Fact Check: NDA ಕೇವಲ 200 ಸ್ಥಾನ ದಾಟಲಿದೆ ಎಂದು ದೈನಿಕ್ ಭಾಸ್ಕರ್ ಸಮೀಕ್ಷೆ ನಡೆಸಿದೆ ಎಂಬುದು ಸುಳ್ಳು

NDA

2024 ರ ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಹಿಂದಿ ದಿನಪತ್ರಿಕೆ ದೈನಿಕ್ ಭಾಸ್ಕರ್‌ನ ಏಪ್ರಿಲ್ 13 ರ ಆವೃತ್ತಿಯ ಸ್ಕ್ರೀನ್ಶಾಟ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವೈರಲ್ ಸ್ಕ್ರೀನ್ಶಾಟ್‌ನ ಮುಖಪುಟದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯು 10 ರಾಜ್ಯಗಳಲ್ಲಿ NDA ಮುನ್ನಡೆ ಸಾಧಿಸಲಿದೆ ಮತ್ತು ದಕ್ಷಿಣದ ರಾಜ್ಯಗಳಿಂದ NDA ಒಕ್ಕೂಟವು ಕೊಚ್ಚಿಹೋಗುತ್ತದೆ ಎಂದು ಭವಿಷ್ಯ ನುಡಿದಿದೆ ಎಂದು ಹೇಳಲಾಗಿದೆ.

“ದೈನಿಕ್ ಭಾಸ್ಕರ್-ನೆಲ್ಸನ್ ಸಮೀಕ್ಷೆ: 10 ರಾಜ್ಯಗಳಲ್ಲಿ NDA ಮುನ್ನಡೆ ಸಾಧಿಸಿದ್ದು, ಈ 10 ರಾಜ್ಯಗಳಲ್ಲಿ ಮಾತ್ರ 200 ಸ್ಥಾನಗಳನ್ನು ದಾಟಲಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿಯೂ ಬಿಜೆಪಿಗೆ ಮತಗಳನ್ನು ಸೆಳೆಯಲು ಮೋದಿ ವರ್ಚಸ್ಸು ಸಾಕಾಗುವುದಿಲ್ಲ. ಬಿಹಾರ, ಬಂಗಾಳ ಮತ್ತು ಮಹಾರಾಷ್ಟ್ರದಿಂದ ಹೊರಹೋಗಲು NDA ನೋಡುತ್ತಿದೆ.” ಎಂಬ ಸಂದೇಶದೊಂದಿಗೆ ಸಮೀಕ್ಷೆಯ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಈ ವೈರಲ್ ಸ್ಕ್ರೀನ್ ಶಾಟ್ ನಕಲಿಯಾಗಿದ್ದು. ದೈನಿಕ್ ಭಾಸ್ಕರ್ ತನ್ನ ಏಪ್ರಿಲ್ 13 ರಂದು ಯಾವುದೇ ಚುನಾವಣಾ ಸಮೀಕ್ಷೆಯ ವರದಿಯನ್ನು ಪ್ರಕಟಿಸಿಲ್ಲ. ಬದಲಾಗಿ, ಬಿಜೆಪಿ ಜಾಹೀರಾತು ಮತ್ತು ಭೋಪಾಲ್‌ನ ಮಳೆಯ ಬಗ್ಗೆ ಮುಖಪುಟದಲ್ಲಿ ವರದಿ ಮಾಡಿದ್ದಾರೆ. ದೈನಿಕ್ ಭಾಸ್ಕರ್‌ನ ಇತರ ಎಲ್ಲಾ ಆವೃತ್ತಿಗಳ ಮುಖಪುಟಗಳನ್ನು ಸಹ ಪರಿಶೀಲಿಸಿದಾಗ ಸಹ ಇಂಡಿಯಾ ಒಕ್ಕುಟದ ಮುನ್ನಡೆಯನ್ನು ಊಹಿಸುವ ವೈರಲ್ ಸಮೀಕ್ಷೆಯ ವರದಿ ಎಲ್ಲಿಯೂ ಕಂಡುಬಂದಿಲ್ಲ.

ವೈರಲ್ ಸ್ಕ್ರೀನ್ಶಾಟ್‌ನಲ್ಲಿ “ಇಂಡಿಯಾ” ಎಂಬ ಹಿಂದಿ ಪದವನ್ನು ತಪ್ಪಾಗಿ ಬರೆಯಲಾಗಿದೆ. ಇದು ಏಪ್ರಿಲ್ 13, 2024 ರಂದು ಪ್ರಕಟವಾದ ದೈನಿಕ್ ಭಾಸ್ಕರ್‌ನ ಭೋಪಾಲ್ ಆವೃತ್ತಿಯಾಗಿರುವುದನ್ನು ನಾವು ಗಮನಿಸಿದ್ದೇವೆ. ಹೇಳಿದ ದಿನಾಂಕದಿಂದ ನಾವು ಇ-ಪೇಪರ್ ಅನ್ನು ಹುಡುಕಲಾಗಿ ಅಂತಹ ಯಾವುದೇ ವರದಿ ಕಂಡು ಆಬಂದಿಲ್ಲ.

ದೈನಿಕ್ ಭಾಸ್ಕರ್ ಅವರ ವೆಬ್ಸೈಟ್ ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನೋಡಿದಾಗ, ದೈನಿಕ್ ಭಾಸ್ಕರ್ ಪತ್ರಿಕೆಯೇ ವೈರಲ್ ಸ್ಕ್ರೀನ್ಶಾಟ್ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.

ನೆಲ್ಸನ್ ಅವರೊಂದಿಗೆ ದೈನಿಕ್ ಭಾಸ್ಕರ್ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಪತ್ರಿಕೆ ತನ್ನ ಮೊದಲ ಸಮೀಕ್ಷೆಯ ಫಲಿತಾಂಶಗಳನ್ನು ಏಪ್ರಿಲ್ 14 ರಂದು ಬಿಡುಗಡೆ ಮಾಡಿದೆ. 12 ರಾಜ್ಯಗಳ 308 ಲೋಕಸಭಾ ಕ್ಷೇತ್ರಗಳಲ್ಲಿ ‘ಮೇರಾ ವೋಟ್ ಮೇರಿ ಮರ್ಜಿ‘ ಎಂಬ ಸಮೀಕ್ಷೆಯನ್ನು ನಡೆಸಲಾಯಿತು. ಶೇ.48ರಷ್ಟು ಮತದಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಆಯ್ಕೆ ಮಾಡಲು ಬಯಸಿದ್ದರೆ, ಶೇ.37ರಷ್ಟು ಮಂದಿ ನಿರುದ್ಯೋಗ ಹೆಚ್ಚಳದಿಂದ ಅಸಮಾಧಾನಗೊಂಡಿದ್ದಾರೆ. ವೈರಲ್ ಸ್ಕ್ರೀನ್ಶಾಟ್‌ನಲ್ಲಿ ಹೇಳಿರುವಂತೆ ಈ ಸಮೀಕ್ಷೆಯು 10 ರಾಜ್ಯಗಳಲ್ಲಿ ಇಂಡಿಯಾ ಒಕ್ಕುಟವು ಯಾವುದೇ ಮುನ್ನಡೆ ಸಾಧಿಸುವುದನ್ನು ಊಹಿಸಿಲ್ಲ.


ಇದನ್ನು ಓದಿ: Fact Check: ಉದ್ಯಾನವನಗಳಲ್ಲಿ ಯೋಗ ಮಾಡುವುದನ್ನು ನಾವು ತಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಲ್ಲ


ವಿಡಿಯೋ ನೊಡಿ: ಮೈಸೂರಿನ ಸಭೆಯಲ್ಲಿ ದೇವೇಗೌಡರು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕರೆಕೊಟ್ಟಿದ್ದಾರೆ ಎಂಬುದು ಸುಳ್ಳು


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *