಲ ಎಂಬುದು ಸ್ಪಷ್ಟವಾಗಿತ್ತು. ಬಳಿಕ ಈ ಕಚೇರಿ ಪ್ರದೇಶ ಯಾವುದು ಎಂದು ಪರಿಶೀಲನೆ ನಡೆಸಿದೆವು.
ಇದಕ್ಕಾಗಿ ನಾವು ಗೂಗಲ್ ಟ್ರ್ಯಾನ್ಸ್‌ಲೇಟರ್‌ನಲ್ಲಿ ಕಟ್ಟಡದ ಮೇಲ್ಬಾಗದ ಎಡಬದಿಯಲ್ಲಿ ಇರುವ ಅಕ್ಷರವನ್ನು ಓದಿದಾಗ ಅದು ಇಕ್ಬಾಲ್ ನಗರ ಎಂದು ತಿಳಿದು ಬಂದಿದೆ. ತದ ನಂತರ ಇಕ್ಬಾಲ್ ನಗರದ IUML ಪಕ್ಷದ ಕಚೇರಿ ಎಂಬುದರ ಕುರಿತು ಹುಡುಕಿದಾಗ 2019ರ ಫೇಸ್‌ಬುಕ್ ಪೋಸ್ಟ್‌ವೊಂದು ಕಂಡು ಬಂದಿದೆ.
ಈ ಪೋಸ್ಟ್‌ನಲ್ಲಿರುವ ಮಾಹಿತಿ ಪ್ರಕಾರ ಈ IUML ಪಕ್ಷದ ಕಚೇರಿ ಇರುವುದು ಕೇರಳದ ಕಾಸರಗೂಡು ಲೋಕಸಭಾ ಕ್ಷೇತ್ರದಲ್ಲಿ ಎಂಬುದು ಖಚಿತವಾಗಿದೆ.