ಇತ್ತೀಚೆಗೆ, ಕೇರಳದ ಕಮುನಿಸ್ಟ್ ಸರ್ಕಾರದ ವಿರುದ್ದ ಮತ್ತು ಕೇರಳದ ಮುಸ್ಲಿಂ ವಿರುದ್ದ ಸಾಕಷ್ಟು ಸುಳ್ಳು ಆಪಾದನೆಗಳು, ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈಗ, “ಕೇರಳದ ಮುಸ್ಲಿಂ ವ್ಯಕ್ತಿಯೊಬ್ಬರು ಹಾಲಿನಲ್ಲಿ ಸ್ನಾನ ಮಾಡಿ ಅದನ್ನು ಹಿಂದೂಗಳಿಗೆ ವಿತರಿಸುವ ಮೊದಲು ‘ಹಲಾಲ್’ ತಯಾರಿಸುತ್ತಿದ್ದಾರೆ” ಎಂದು ಪ್ರತಿಪಾದಿಸಿದ ವಿಡಿಯೋ ಒಂದನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ಟರ್ಕಿಯ ಸುದ್ದಿ ಸಂಸ್ಥೆ TRT ಹೇಬರ್ ಜೂನ್ 10, 2022 ರ ವರದಿಯಲ್ಲಿ ವೈರಲ್ ವೀಡಿಯೊದ ಚಿತ್ರವನ್ನು ಪ್ರಕಟಿಸಿದೆ. ಈ ವರದಿ ಪ್ರಕಾರ ಈ ಘಟನೆಯು ಟರ್ಕಿಯ ಕೊನ್ಯಾ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ಹಾಲಿನ ವ್ಯಾಟ್‌ನಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯನ್ನು ಎಮ್ರೆ ಸಯಾರ್ ಎಂದು ಗುರುತಿಸಲಾಗಿದ್ದು, ಅವರ ಸಹೋದ್ಯೋಗಿ ಉಗುರ್ ತುರ್ಗುಟ್ ತಮ್ಮ ವೀಡಿಯೊವನ್ನು ಟಿಕ್ ಟಾಕ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವೀಡಿಯೊ ವೈರಲ್ ಆದ ನಂತರ ಇಬ್ಬರನ್ನೂ ಬಂಧಿಸಲಾಗಿದೆ.
ವರದಿಯ ಪ್ರಕಾರ, ಅವರು ಸ್ನಾನ ಮಾಡಿದ ದ್ರವವು ಹಾಲು ಅಲ್ಲ ಎಂದು ಅವರು ಹೇಳಿದ್ದಾರೆ. ಟಬ್ ಸೋಂಕುನಿವಾರಕ ಬೇಸಿನ್ ಎಂದು ಅವರು ವಾದಿಸಿದರು. ನಂತರ ನ್ಯಾಯಾಲಯವು ಅಕ್ಟೋಬರ್ 2021 ರಲ್ಲಿ ಇಬ್ಬರನ್ನೂ ಖುಲಾಸೆಗೊಳಿಸಿತು. ಸಯಾರ್ ನಂತರ 120,000 ಲಿರಾಗಳಿಗೆ ಒತ್ತಾಯಿಸಿ ಮೊಕದ್ದಮೆ ಹೂಡಿದರು. ಸಯಾರ್ ಈ ಪ್ರಕರಣವನ್ನು ಗೆದ್ದರು, ಮತ್ತು ಕೊನ್ಯಾದಲ್ಲಿನ ನ್ಯಾಯಾಲಯವು ಅವನಿಗೆ 1,150 ಲಿರಾಗಳನ್ನು ಪಾವತಿಸಬೇಕೆಂದು ಆದೇಶಿಸಿತು. ಈ ಘಟನೆಯು 2020 ರ ನವೆಂಬರ್‌ನಲ್ಲಿ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ನವೆಂಬರ್ 13, 2020 ರ ಇಂಡಿಯನ್ ಎಕ್ಸ್ಪ್ರೆಸ್ ವರದಿಯೊಂದು ಸಹ ಸಿಕ್ಕಿದ್ದು ಅದರಲ್ಲಿ, “ಟರ್ಕಿಯ ಡೈರಿ ಸ್ಥಾವರದಲ್ಲಿ ಕೆಲಸಗಾರ ಹಾಲಿನ ಟಬ್‌ನಲ್ಲಿ ಸ್ನಾನ ಮಾಡುತ್ತಾನೆ; ವಿಡಿಯೋ ವೈರಲ್ ಆದ ನಂತರ ಬಂಧನ” ಎಂದು ತಲೆಬರಹ ನೀಡಿದ್ದಾರೆ.
ಜೂನ್ 13, 2022 ರ ಹುರಿಯೆಟ್ ಡೈಲಿ ನ್ಯೂಸ್‌ನ ವರದಿಯ ಪ್ರಕಾರ, ವೀಡಿಯೊದಲ್ಲಿ ‘ಹಾಲಿನ ಸ್ನಾನ’ ಮಾಡುತ್ತಿರುವ ವ್ಯಕ್ತಿ ಎಮ್ರೆ ಸಯಾರ್ ಮತ್ತು ತನ್ನ ಟಿಕ್‌ಟಾಕ್ ಖಾತೆಯಲ್ಲಿ ತುಣುಕನ್ನು ಹಂಚಿಕೊಂಡ ಉಯೂರ್ ತುರ್ಗುಟ್ ಅವರನ್ನು 2020 ರಲ್ಲಿ ಘಟನೆಯ ನಂತರ ಬಂಧಿಸಲಾಯಿತು.
“ಈ ಪ್ರಕರಣದ ಪ್ರಾಸಿಕ್ಯೂಟರ್ ಪಾತ್ರೆಯಲ್ಲಿರುವ ವಸ್ತು ಹಾಲು ಅಲ್ಲ, ಬಿಸಿ ನೀರು ಮತ್ತು ಹಾಲನ್ನು ಹೋಲುವ ದ್ರವ ಎಂದು ಹೇಳಿದರು. ನ್ಯಾಯಾಲಯವು ಅಕ್ಟೋಬರ್ 2021 ರಲ್ಲಿ ಸಯಾರ್ ಮತ್ತು ಉಯೂರ್ ಅವರನ್ನು ಖುಲಾಸೆಗೊಳಿಸಿತು. ನ್ಯಾಯಾಲಯದ ತೀರ್ಪಿನ ನಂತರ, ಸಯಾರ್ ರಾಜ್ಯ ಖಜಾನೆಯ ವಿರುದ್ಧ ಮೊಕದ್ದಮೆ ಹೂಡಿದರು, ಆರ್ಥಿಕ ಮತ್ತು ಆರ್ಥಿಕೇತರ ಹಾನಿಗಳಿಗೆ ಪರಿಹಾರವಾಗಿ ಒಟ್ಟು 120,000 ಟರ್ಕಿಶ್ ಲಿರಾಗಳನ್ನು ಒತ್ತಾಯಿಸಿದರು. ಆದರೆ ಕೊನ್ಯಾ ನ್ಯಾಯಾಲಯವು ಅವರಿಗೆ ಪರಿಹಾರವಾಗಿ 1,150 ಲಿರಾಗಳನ್ನು ಮಾತ್ರ ಪಾವತಿಸಬೇಕು ಎಂದು ಆದೇಶಿಸಿದೆ ಎಂದು ವರದಿ ತಿಳಿಸಿದೆ.
ಆದ್ದರಿಂದ ಈ ಘಟನೆ ಕೇರಳದಲ್ಲಿ ನಡೆದಿಲ್ಲ ಮತ್ತು ಹಿಂದೂಗಳಿಗೆ ವಿತರಿಸುವ ಹಾಲಿನ ಸ್ನಾನ ಮಾಡಿದ ಕೇರಳದ ಮುಸ್ಲಿಂ ಎಂಬುದು ಸುಳ್ಳು.
ಇದನ್ನು ಓದಿ: Fact Check: ಜೂನ್ 14, 2024ರ ಒಳಗೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೇ ಹೋದರೆ ಅಮಾನ್ಯವಾಗುತ್ತದೆ ಎಂಬುದು ಸುಳ್ಳು
ವಿಡಿಯೋ ನೋಡಿ: Fact Check: 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ