ಏಳು ಹಂತದ 2024 ರ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದ ನಂತರ, ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಗಳು (ಎಸ್‌ಸಿಗಳು), ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು) ಮತ್ತು ಹಿಂದುಳಿದ ವರ್ಗಗಳು (ಒಬಿಸಿ) ವರ್ಗಗಳ ‘ಅಸಂವಿಧಾನಿಕ ಮೀಸಲಾತಿ’ಯನ್ನು ರದ್ದುಗೊಳಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
“ನಿಮ್ಮ ಮತ ಚಲಾಯಿಸುವ ಮೊದಲು, ಗೃಹ ಸಚಿವ ಅಮಿತ್ ಶಾ ಅವರ ಈ ಹೇಳಿಕೆಯನ್ನು ಕೇಳಿ, ತೆಲಂಗಾಣದಲ್ಲಿ ಅವರು SC, ST ಮತ್ತು OBC ಮೀಸಲಾತಿಯನ್ನು ಕೊನೆಗೊಳಿಸುವಂತೆ ಹೇಳುತ್ತಿದ್ದಾರೆ, ಅದಕ್ಕಾಗಿಯೇ ಸಂವಿಧಾನವನ್ನು ಬದಲಾಯಿಸಲು 400 ಸ್ಥಾನಗಳನ್ನು ಕೇಳಲಾಗುತ್ತಿದೆ.” ಎಂದು ಪ್ರತಿಪಾದಿಸಿ ಜನರು ಅಮಿತ್ ಶಾ ಅವರ ಭಾಷಣದ ವಿಡಿಯೋ ಒಂದರ ತುಣುಕನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್: ಇದು ಎಡಿಟೆಡ್ ವಿಡಿಯೊ ಆಗಿದೆ. ಅಮಿತ್ ಶಾ ಮೂಲ ವೀಡಿಯೊದಲ್ಲಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ಮುಸ್ಲಿಮರ ಅಸಂವಿಧಾನಿಕ ಮೀಸಲಾತಿಯನ್ನು ರದ್ದುಪಡಿಸುವ ಕುರಿತು ಮಾತನಾಡಿದ್ದಾರೆ. ಏಪ್ರಿಲ್ 24, 2023 ರಂದು ಹೈದರಾಬಾದ್ ಬಳಿಯ ಚೆವೆಲ್ಲಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, ಧರ್ಮಾಧಾರಿತ ಮೀಸಲಾತಿಗಳನ್ನು ‘ಅಸಂವಿಧಾನಿಕ’ ಎಂದು ಕರೆದಿದ್ದಾರೆ.
ಮೂಲ ವಿಡಿಯೋದಲ್ಲಿ “ಬಿಜೆಪಿ ಸರ್ಕಾರ ರಚನೆಯಾದರೆ, ನಾವು ಅಸಂವಿಧಾನಿಕ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ. ತೆಲಂಗಾಣದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳು ಈ ಅವಕಾಶಕ್ಕೆ ಅರ್ಹವಾಗಿವೆ ಮತ್ತು ಮುಸ್ಲಿಂ ಮೀಸಲಾತಿಯನ್ನು ಕೊನೆಗೊಳಿಸುವ ಮೂಲಕ ಅವರಿಗೆ ಅದೇ ಅವಕಾಶ ನೀಡಲಾಗುವುದು” ಎಂದಿದ್ದಾರೆ.
NDTV ಏಪ್ರಿಲ್ 24, 2023 ರಂದು ‘ತೆಲಂಗಾಣದಲ್ಲಿ ಮುಸ್ಲಿಂ ಮೀಸಲಾತಿಯನ್ನು ರದ್ದು ಮಾಡಲು ಅಮಿತ್ ಶಾ ಪ್ರತಿಜ್ಞೆ’ ಎಂಬ ಶೀರ್ಷಿಕೆಯ ವೀಡಿಯೊವನ್ನು ಪ್ರಕಟಿಸಿದೆ.
ಏಪ್ರಿಲ್ 24, 2023 ರಂದು ಟೈಮ್ಸ್ ಆಪ್ ಇಂಡಿಯಾ ವರದಿ ಮಾಡಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ 4 ಶೇಕಡಾ ಮುಸ್ಲಿಂ ಮೀಸಲಾತಿಯನ್ನು ಕೊನೆಗೊಳಿಸುವುದಾಗಿ ಶಾ ಭರವಸೆ ನೀಡಿದ್ದಾರೆ ಎಂದು ವರದಿ ಮಾಡಿದೆ. ಧರ್ಮ ಆಧಾರಿತ ಕೋಟಾಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದು ಅವರು ಹೇಳಿದ್ದಾರೆ.
ಆದ್ದರಿಂದ, ಅಮಿತ್ ಶಾ ಅವರ ವೈರಲ್ ವಿಡಿಯೋ ಹಳೆಯದು ಮತ್ತು ಅದನ್ನು ಎಡಿಟ್ ಮಾಡಲಾಗಿದೆ. ಮತ್ತು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿ ಕೋಟಾಗಳನ್ನು ರದ್ದುಗೊಳಿಸುವಂತೆ ಅವರು ಕರೆ ನೀಡಿರುವುದು ಸುಳ್ಳು.
ಇದನ್ನು ಓದಿ: ನೇಹಾ ಹಿರೇಮಠ್ ಮನೆಗೆ ಕಾಂಗ್ರೆಸ್‌ನ ಒಬ್ಬ ವ್ಯಕ್ತಿಯೂ ಭೇಟಿ ನೀಡಿಲ್ಲ ಎಂಬುದು ಸಂಪೂರ್ಣ ಸುಳ್ಳು
ವಿಡಿಯೋ ನೋಡಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು..!
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ