Fact Check: ಗಿಳಿ ಕೂಡಿ ಹಾಕಿದಕ್ಕೆ ಶಾಸ್ತ್ರ ಹೇಳುವವರ ಬಂಧಿಸಲಾಗಿದೆಯೇ ಹೊರತು BJP ಗೆಲ್ಲುತ್ತದೆ ಎಂದಿದ್ದಕ್ಕೆ ಅಲ್ಲ

BJP

ಈ ಬಾರಿ ತಮಿಳುನಾಡಿನಲ್ಲಿ ತನ್ನ ಖಾತೆ ತೆರೆಯಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿ ಯವರು ಅಲ್ಲಿನ ಆಡಳಿತಾರೂಢ ಡಿಎಂಕೆ ಪಕ್ಷದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿರುದ್ಧ ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಸುಳ್ಳು ಸುದ್ದಿಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ.

ಈಗ, ತಮಿಳುನಾಡಿನಲ್ಲಿ ಗಿಣಿ ಶಾಸ್ತ್ರ ಹೇಳುವವನ ಗಿಳಿ ಚುನಾವಣೆಯಲ್ಲಿ BJP ಗೆಲ್ಲುತ್ತದೆ ಎಂದಿದ್ದಕ್ಕೆ ಶಾಸ್ತ್ರದವನನ್ನು ಎಳೆದೊಯ್ದ ಪೊಲೀಸರು! ಎಲ್ಲಿದೆ ಪ್ರಜಾಪ್ರಭುತ್ವ! ಎಂಬ ವಿಡಿಯೋ ಒಂದನ್ನು ಹರಿಬಿಡಿಟ್ಟಿದ್ದು, ಈ ವಿಡಿಯೋದಲ್ಲಿ ತಮಿಳುನಾಡಿನ ಪೋಲೀಸರು ಗಿಳಿ ಶಾಸ್ತ್ರ ಹೇಳುವ ವ್ಯಕ್ತಿಯೊಬ್ಬರನ್ನು ಎಳೆದುಕೊಂಡು ಹೋಗಿ ತಮ್ಮ ಜೀಪಿಗೆ ಹತ್ತಿಸುತ್ತಿದ್ದರೆ, ಅವರ ಗೆಳೆಯರೊಬ್ಬರು ಅವರಿಗೆ ವಯಸ್ಸಾಗಿದೆ ಇದೊಂದು ಬಾರಿ ಕ್ಷಮಿಸಿ ಅವರನ್ನು ಬಂಧಿಸಬೇಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಇದೇ ವಿಡಿಯೋವನ್ನು ಸುಳ್ಳು ಭಾಷಣಗಳಿಗೆ ಹೆಸರಾದ ವಿವಾದಾತ್ಮಕ ಭಾಷಣಾಕಾರ ಚಕ್ರವರ್ತಿ ಸೂಲಿಬೆಲೆ “ಮೋದಿ ಗೆಲ್ತಾರೆ ಅಂದಿದ್ದಕ್ಕೆ ಬಡಪಾಯಿ ಗಿಣಿ ಶಾಸ್ತ್ರದವನನ್ನು ಜೈಲಿಗಟ್ಟಿದ ತಮಿಳುನಾಡು ಸರ್ಕಾರ! ಆದರೆ ಸರ್ವಾಧಿಕಾರಿ ಮಾತ್ರ ಮೋದಿಯೇ!!” ಎಂದು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ಇಂಡಿಯಾ ಟುಡೆ ವರದಿಯೊಂದು ಲಭ್ಯವಾಗಿದ್ದು “ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಕಡಲೂರು ಕ್ಷೇತ್ರದ ಅಭ್ಯರ್ಥಿ ತಂಗರ್ ಬಚನ್ ಅವರ ಚುನಾವಣಾ ಗೆಲುವನ್ನು ಸೆಲ್ವರಾಜ್ ಎಂಬುವವರು ಗಿಳಿ ಶಾಸ್ತ್ರ ಭವಿಷ್ಯ ಹೇಳಿರುವ ವಿಡಿಯೋ ತಮಿಳುನಾಡಿನಲ್ಲಿ ವೈರಲ್ ಆಗುತ್ತಿದ್ದಂತೆ, ತಮಿಳುನಾಡಿನ ಅರಣ್ಯ ಇಲಾಖೆ ಪೋಲಿಸರು ಸೆಲ್ವರಾಜ್ ಮತ್ತು ಅವರ ತಮ್ಮನನ್ನು ಬಂಧಿಸಿದ್ದಾರೆ. ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ (1972) ಶೆಡ್ಯೂಲ್ 4 ರ ಪ್ರಕಾರ, ಪಕ್ಷಿಗಳನ್ನು ಕಾಡು ಪ್ರಾಣಿಗಳ ಅಡಿಯಲ್ಲಿ ವರ್ಗೀಕರಿಸಲಾಗಿರುವುದರಿಂದ ಅವುಗಳನ್ನು ಕೂಡಿಹಾಕುವುದು ಕಾನೂನುಬಾಹಿರವಾಗಿದೆ ಮತ್ತು ಆದ್ದರಿಂದ ಕಾಯ್ದೆಯಡಿ ರಕ್ಷಿಸಲಾಗುತ್ತದೆ. ನಂತರ ಇಬ್ಬರನ್ನೂ ಎಚ್ಚರಿಕೆಯ ಮೇರೆಗೆ ಬಿಡುಗಡೆ ಮಾಡಲಾಗಿದೆ.

ಪಿಎಂಕೆ ಕಡಲೂರು ಕ್ಷೇತ್ರದ ಅಭ್ಯರ್ಥಿ ತಂಗರ್ ಬಚನ್ ಅವರು ಗಿಣಿ ಶಾಸ್ತ್ರ ಕೇಳುವ ವಿಡಿಯೋವನ್ನು ನೀವಿಲ್ಲಿ ನೋಡಬಹುದು.

ಇಲ್ಲಿ ಎಲ್ಲಿಯೂ ಚುನಾವಣೆಯಲ್ಲಿ BJP ಗೆಲ್ಲುತ್ತದೆ ಅಥವಾ ಮೋದಿ ಮತ್ತೆ ಗೆಲ್ಲುತ್ತಾರೆ ಎಂದು ಗಿಳಿ ಶಾಸ್ತ್ರದವರು ಹೇಳಿಲ್ಲ. ಆದ್ದರಿಂದ ಸಧ್ಯ ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು.


ಇದನ್ನು ಓದಿ: Fact Check: ಜೂನ್ 14, 2024ರ ಒಳಗೆ ನಿಮ್ಮ ಆಧಾರ್ ಕಾರ್ಡ್‌ ಅಪ್ಡೇಟ್‌ ಮಾಡಿಸದೇ ಹೋದರೆ ಅಮಾನ್ಯವಾಗುತ್ತದೆ ಎಂಬುದು ಸುಳ್ಳು


ವಿಡಿಯೋ ನೋಡಿ: Fact Check: 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು


ಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *