ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಕುರಿತಾಗಿ ವಿರೋಧ ಪಕ್ಷಗಳು ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದು, ಈ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಜೊತೆಗೆ ಸುಳ್ಳು ಆರೋಪಗಳನ್ನು ಮತ್ತು ಸುಳ್ಳು ಲೆಕ್ಕಗಳನ್ನು ಹರಿಬಿಡುತ್ತಿದ್ದಾರೆ.
ಈಗ, 11 ತಿಂಗಳಲ್ಲಿ ಸಿದ್ದರಾಮಯ್ಯ ಮಾಡಿರುವ ಸಾಲ 1,91,000 ಕೋಟಿ. ಪ್ರತಿ ಕನ್ನಡಿಗನ ತಲೆ ಮೇಲೆ 11ತಿಂಗಳಿಗೆ 31,833ರೂಪಾಯಿ ಸಾಲ ಹೊರಿಸಿದ ಸಿದ್ದಣ್ಣ. 5ವರ್ಷಕ್ಕೆ ಪ್ರತಿ ಕನ್ನಡಿಗನ ಮೇಲೆ 1.5ಲಕ್ಷ ಸಾಲ ಪಕ್ಕಾ.” ಎಂಬ ಸುವರ್ಣ ನ್ಯೂಸ್ ನ ಡಿಬೆಟ್ ಒಂದರ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಬಿಜೆಪಿ ವಕ್ತಾರರೊಬ್ಬರು ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷದ 90 ಸಾವಿರದಷ್ಟು ಸಾಲ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತ ಪೋಸ್ಟರ್‌ಗಳನ್ನು ಸಹ ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್: ಗ್ಯಾರಂಟಿಗಳಿಗೆ ರಾಜ್ಯ ಸರ್ಕಾರ ಪ್ರತೀ ವರ್ಷಕ್ಕೆ 5೦ ಸಾವಿರ ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಿತ್ತು. ಈ ಬಾರಿಯ 2024 ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಹಣವನ್ನು ಮಂಜೂರು ಮಾಡಿದ್ದಾರೆ.
ಆರ್‌ಬಿಐ ಪ್ರಕಟಿಸಿದ ಅಧಿಕೃತ ವರದಿಯ ಪ್ರಕಾರ, 2024 ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಮಾಡಿರುವ ಸಾಲ 1 ಲಕ್ಷದ 5 ಸಾವಿರ ಕೋಟಿ. ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ಒಟ್ಟು 5 ವರ್ಷದಲ್ಲಿ (2018-23) ಮಾಡಿದ ಸಾಲ 2,48,828 ಕೋಟಿ ರೂ.
ಸಿದ್ದರಾಮಯ್ಯನವರು 2018 ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 5 ವರ್ಷದಲ್ಲಿ ರಾಜ್ಯದ ಯೋಜನೆಗಳಿಗಾಗಿ 1,33,284 ಕೋಟಿ ರೂ ಸಾಲ ಮಾಡಿದ್ದರು.
2023ರಲ್ಲಿ ಬಸವರಾಜ ಬೊಮ್ಮಾಯಿಯವರು ಅಧಿಕಾರದಿಂದ ಕೆಳಗಿಳಿದ ಸಂದರ್ಭದಲ್ಲಿ ರಾಜ್ಯದ ಮೇಲಿದ್ದ ಒಟ್ಟು ಸಾಲ 5,35,156.7 ಕೋಟಿ ರೂಪಾಯಿ
ಅಂದರೆ ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ಒಟ್ಟು 5 ವರ್ಷದಲ್ಲಿ (2018-23) ಮಾಡಿದ ಸಾಲ 2,48,828 ಕೋಟಿ ರೂ.
2024 ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಸಾಲ ಮಾಡುವುದಾಗಿ ಘೋಷಿಸಿರುವ ಮೊತ್ತ 1,05,246 ಕೋಟಿ ರೂಗಳು. ಅಲ್ಲಿಗೆ ರಾಜ್ಯದ ಒಟ್ಟು ಸಾಲ 6.4 ಲಕ್ಷ ಕೋಟಿಗಳಾಷ್ಟಾಗುತ್ತದೆ.
ಆದ್ದರಿಂದ 11 ತಿಂಗಳಲ್ಲಿ ಸಿದ್ದರಾಮಯ್ಯ ನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳಾಗಿದೆ.
ಇದನ್ನು ಓದಿ: Fact Check: ಮುಸ್ಲಿಮರ ಅಂಗಡಿಯಲ್ಲಿ ಮಾತ್ರ ಕೊಳ್ಳಿ ಎಂದು ಕೇರಳದ ಸರ್ಕಾರಿ ಶಾಲಾ ಪಠ್ಯಪುಸ್ತಕದಲ್ಲಿದೆ ಎಂಬುದು ಸುಳ್ಳು
ವಿಡಿಯೋ ನೋಡಿ: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮುಸ್ಲಿಮರ ಟೋಪಿ ಧರಿಸಿರಲಿಲ್ಲ, ಇದು ಎಡಿಟೆಡ್ ಫೋಟೊ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ