ಸಾಮಾಜಿಕ ಜಾಲತಾಣದಲ್ಲಿ “ಮಹಿಳೆಯೊಬ್ಬರು ದೇವಸ್ಥಾನದ ಒಳಗಡೆ ಸಿಗರೇಟ್ ಸೇದಿ ಹೊರ ನಡೆಯುವಾಗ ಜಾರಿ ಬಿದ್ದಿದ್ದಾರೆ.” ಎಂಬ ಬರಹಗಳೊಂದಿಗೆ ವಿಡಿಯೋವೊಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ.
https://twitter.com/bhagwakrantee/status/1800852506416910393
ಈ ವಿಡಿಯೋದಲ್ಲಿ ಕೂಡ ಮಹಿಳೆ ಒಬ್ಬರು ದೇವಸ್ಥಾನದ ಒಳಗೆ ಸಿಗರೇಟ್ ಸೇದಲು ಯತ್ನಿಸುವುದು ಮತ್ತು ಹೊರ ನಡೆದಾಗ ಬೀಳುವುದನ್ನ ಕಾಣಬಹುದಾಗಿದೆ. ಹೀಗಾಗಿ ಈ ವಿಡಿಯೋವನ್ನು ನೋಡಿದ ಬಹುತೇಕರು ಇದು ನಿಜವಾದ ವಿಡಿಯೋ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಸತ್ಯಾಸತ್ಯತೆಯನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.
एक नव हिंदु लडकी अपने बॉयफ्रेंड से मोबाइल पर बात करते हुए, मंदिर में रखी आरती के दीपक से सिगरेट जलाकर मंदिर में ही पीने लगी!
फिसलकर गिरी तो हड्डी टूट गई।
क्या किसी अन्य धार्मिक स्थल पर, इस तरह का फूहड़ता फैलाती तो सुरक्षित होती?
घटना – मंदिर के CC-TV FOOTAGE में कैद हो गई pic.twitter.com/hqvR01uR1D
— VIKAS JHA (@vikasnisu_007) June 14, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ಆಗುತ್ತಿರುವ ವಿಡಿಯೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 3RD EYE ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋವೊಂದು ಕಂಡು ಬಂದಿದೆ.
ಹೀಗೆ ಕಂಡು ಬಂದ ಯೂಟ್ಯೂಬ್ ವಿಡಿಯೋ ವೈರಲ್ ವಿಡಿಯೋದ ಪೂರ್ಣ ಆವೃತ್ತಿಯ ದೃಶ್ಯಾವಳಿಗಳಾಗಿದ್ದು, ಈ ವಿಡಿಯೋದ ಡಿಸ್‌ಕ್ರಿಪ್ಷನ್‌ನಲ್ಲಿ ಇದು ಮನೋರಂಜನೆಯ ಉದ್ದೇಶಗಳಿಗಾಗಿ ಮತ್ತು ಸಾಮಾಜಿಕ ತಿಳುವಳಿಕೆಗಾಗಿ ಈ ವಿಡಿಯೋವನ್ನು ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಮತ್ತು ಇದು ಪೂರ್ವ ನಿಯೋಜಿತ ವಿಡಿಯೋ ಎಂಬುದು ಸ್ಪಷ್ಟವಾಗಿದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ ಇದೆ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳಲಾದ ಮತ್ತೊಂದು ವಿಡಿಯೋದಲ್ಲಿ ವೈರಲ್ ವಿಡಿಯೋದಲ್ಲಿನ ಕೆಲವರು ಕಂಡು ಬಂದಿದ್ದಾರೆ
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ದೇವಸ್ಥಾನದಲ್ಲಿ ಮಹಿಳೆಯೊಬ್ಬರು ಸಿಗರೇಟ್ ಸೇದಿದ್ದಾರೆ ಎಂಬ ವಿಡಿಯೋ ಪೂರ್ವ ನಿಯೋಜಿತ ವಿಡಿಯೋವಾಗಿದ್ದು ಇದು ಮನೋರಂಜನೆಯ ಉದ್ದೇಶಕ್ಕಾಗಿ ಚಿತ್ರಿಕರಿಸಲಾಗಿದೆ ಮತ್ತು ಇದು ನಿಜವಾದ ಘಟನೆ ಅಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಶೇರ್ ಮಾಡುವ ಮೊದಲು ಒಮ್ಮೆ ಪರಿಶೀಲಿಸುವುದು ಉತ್ತಮ.
ಇದನ್ನೂ ಓದಿ : ಶ್ರೀಲಂಕಾದಲ್ಲಿ ಮುಸ್ಲಿಂ ವೈದ್ಯರೊಬ್ಬರು 4 ಸಾವಿರ ಸಿಂಹಳೀಯ ಬೌದ್ಧ ಮಹಿಳೆಯರ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.