Fact Check | ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿಯ 2000 ರೂ ಸಹಾಯವಾಯ್ತು ವಿಡಿಯೋ ತಿರುಚಿ ಹಂಚಿಕೆ

“ಆ ವಿದ್ಯಾರ್ಥಿ ಹೇಳಿದ್ದು ಮೋದಿ ಸರ್ಕಾರದ ಫಸಲ್‌ ಭೀಮಾ ಇಂದ 2000 ರೂ. ಸಹಾಯ ಆಯ್ತು ಅಂತ. ಕಾಂಗ್ರೆಸ್‌ ಹಾಕಿದ್ದು ಗೃಹಲಕ್ಷ್ಮಿ ಇಂದ ಅಂತ. ಅಷ್ಟಕ್ಕೂ ಗೃಹಲಕ್ಷ್ಮಿ ಇರುವುದು ಹೆಣ್ಣುಮಕ್ಕಳಿಗೆ, ಅದು ಮುಕ್ಕಾಲು ಭಾಗ ತಲುಪದ ಯೋಜನೆ” ಎಂಬ ಬರಹದೊಂದಿಗೆ ವಿಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅದರಲ್ಲೂ ಪ್ರಮುಖವಾಗಿ t.b.m_improve ಎಂಬ ಬಿಜೆಪಿ ಬೆಂಬಲಿಸುವ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮೊದಲು ಹಂಚಿಕೊಳ್ಳಲಾಗಿದದ್ದು ಇದನ್ನೇ ನಿಜವೆಂದು ನಂಬಿ ಹಲವರು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗದರೆ ಈ ವಿಡಿಯೋದಲ್ಲಿನ ಅಸಲಿಯತ್ತು ಏನು? ಎಂಬುದನ್ನು ಈ ಅಂಕಣದಲ್ಲಿ ಪತ್ತೆ ಹಚ್ಚೋಣ

ವೈರಲ್‌ ಆಗುತ್ತಿರುವ ಪೋಸ್ಟರ್‌
ವೈರಲ್‌ ಆಗುತ್ತಿರುವ ಪೋಸ್ಟರ್‌

ಫ್ಯಾಕ್ಟ್‌ಚೆಕ್

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಅಂತರ್ಜಾಲದಲ್ಲಿ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಹುಡುಕಾಡಿದಾಗ ಟಿವಿ9 ಕನ್ನಡದ ವರದಿಯೊಂದು ಕಂಡು ಬಂದಿದೆ ಅದಲ್ಲಿ ಸ್ಪಷ್ಟವಾಗಿ “ಪ್ರಧಾನಿ ಮೋದಿ ಅವರು ರೈತರಿಗೆ ನೀಡುವ ಕಿಸಾನ್ ಸಮ್ಮಾನ್ ಯೋಜನೆ ಮತ್ತು ರಾಜ್ಯ ಕಾಂಗ್ರೆಸ್​ ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯ ಹಣ ಓದಿಗೆ ಸಹಾಯವಾಯಿತು ಎಂದಿದ್ದಾರೆ.” ಎಂದು ಯುವಕನ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. 

ಟಿವಿ9 ಕನ್ನಡಕ್ಕೆ ಯುವಕ ನೀಡಿದ ಹೇಳಿಕೆ
ಟಿವಿ9 ಕನ್ನಡಕ್ಕೆ ಯುವಕ ನೀಡಿದ ಹೇಳಿಕೆ

ಇನ್ನು ಹೆಚ್ಚಿನ ಮಾಹಿತಿಗಾಗಿ  ಕನ್ನಡದ ನ್ಯೂಸ್‌ ಫಸ್ಟ್‌ ಸುದ್ದಿ ವಾಹಿನಿಯ ವರದಿಯನ್ನು ಪರಿಶೀಲಿಸಿದಾಗ,  10 ಏಪ್ರಿಲ್‌ 2024ರಂದು ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ವೇದಾಂತ್‌ ನಾವಿ ಅವರ ಸಂದರ್ಶನದ 04:09 ನಿಮಿಷದ ವಿಡಿಯೋವನ್ನು ತನ್ನ ಯುಟ್ಯುಬ್‌ ಚಾನಲ್‌ನಲ್ಲಿ ನ್ಯೂಸ್‌ ಫಸ್ಟ್‌ ಅಪ್‌ಲೋಡ್‌ ಮಾಡಿರುವುದು ಕಂಡು ಬಂದಿದೆ. ಅದರಲ್ಲಿ 1ನಿಮಿಷ 38ನೇ ಸೆಕೆಂಡ್‌ನಲ್ಲಿ ಸರ್ಕಾರದಿಂದ ಬರುವ 2000 ಹಣದಿಂದ ಸಹಾಯವಾಯ್ತು ಎಂದಿದ್ದಾರೆ.

ನಿರೂಪಕ ಗೃಹಲಕ್ಷ್ಮಿ ಯೋಜನೆಯ ಎಂದು ಪ್ರಶ್ನಿಸಿದಾಗ ಹೌದು ಎಂದು ವೇದಾಂತ್ ಹೇಳಿದ್ದಾರೆ. ಮುಂದುವರಿದು 02:26 ನಿಮಿಷಕ್ಕೆ ಕೇಂದ್ರದ ಫಸಲ್‌ ಭೀಮಾ ಯೋಜನೆಯ 2 ಸಾವಿರ ಬಂದಿದೆ ಎಂದು ಎರಡೂ ಯೋಜನೆಯ ಹೆಸರನ್ನೂ ಉಲ್ಲೇಖಿಸಿದ್ದಾರೆ. ಆದರೆ ಇದೇ ವಿಡಿಯೋವನ್ನು ತಿರುಚಿ ಕೇಂದ್ರದ್ದು ಮಾತ್ರ ಹೇಳಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ : Fact Check: 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು


ವಿಡಿಯೋ ನೋಡಿ : Fact Check: 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *