Fact Check | ಜುಮ್ಲಾಗಳ ವಿರುದ್ಧ ಅಮಿರ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ ಎಂಬ ವಿಡಿಯೋ ಎಡಿಟೆಡ್‌ ಆಗಿದೆ

“ಅಮೀರ್ ಖಾನ್ ‘ಜುಮ್ಲಾವಾದ’ ಅಥವಾ ಬಿಜೆಪಿಯ ಸುಳ್ಳು ರಾಜಕೀಯ ಭರವಸೆಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ವೀಡಿಯೊವನ್ನು ಕೊನೆಯವರೆಗೆ ನೋಡಿ.” ಎಂಬ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಅಮಿರ್‌ ಖಾನ್‌ ಕಾಂಗ್ರೆಸ್‌ ಅನ್ನು ಈ ಬಾರಿ ಬೆಂಬಲಿಸುತ್ತಿದ್ದಾರೆ ಎಂದು ಸುಳ್ಳು ಮಾಹಿತಿಯನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ. ಆ ಮೂಲಕ ಅಮಿರ್‌ ಖಾನ್‌ ವಿರುದ್ಧ ದ್ವೇಷವನ್ನು ಕೂಡ ಹರಡುವ ಪ್ರಯತ್ನವನ್ನು ಮಾಡಲಾಗಿದೆ.

ಇನ್ನು ಈ ವಿಡಿಯೋದಲ್ಲಿ ನಟ ಅಮಿರ್‌ ಖಾನ್‌ ” ಭಾರತ ಬಡ ರಾಷ್ಟ್ರವಲ್ಲ, ಭಾರತದ ಪ್ರತಿಯೊಬ್ಬ ಪ್ರಜೆಯು ಕೂಡ ಲಕ್ಷಾಧಿಶ್ವರ ಎಂದು” ಹೇಳಿರುವುದನ್ನು ಕಾಣಬಹುದಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಅಮಿರ್‌ ಖಾನ್‌ ವಿರುದ್ಧ ಸಾಕಷ್ಟು ಮಂದಿ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಈ ವಿಡಿಯೋ ವಿವಿಧ ಕಾರಣಗಳಿಂದ ಹಲವು ಅನುಮಾನಗಳನ್ನು ಕೂಡ ಹುಟ್ಟು ಹಾಕಿದೆ. ಹಾಗಾಗಿ ವಿಡಿಯೋದ ಅಸಲಿಯತ್ತು ಏನು ಎಂಬುದನ್ನು ಈ ಅಂಕಣದಲ್ಲಿ ಸಂಪೂರ್ಣವಾಗಿ ನೋಡೋಣ

https://twitter.com/MiniforIYC/status/1779564625849442812

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿತ್ತು. ಬಳಿಕ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಈ ಕುರಿತು ಪರಿಶೀಲನೆಯನ್ನು ಕೂಡ ನಡೆಸಿತು. ಈ ವೇಳೆ ವೈರಲ್‌ ವಿಡಿಯೋಗೆ ಹೋಲಿಕೆಯಾಗುವ ರೀತಿ ಹಲವು ವಿಡಿಯೋಗಳು ಕಂಡು ಬಂದಿದ್ದವು. ಆದರೆ ಅವುಗಳಲ್ಲಿ ಬಹುತೇಖವು ವೈರಲ್‌ ವಿಡಿಯೋಗೆ ಹೋಲಿಕೆಯಾಗುವ ಸುಳ್ಳನ್ನೆ ಹಂಚಿಕೊಂಡಿದ್ದವು. ಇದೇ ವೇಳೆ ಯುಟ್ಯುಬ್‌ನ ವಿಡಿಯೋವೊಂದು ಪತ್ತೆಯಾಗಿದೆ.

ಈ ವಿಡಿಯೋವನ್ನು ಗಮನಿಸಿದಾಗ ಅಮಿರ್‌ ಖಾನ್‌ ಹೇಳಿಕೆಯ ಮೂಲ ವಿಡಿಯೋ 30 ಆಗಸ್ಟ್‌ 2016ರಂದು ಸತ್ಯಮೇವ ಜಯತೆ ಎಂಬ ಯುಟ್ಯೂಬ್‌ ಚಾನಲ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಎಲ್ಲಿಯೂ ಅಮಿರ್‌ ಖಾನ್‌ ಅವರು ಜುಮ್ಲಾ ಎಂಬ ಪದವನ್ನು ಬಳಸಿಲ್ಲ. ಇದರ ಜೊತೆಗೆ 15 ಲಕ್ಷ ನಿಮ್ಮ ಖಾತೆಗೆ ಬೀಳಲಿದೆ ಎಂಬ ಪದಗಳನ್ನು ಬಳಸಿಲ್ಲ ಎಂಬುದು ಪೂರ್ಣ ವಿಡಿಯೋ ನೋಡಿದ ಮೇಲೆ ಸ್ಪಷ್ಟವಾಗಿದೆ.

ಹಾಗೇಯೆ ಈ ವಿಡಿಯೋದಲ್ಲಿನ ಅಮಿರ್‌ ಖಾನ್‌ ಅವರ ಹಾವ, ಭಾವ ಮತ್ತು ವೈರಲ್‌ ವಿಡಿಯೋದಲ್ಲಿನ ಅಮಿರ್‌ ಖಾನ್‌ ಅವರ ಹಾವ, ಭಾವ ಒಂದೇ ರೀತಿಯಲ್ಲಿರುವುದು ಕೂಡ ಗಮನಿಸಬಹುದಾಗಿದೆ ಈ ವೈರಲ್‌ ವಿಡಿಯೋದಲ್ಲಿ ಆಡಿಯೋ ಕೊಂಚ ಬಿನ್ನವಾಗಿರುವುದನ್ನು ಕಾಣಬಹುದಾಗಿದೆ. ಮೂಲ ವಿಡಿಯೋದಲ್ಲಿನ ಧ್ವನಿ ಮತ್ತು ಲಿಪ್‌ ಸಿಂಕ್‌ ಹೊಂದಿಕೆಯಾಗಿದ್ದು ವೈರಲ್‌ ವಿಡಿಯೋದಲ್ಲಿಇದು ತಾಳೆಯಾಗಿ. ಇನ್ನು ಈ ಕುರಿತು ವಿಜಯ್‌ ಪಟೇಲ್‌ ಎಂಬುವವರು ಕೂಡ ಟ್ವಿಟ್‌ ಮಾಡಿದ್ದು. ಈ ವಿಡಿಯೋ ಎಡಿಟೆಡ್‌ ಆಗಿದೆ. ಮತ್ತು ಈ ವಿಡಿಯೋದಲ್ಲಿ ಎಐ ವಾಯ್ಸ್‌ ಬಳಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್‌ ಆಗುತ್ತಿರುವ ವಿಡಿಯೋ ಸತ್ಯಮೇವ ಜಯತೆ ಕಾರ್ಯಕ್ರಮದ್ದಾಗಿದ್ದು, ಕಿಡಿಗೇಡಿಗಳು ಇದೇ ವಿಡಿಯೋವನ್ನು ಬಳಸಿಕೊಂಡು ಅದರ ವಾಯ್ಸ್‌ ಅನ್ನು ಬದಲಾಯಿಸಿದ್ದಾರೆ. ಹಾಗೆಯೇ ವಿಡಿಯೋವಿನ ಆಯ್ದ ಕೆಲ ಭಾಗದ ಆಡಿಯೋದಲ್ಲಿ ಬದಲಾವಣೆಯನ್ನು ಕೂಡ ಮಾಡಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check: 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು


ವಿಡಿಯೋ ನೋಡಿ : Fact Check: 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *