Fact Check | ಹಿಂದುಗಳ ತೆರಿಗೆ ಮುಸಲ್ಮಾನರ ಮನೆಗೆ ಎಂಬುದು ಸುಳ್ಳು

“ವಕ್ಫ್ ಬೋರ್ಡ್‌ಗೆ 100 ಕೋಟಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 393 ಕೋಟಿ. ಹಿಂದುಗಳ ತೆರಿಗೆ ಮುಸಲ್ಮಾನರ ಮನೆಗೆ.” ಎಂಬ ಶಾರ್ಟ್‌ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಬಹುಪಾಲು ಅನುದಾನವನ್ನು ಮುಸಲ್ಮಾನರಿಗೆ ನೀಡಲಾಗಿದೆ. ಹಿಂದೂಗಳ ಸಂಪೂರ್ಣ ತೆರಿಗೆ ಹಣ ಈಗ ಮುಸಲ್ಮಾನರ ಮನೆಗೆ ಹೋಗುತ್ತಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.

ವಾಟ್ಸ್‌ಆಪ್‌ನಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ
ವಾಟ್ಸ್‌ಆಪ್‌ನಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ

ಸಾಕಷ್ಟು ಮಂದಿ ವಿಡಿಯೋದಲ್ಲಿ ಹಂಚಿಕೊಂಡಿರುವ ಮಾಹಿತಿ ನಿಜವೆಂದು ನಂಬಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವ್ಯಾಪಕವಾದ ಟೀಕೆಯನ್ನು ಮಾಡುತ್ತಿದ್ದಾರೆ. ಹಾಗಾಗದರೆ ಹೀಗೆ ವ್ಯಾಪಕವಾಗಿ ಹಂಚಿಕೊಳ್ಳುತ್ತಿರುವ ವಿಡಿಯೋದದಲ್ಲಿ ಹೇಳಿರುವುದು ಸಂಪೂರ್ಣವಾಗಿ ನಿಜವೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲಿಸೋಣ

ಹಿಂದುಗಳ ತೆರಿಗೆ ಸಾಬ್ರ ಮನೆಗೆ
ಹಿಂದುಗಳ ತೆರಿಗೆ ಸಾಬ್ರ ಮನೆಗೆ ಎಂಬ ಸುಳ್ಳು ಮಾಹಿತಿ

ಫ್ಯಾಕ್ಟ್‌ಚೆಕ್‌

ಕರ್ನಾಟಕದಲ್ಲಿ ಕೇವಲ ಒಂದು ಸಮುದಾಯದಿಂದ ಮಾತ್ರವಲ್ಲ, ಎಲ್ಲಾ ಸಮುದಾಯಗಳಿಂದಲೂ ತೆರಿಗೆ ಸಂಗ್ರಹಿಸಲಾಗುತ್ತಿದೆ ಮತ್ತು ಎಲ್ಲಾ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಅನುದಾನವನ್ನು ಹಂಚಲಾಗುತ್ತದೆ. ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವ ಬಿಜೆಪಿ ಸರ್ಕಾರ ಕೂಡ ಮಾರ್ಚ್ 2023ರ ಬಜೆಟ್ ನಲ್ಲಿ 123 ಕೋಟಿ ರೂ ಅನುದಾನವನ್ನು ಮುಸ್ಲಿಂ ಸಮುದಾಯಕ್ಕೆ ಘೋಷಿಸಿತ್ತು ಎಂದು ವಿಜಯ ಕರ್ನಾಟಕ ವರದಿ ಮಾಡಿತ್ತು.

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಮುಸಲ್ಮಾನರಿಗೆ ನೀಡಿದ ಅನುದಾನದ ವರದಿ
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಮುಸಲ್ಮಾನರಿಗೆ ನೀಡಿದ ಅನುದಾನದ ವರದಿ

ಅದರಲ್ಲಿ 31 ಅಲ್ಪಸಂಖ್ಯಾತ ವಸತಿ ಶಾಲೆಗಳ ಅಭಿವೃದ್ಧಿಗೆ 96 ಕೋಟಿ ರೂ. ಅನುದಾನ, ರಾಜ್ಯದ 29 ಅಲ್ಪಸಂಖ್ಯಾತ ವಸತಿ ನಿಲಯಗಳ ನಿರ್ವಹಣೆಗೆ 25 ಕೋಟಿ ರೂ, ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಆತ್ಮ ರಕ್ಷಣೆಯ ತರಬೇತಿಗೆ 2 ಕೋಟಿ ರೂ. ಅನುದಾನ ಸೇರಿದಂತೆ ಇನ್ನೂ ಹಲವು ಸವಲತ್ತುಗಳನ್ನು ನೀಡಲಾಗಿತ್ತು. ಇದು ಕೇವಲ ಬಿಜೆಪಿಯ ಬೊಮ್ಮಾಯಿ ಮತ್ತು ಯಡಿಯೂರಪ್ಪನವರ ಸರ್ಕಾರ ಮಾತ್ರವಲ್ಲ. ದೇಶದ ಇತರೆ ರಾಜ್ಯಗಳಲ್ಲಿರುವ ಬಿಜೆಪಿ ಸರ್ಕಾರಗಳು ಕೂಡ ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಅನುದಾನವನ್ನು ಘೋಷಿಸಿವೆ. ಈ ಕುರಿತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕೂಡ ವರದಿ ಮಾಡಿದೆ

ಸಿಎಂ ಸಿದ್ದರಾಮಯ್ಯ ಮುಸಲ್ಮಾನರಿಗೆ ನೀಡಿದ ಅನುದಾನದ ಕುರಿತು ಸ್ಪಷ್ಟನೆ ನೀಡಿದ ವರದಿ
ಸಿಎಂ ಸಿದ್ದರಾಮಯ್ಯ ಮುಸಲ್ಮಾನರಿಗೆ ನೀಡಿದ ಅನುದಾನದ ಕುರಿತು ಸ್ಪಷ್ಟನೆ ನೀಡಿದ ವರದಿ

ಅದೇ ರೀತಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರವು ಕೂಡ ಅನುದಾನವನ್ನ ಘೋಷಣೆ ಮಾಡಿದೆ.  2024ರಲ್ಲಿ ರಾಜ್ಯದ ಒಟ್ಟು ಬಜೆಟ್ ಗಾತ್ರ 3,71,000 ಕೋಟಿ ರೂಗಳಾಗಿದ್ದು, ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.14 ಪರ್ಸೆಂಟ್ ಇದೆ. ಆದರೆ, ನಾನು ಮುಸ್ಲಿಂ ಸಮುದಾಯಕ್ಕೆ ಶೇ.0.8 ಪರ್ಸೆಂಟ್ ಅನುದಾನವನ್ನು ಮಾತ್ರ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಹಾಗಾಗಿ ಹಿಂದುಗಳ ತೆರಿಗೆ ಮುಸಲ್ಮಾನರ ಮನೆಗೆ ಎಂಬುದು ಸುಳ್ಳು.

ಇನ್ನು ಈ ಹಿಂದೆಯೂ ಕೂಡ ದೇವಸ್ಥಾನದ ಹಣ ಮಸೀದಿಗಳಿಗೆ ಹೋಗಲಿದೆ ಎಂದು ಸುಳ್ಳು ಹರಡಲಾಗಿತ್ತು. ಆದರೆ ಅದು ಕೂಡ ಸುಳ್ಳು ಎಂದು ಸಾಬೀತಾಗಿತ್ತು. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಅಥವಾ ಶೇರ್‌ ಮಾಡುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ : Fact Check: 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು


ವಿಡಿಯೋ ನೋಡಿ : Fact Check: 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *