“ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವೆಂದು ತಿಳಿದಾಗ ಮತದಾರರ ಗುರುತಿನ ಚೀಟಿ ತೋರಿಸಿ ಸೆಕ್ಷನ್ 49ಎ ಅಡಿಯಲ್ಲಿ ʼಚಾಲೆಂಜ್ ವೋಟ್ʼ ಮೂಲಕ ಮತದಾನಕ್ಕಾಗಿ ಕೇಳಬಹುದಾಗಿದೆ. ಬೇರೊಬ್ಬರು ನಿಮ್ಮ ಮತ ಚಲಾಯಿಸಿದ್ದರೆ ಮತ ಚಲಾಯಿಸಲು “ಟೆಂಡರ್ ವೋಟ್”ಗೆ ಕೇಳಬಹುದು, ಯಾವುದೇ ಬೂತಿನಲ್ಲಿ ಶೇ 14ಕ್ಕಿಂತ ಹೆಚ್ಚು ಟೆಂಡರ್ ಮತಗಳು ಚಲಾವಣೆಯಾಗಿದ್ದಲ್ಲಿ ಅಂತಹ ಬೂತ್‌ಗಳಲ್ಲಿ ಮರುಮತದಾನ ಮಾಡಬಹುದಾಗಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಸುದ್ದಿಯನ್ನು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದನ್ನೇ ನಿಜವೆಂದು ಹಲವರು ನಂಬಿಕೊಂಡಿದ್ದಾರೆ. ಹಾಗಿದ್ದರೆ ಚಾಲೆಂಜ್ ವೋಟ್ ಮತ್ತು ಟೆಂಡರ್ ವೋಟ್ ಎಷ್ಟು ಸತ್ಯ, ನಿಜಕ್ಕೂ ಶೇ.14ಕ್ಕಿಂತ ಹೆಚ್ಚು ಹೆಚ್ಚು ಟೆಂಡರ್ ಮತಗಳು ಚಲಾವಣೆಯಾಗಿದ್ದಲ್ಲಿ ಅಂತಹ ಬೂತ್‌ಗಳಲ್ಲಿ ಮರುಮತದಾನ ನಡೆಯುತ್ತದೆಯೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲಿಸೋಣ
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಪರಿಶೀಲನೆ ನಡೆಸಿದಾಗ, ಟೆಂಡರ್ ವೋಟ್ ಕುರಿತ ಮಾಹಿತಿ ಅರ್ಧ ಸತ್ಯದಿಂದ ಕೂಡಿದೆ. ಚುನಾವಣೆ ನಡೆಸುವ ನಿಯಮಗಳು 1961 ಇದರ ನಿಯಮ 42 ಅನ್ವಯ ಒಬ್ಬ ಮತದಾರರ ಮತವನ್ನು ಅದಾಗಲೇ ಇನ್ನೊಬ್ಬರು ಚಲಾಯಿಸಿದ್ದರೆಂದು ತಿಳಿದು ಬಂದರೆ ಮತದಾನ ವಂಚಿತರು ಪ್ರಿಸೈಡಿಂಗ್ ಅಧಿಕಾರಿಗೆ ಮಾಹಿತಿ ನೀಡಬಹುದಾಗಿದೆ.
ಪ್ರಿಸೈಡಿಂಗ್ ಅಧಿಕಾರಿ ಮತದಾರರ ಗುರುತನ್ನು ದೃಢೀಕರಿಸಿದ ನಂತರ ಟೆಂಡರ್ಡ್ ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಲು ಅವಕಾಶ ನೀಡಬಹದಾಗಿದೆ.ಇನ್ನು, ಈ ಟೆಂಡರ್ಡ್ ಬ್ಯಾಲೆಟ್ ಪೇಪರ್ ಕೂಡ ಇವಿಎಂನ ಬ್ಯಾಲಟಿಂಗ್ ಯೂನಿಟ್‌ನಲ್ಲಿರುವ ಬ್ಯಾಲೆಟ್ ಪೇಪರ್‌ನಂತೆಯೇ ಇರಲಿದೆ. ಆದರೆ ಈ ಟೆಂಡರ್ಡ್ ಬ್ಯಾಲೆಟ್ ಪೇಪರ್ ಹಿಂದೆ ಸ್ಟ್ಯಾಂಪ್ ಇರುತ್ತದೆ ಅಥವಾ ಬರವಣಿಗೆಯನ್ನ ಲಗತ್ತಿಸಲಾಗಿರುತ್ತದೆ.
ಇನ್ನು, ಒಂದು ಬೂತ್‌ನಲ್ಲಿ ಶೇ 14ಕ್ಕಿಂತ ಹೆಚ್ಚು ಟೆಂಡರ್ ವೋಟ್‌ಗಳು ಚಲಾವಣೆಯಾದರೆ ಮರುಮತದಾನ ಮಾಡಬಹುದು ಎಂದು ವೈರಲ್ ಸಂದೇಶದಲ್ಲಿ ಹೇಳಿರುವುದು ಸುಳ್ಳಿನಿಂದ ಕೂಡಿದೆ. ಏಕೆಂದರೆ ಈ ಕುರಿತು ಈ ಹಿಂದೆಯೇ ಹೈಕೋರ್ಟ್ ಸೂಚನೆಯ ಅನ್ವಯ ಮಾತ್ರ ಟೆಂಡರ್ಡ್ ಮತಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದಿದೆ..ಈ ಕುರಿತು ಈ ಹಿಂದೆಯೇ ಡೆಕ್ಕನ್ ಹೆರಾಲ್ಡ್ ಕೂಡ ವರದಿಯನ್ನು ಮಾಡಿತ್ತು
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಮತ್ತೊಂದು ಪ್ರತಿಪಾದನೆ ಎಂದರೆ, ‘ಚಾಲೆಂಜ್ ವೋಟ್.. ಇದು ಕೂಡ ಸುಳ್ಳಿನಿಂದಲೇ ಕೂಡಿದೆ ಏಕೆಂದರೆ ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೂ ಮತ ಚಲಾಯಿಸಲು ಸಾಧ್ಯವೇ ಇಲ್ಲ ಹಾಗೂ ಕಾನೂನಿಲ್ಲಿಯೂ ಕೂಡ ಇದಕ್ಕೆ ಅವಕಾಶವಿಲ್ಲ
ಇಷ್ಟು ಮಾತ್ರವಲ್ಲ ತಮ್ಮ ಹತ್ತಿರ ಮತದಾರರ ಗುರುತಿನ ಚೀಟಿ ಇದೆ ಎಂದ ಮಾತ್ರಕ್ಕೆ ಅವರಿಗೆ ಮತ ಚಲಾಯಿಸಲು ಸಾಧ್ಯವಿಲ್ಲ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಇರಲೇಬೇಕು. ಸೆಕ್ಷನ್ 49ಎ ಅಡಿಯಲ್ಲಿ ಚಾಲೆಂಜ್ ವೋಟ್‌ಗೆ ಕೇಳಬಹುದು ಎಂದು ಹೇಳಿರುವುದು ಸುಳ್ಳಾಗಿದ್ದು, ಈ ಕುರಿತು ಎಲ್ಲಿಯೂ ಮಾಹಿತಿಯಿಲ್ಲ.
ಇದನ್ನೂ ಓದಿ : ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮುಸ್ಲಿಮರ ಟೋಪಿ ಧರಿಸಿರಲಿಲ್ಲ, ಇದು ಎಡಿಟೆಡ್ ಫೋಟೊ
ಈ ವಿಡಿಯೋ ನೋಡಿ : ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮುಸ್ಲಿಮರ ಟೋಪಿ ಧರಿಸಿರಲಿಲ್ಲ, ಇದು ಎಡಿಟೆಡ್ ಫೋಟೊ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.