Fact Check: ಮೈಸೂರಿನ ಸಭೆಯಲ್ಲಿ ದೇವೇಗೌಡರು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕರೆಕೊಟ್ಟಿದ್ದಾರೆ ಎಂಬುದು ಸುಳ್ಳು

ದೇವೆಗೌಡ
ಮೈಸೂರು ಲೋಕಸಭಾ ಬಿಜಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರವಾಗಿ ಪ್ರಚಾರ ನಡೆಸಲು ಬಿಜೆಪಿ-ಜೆಡಿಎಸ್‌ ಮೈತ್ರಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿ ಮಾತನಾಡಿದ್ದಾರೆ ಮತ್ತು ಮಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಪ್ರಧಾನಿ ಮೋದಿಯವರು ರ್ಯಾಲಿ ನಡೆಸಿದ್ದಾರೆ. ಈಗ ಮೈಸೂರಿನ ಸಭೆಯಲ್ಲಿ ಎಚ್.ಡಿ ದೇವೇಗೌಡರು ಮಾತನಾಡಿರುವ ಮಾತುಗಳು ಸಾಕಷ್ಟು ವೈರಲ್ ಆಗುತ್ತಿದೆ.
“ಮೈಸೂರಿಗೆ ಪ್ರಚಾರಕ್ಕೆಂದು ಆಗಮಿಸಿದ ನರೇಂದ್ರ ಮೋದಿಯವರ ಪಕ್ಕವೇ ಕೂತು ಮಾಜಿ ಪ್ರಧಾನಿ ದೇವೇಗೌಡರು ಭಾರತೀಯ ಜನತಾ ಪಾರ್ಟಿಯನ್ನು ಸೋಲಿಸಲೇಬೇಕು ಎಂದಿದ್ದಾರೆ. ಗೌಡ್ರು ಕುಮಾರಣ್ಣ ಬಿಜೆಪಿ ಸೇರಿರ್ದ ಉದ್ದೇಶ ಸ್ಪಷ್ಟ. ಬಿಜೆಪಿ ಸೊಂಟಕ್ಕೆ ಕಂಟಕ.” ಎಂಬ ಸಂದೇಶದೊಂದಿದೆ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: 14 ಏಪ್ರಿಲ್ 2024 ರಂದು ಮೈಸೂರಿನಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಪ್ರಚಾರ ಸಭೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ಅವರು ಕಾಂಗ್ರೆಸ್ಸನ್ನು ಟೀಕಿಸುತ್ತಾ, “ಮಧ್ಯ ಪ್ರದೇಶಕ್ಕೆ, ರಾಜಸ್ಥಾನಕ್ಕೆ,, ಛತ್ತಿಸ್‌ಗಡಕ್ಕೆ ನಿಮ್ಮ ಸಂಪತ್ತು, ಕರ್ನಾಟಕದ ಜನತೆಯ ಸಂಪತ್ತು ಕಳಿಸಿ ಭಾರತೀಯ ಜನತಾ ಪಾರ್ಟಿಯನ್ನು ಸೋಲಿಸಲೇಬೇಕು ಎಂದು ಐಎನ್‌ಡಿಐಎ(INDIA) ನಿರ್ಧರಿಸಿದೆ ಎಂಬ ಅರ್ಥದಲ್ಲಿ ಭಾಷಣ ಮಾಡಿದ್ದಾರೆ.

ಮುಂಸುವರೆದು, “ನನ್ನ ರಾಜಕೀಯ ಜೀವನದಲ್ಲಿ ಅತ್ಯಂತ ಬಲಿಷ್ಠ ಮತ್ತು ಸಭಲ ಪ್ರಧಾನಿಯವರನ್ನು ನಾನು ನೋಡಿರುವುದ ಅದು ನನ್ನ ಪಕ್ಕದಲ್ಲಿಯೇ ಕುಳಿತಿರುವ ನರೇಂದ್ರ ಮೋದಿಯವರು. ಈ ರಾಜ್ಯವನ್ನು ಸೂರೆ ಮಾಡುತ್ತಿರುವುದನ್ನು ತಪ್ಪಿಸಲಿಕ್ಕೆ ನಾನು ಕುಮಾರಸ್ವಾಮಿಗೆ ಹೇಳಿದೆ ಹೋಗು ನೀನು ಮೋದಿಯವರ ಜೊತೆಗೆ ಹೋಗು ಎಂದು, ನನ್ನ ಅನುಮತಿಯನ್ನು ಕೊಟ್ಟಿದ್ದೇನೆ.” ಎಂದಿದ್ದಾರೆ.

ಅವರ ಧೀರ್ಘ ಭಾಷಣದಲ್ಲಿ ಅವರು “ಭಾರತೀಯ ಜನತಾ ಪಾರ್ಟಿಯನ್ನು ಸೋಲಿಸಲೇಬೇಕು” ಎಂಬ ಮಾತನ್ನು ಮಾತ್ರ ಕಟ್ ಮಾಡಿ ತಪ್ಪು ಅರ್ಥ ಬರುವಂತೆ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ದೇವೇಗೌಡರು ಭಾರತೀಯ ಜನತಾ ಪಾರ್ಟಿಯನ್ನು ಸೋಲಿಸಲೇಬೇಕು ಎಂದು ಕರೆಕೊಟ್ಟಿದ್ದಾರೆ ಎಂಬುದು ಸುಳ್ಳು.


ಇದನ್ನು ಓದಿ: Fact Check | ಹಿಂದುಗಳ ತೆರಿಗೆ ಮುಸಲ್ಮಾನರ ಮನೆಗೆ ಎಂಬುದು ಸುಳ್ಳು


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ


Leave a Reply

Your email address will not be published. Required fields are marked *