Fact Check | ರಾಮನವಮಿಗೆ ಕಲ್ಲು ತೂರಾಟ ನಡೆಸಲು ಮುಸ್ಲಿಂ ಸುಮುದಾಯದಿಂದ ಸಂಚು ಎಂಬುದು ಸುಳ್ಳು

“ರಾಮ ನವಮಿಗೆ ಅವರ ತಯಾರಿ ನಡೆದಿದೆ, ನೀವೇನು ಮಾಡುತ್ತಿದ್ದೀರಿ? ರಾಂಚಿಯಲ್ಲಿ ಛಾವಣಿಗಳ ಮೇಲೆ ಕಲ್ಲುಗಳನ್ನು ಸಂಗ್ರಹಿಸಿಡಲಾಗಿದೆ. ನಾಳೆ ಬಂಗಾಳ, ಬಿಹಾರ, ಗುಜರಾತ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಿಂದ ಕಲ್ಲು ತೂರಾಟದ ಸುದ್ದಿ ಬರಲಿದೆ. ಜಾಗರೂಕರಾಗಿರಿ, ಎಚ್ಚರವಾಗಿರಿ, ಭಯಪಡಬೇಡಿ” ಎಂದು ಸಾಮಾಜಿಕ ಜಾಲತಾಣದಲ್ಲಿ Ajeet Bharti(@ajeetbharti) ಎಕ್ಸ್‌ ಖಾತೆ ಬಳಕೆದಾರರೊಬ್ಬರು ಕೋಮುದ್ವೇಶವನ್ನು ಬಿತ್ತುವ ಸಂದೇಶದೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಅಂಕಣವನ್ನು ಬರೆಯುವ ವೇಳೆ ಈ ಈತ ಹಂಚಿಕೊಂಡಿರುವ ಪೋಸ್ಟ್‌ ಅನ್ನು 478.5 ಸಾವಿರ ಜನ ನೋಡಿದ್ದು, 14 ಸಾವಿರ ಮಂದಿ ಲೈಕ್‌ ಕೂಡ ಮಾಡಿದ್ದಾರೆ 6.2 ಸಾವಿರ ಮಂದಿ ರೀಟ್ವಿಟ್‌ ಮಾಡಿದ್ದಾರೆ.

ಇನ್ನೊಬ್ಬ ಎಕ್ಸ್‌ ಖಾತೆ ಬಳಕೆದಾರ Ritik (@ThenNowForeve) ಎಂಬಾತ ತನ್ನ ಎಕ್ಸ್‌ ಖಾತೆಯಲ್ಲಿ “ರಾಮನವಮಿಯ ಒಂದು ದಿನ ಮುಂಚೆ ರಾಂಚಿ ಪೊಲೀಸರು ಡ್ರೋನ್‌ಗಳ ಸಹಾಯದಿಂದ ಸುಮಾರು 10 ಮನೆಗಳ ಟೆರೇಸ್‌ ಮೇಲೆ ಕಲ್ಲು ಸಂಗ್ರಹಿಸಿಟ್ಟಿರುವುದನ್ನು ಪತ್ತೆ ಮಾಡಿದ್ದಾರೆ. ಆ 10 ಮನೆಗಳು ಯಾವ ಸಮುದಾಯಕ್ಕೆ ಸೇರಿರಬಹುದು ನೀವೇ ಊಹಿಸಿ”  ಎಂದು ಬರೆದುಕೊಂಡು ಮುಸ್ಲಿಂ ಸಮುದಾಯದ ಮೇಲೆ ಅನುಮಾನ ಮೂಡುವಂತೆ ಬರೆದುಕೊಂಡಿದ್ದಾನೆ. ಈ ಅಂಕಣ ಬರೆಯುವ ಸಮಯದಲ್ಲಿ ಈತನ ಪೋಸ್ಟ್‌ 573.7 ಸಾವಿರು ವೀಕ್ಷಣೆ ಕಂಡಿದ್ದು, 9.2 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ. 3.9ಸಾವಿರ ಮಂದಿ ರೀಟ್ವಿಟ್‌ ಕೂಡ ಮಾಡಿದ್ದಾರೆ.

https://twitter.com/ThenNowForeve/status/1780130188900135108

ಇನ್ನು ಹೀಗೆ ಜನ ಸಾಮಾನ್ಯರೇ ಸುಳ್ಳು ಸುದ್ದಿ ಹಂಚಿಕೊಳ್ಳುವುದರ ಜೊತೆಗೆ ಬಿಜೆಪಿ ನಾಯಕ ಎನಿಸಿಕೊಂಡ ನವೀನ್ ಜಿಂದಾಲ್ (@naveenjindalbjp) ಕೂಡ ಮುಸಲ್ಮಾನ ಸಮುದಾಯದ ಮೇಲೆ ಅನುಮಾನ ಬರುವಂತೆ ಟ್ವಿಟ್‌ ಮಾಡಿದ್ದಾರೆ. ಅವರ ಟ್ವಿಟ್‌ನಲ್ಲಿ  “ರಾಮನವಮಿಗೂ ಮುನ್ನ ಮನೆಗಳ ಛಾವಣಿಯ ಮೇಲೆ ಕಲ್ಲುಗಳ ರಾಶಿ. ಇವು ಯಾವ “ಸಮುದಾಯದ” ಮನೆಗಳು? ರಾಂಚಿ ಪೊಲೀಸರು ಡ್ರೋನ್‌ಗಳನ್ನು ಬಳಸಿ ಕನಿಷ್ಠ 10 ಮನೆಗಳನ್ನು ಪತ್ತೆ ಮಾಡಿದ್ದಾರೆ” ಎಂದು ಬರೆದುಕೊಂಡು ಇದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ಕುರಿತು 16, ಏಪ್ರಿಲ್  2024ರಂದು  ಸ್ಪಷ್ಟೀಕರಣ ಕೊಟ್ಟಿರುವ ರಾಂಚಿ ಪೊಲೀಸರು, “ಮೆರವಣಿಗೆಗಳು ಸಾಗುವ ರಸ್ತೆಯ ಪಕ್ಕದ ಕಟ್ಟಡಗಳನ್ನು ಡ್ರೋನ್ ಬಳಸಿ ತಪಾಸಣೆ ನಡೆಸುವುದು ಸರ್ವೆ ಸಾಮಾನ್ಯ. ಇದು ಪೊಲೀಸರ ಭದ್ರತಾ ಕ್ರಮದ ಒಂದು ಭಾಗ. ಹಲವು ಜಿಲ್ಲೆಗಳಲ್ಲಿ ಇದನ್ನು ಮಾಡಲಾಗುತ್ತಿದ್ದು, ಯಾರದ್ದಾದರೂ ಮೇಲ್ಛಾವಣಿಯ ಮೇಲೆ ಕಲ್ಲು, ಇಟ್ಟಿಗೆ, ಮರಳು ಮುಂತಾದ ಯಾವುದೇ ನಿರ್ಮಾಣ ಸಾಮಗ್ರಿಗಳು ಇದ್ದರೆ, ಅದನ್ನು ತೆರವುಗೊಳಿಸಲು ಸಂಬಂಧಿಸಿದ ಮನೆ ಮಾಲೀಕರನ್ನು ಕೋರಲಾಗ್ತಿದೆ” ಎಂದಿದ್ದಾರೆ.

ಈ ವಿಷಯದ ಕುರಿತು altnews.in ರಾಂಚಿ ಎಸ್‌ಎಸ್‌ಪಿ ಚಂದನ್‌ ಕುಮಾರ್‌ ಸಿನ್ಹಾ ಅವರೊಂದಿಗೆ ಮಾತನಾಡಿದ್ದು, “ಈ ವಿಷಯದಲ್ಲಿ ಯಾವುದೇ ಕೋಮು ಆಯಾಮವಿಲ್ಲ. ನೋಟಿಸ್ ಸ್ವೀಕರಿಸಿದ ಮನೆ ಮಾಲೀಕರು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಲ್ಲ. ಮೆರವಣಿಗೆ ಹೊರಡುವ ಮಾರ್ಗದ ಮೇಲ್ವಿಚಾರಣೆ ಮಾಡುವುದು ಮತ್ತು ನಡುವೆ ಬರುವ ಕಟ್ಟಡಗಳ ಮೇಲ್ಛಾವಣಿಯ ಮೇಲೆ ಕಲ್ಲು, ಇಟ್ಟಿಗೆ, ಮರಳಿನಂತಹ ನಿರ್ಮಾಣ ಸಾಮಗ್ರಿಗಳನ್ನು ಸಂಗ್ರಹಿಸಿಡದಂತೆ ಎಚ್ಚರಿಕೆ ವಹಿಸುವುದು ಆಡಳಿತದ ವಾಡಿಕೆಯ ಕ್ರಮವಾಗಿದೆ” ಎಂದು ತಿಳಿಸಿದ್ದಾರೆ ಎಂದು ಮೊಹಮದ್‌ ಜುಬೇರ್‌ ಮಾಹಿತಿಯನ್ನು ನೀಡಿದ್ದಾರೆ

 

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಲು ಮುಸ್ಲಿಂ ಸಮುದಾಯದವರು ಕಲ್ಲುಗಳನ್ನು ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check: ಮೈಸೂರಿನ ಸಭೆಯಲ್ಲಿ ದೇವೇಗೌಡರು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕರೆಕೊಟ್ಟಿದ್ದಾರೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : Fact Check: ಮೈಸೂರಿನ ಸಭೆಯಲ್ಲಿ ದೇವೇಗೌಡರು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕರೆಕೊಟ್ಟಿದ್ದಾರೆ ಎಂಬುದು ಸುಳ್ಳು 


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *