ಗಾಂಧೀಜಿಯವರೊಂದಿಗೆ ರಾಹುಲ್‌ ಗಾಂಧಿ ಮಾತನಾಡಿದ್ದೇನೆಂದು ಸಮರ್ಥಿಸಿಕೊಂಡಿದ್ದಾರೆ ಎಂಬುವುದು ಸುಳ್ಳು

ರಾಹುಲ್‌ ಗಾಂಧಿಯವರು ತಾವು ಮಹಾತ್ಮ ಗಾಂಧೀಜಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಂಬ ವಿಡಿಯೋವೊಂದು ವೈರಲ್‌ ಆಗಿದ್ದು, ಇದೀಗ ಆ ವಿಡಿಯೋ ಸುಳ್ಳು ಮತ್ತು ಬೇರೆ ವಿಡಿಯೋವೊಂದರ ಎಡಿಟೆಡ್‌ ವಿಡಿಯೋ ಎಂದು ತಿಳಿದ ತಕ್ಷಣ ಅವುಗಳನ್ನ ಸಾಮಾಜಿಕ ಜಾಲತಾಣದಿಂದ ತೆಗೆಯಲಾಗಿದೆ.

 

ಸುಳ್ಳು ; ರಾಹುಲ್‌ ಗಾಂಧಿ ಅವರು ತಾವು ಮಹಾತ್ಮ ಗಾಂಧೀಜಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಮತ್ತು ಮಹಾತ್ಮ ಗಾಂಧಿ ಅವರೊಂದಿಗೆ ಸಣ್ಣ ಭಿನ್ನಾಭಿಪ್ರಾಯ ಹೊಂದಿದ್ದೆ, ಕೊನೆಗೆ ಗಾಂಧೀಜಿ ಅವರ ನಿಲುವು ಸರಿ ಇದೆ ಎಂದೆನೆಸಿತು ಎಂದು ಹೇಳಿಕೊಂಡಿದ್ದಾರೆ ; ವೈರಲ್‌ ವಿಡಿಯೋ

ಸತ್ಯ ; ರಾಹುಲ್‌ ಗಾಂಧಿ ಅವರು ಗಾಂಧೀಜಿ ಅವರನ್ನ ಭೇಟಿ ಮಾಡಿದ್ದೇನೆಂದು ಹೇಳಿರುವ ವಿಡಿಯೋ ಎಡಿಟೆಡ್‌ ವಿಡಿಯೋ ಆಗಿದೆ. ಈ ವಿಡಿಯೋವನ್ನು ಫೆಬ್ರವರಿ 2022 ರಲ್ಲಿ ನಡೆದ ಕಾಂಗ್ರೆಸ್‌ನ ಗುಜರಾತ್ ಘಟಕದ ಚಿಂತನ್ ಶಿಭಿರ್ ಅಧಿವೇಶನದಿಂದ ತೆಗೆದುಕೊಳ್ಳಲಾಗಿದೆ. ಆ ವಿಡಿಯೋದಲ್ಲಿ ರಾಹುಲ್ ಗಾಂಧಿಯವರು ನೆಹರು ಮತ್ತು ಗಾಂಧೀಜಿ ಅವರ ಪತ್ರ ಸಂಭಾಷಣೆಯ ಭಾವರ್ಥವನ್ನ ವಿವರಿಸುವ ತುಣುಕು ಇದೆ.

ಪೂರ್ಣ ವಿಡಿಯೋ ಇಲ್ಲಿದೆ ನೋಡಿ; ಗಾಂಧೀಜಿಯವರೊಂದಿಗೆ ರಾಹುಲ್‌ ಗಾಂಧಿ ಮಾತನಾಡಿದ್ದೇನೆಂದು ಸಮರ್ಥಿಸಿಕೊಂಡಿದ್ದಾರೆ ಎಂಬುವುದು ಸುಳ್ಳು

ಇದನ್ನೆ ಬಳಕೆ ಮಾಡಿಕೊಂಡಿರುವ ಕಿಡಿಗೇಡಿಗಳು ರಾಹುಲ್‌ ಗಾಂಧಿ, ಮಹಾತ್ಮ ಗಾಂಧಿ ಅವರೊಂದಿಗೆ ಮಾತನಾಡಿದ್ದೆನೆಂದು ಹೇಳುತ್ತಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

Leave a Reply

Your email address will not be published. Required fields are marked *