ಅಮರ್ತ್ಯ ಸೆನ್ ನಿಧನದ ಸುದ್ದಿ ಫೇಕ್ ಎಂದ ಮಗಳು ನಂದನ ದೇವ್ ಸೆನ್

ಅಮರ್ತ್ಯ ಸೆನ್

ನೊಬೆಲ್ ವಿಜೇತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್ (89) ನಿಧನರಾಗಿದ್ದಾರೆ ಎಂದು ಹಲವಾರು ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿವೆ. ಪಿಟಿಐ ಸುದ್ದಿ ಸಂಸ್ಥೆಯಿಂದ ಬಂದ ಮಾಹಿತಿ ಆಧರಿಸಿ ಈ ಸುದ್ದಿ ಮಾಡಲಾಗಿದೆ. ಆದರೆ ಅಮರ್ತ್ಯ ಸೆನ್ ಆರೋಗ್ಯದಿಂದ ಇದ್ದಾರೆ. ಅದು ಸುಳ್ಳು ಸುದ್ದಿ ಎಂದು ಅವರ ಮಗಳು ನಂದನ ದೇವ್ ಸೆನ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ನಂದನ ದೇವ್ ಸೆನ್, “ಸ್ನೇಹಿತರೇ, ನಿಮ್ಮ ಕಾಳಜಿಗೆ ಧನ್ಯವಾದಗಳು. ಆದರೆ ಅದು ಸುಳ್ಳು ಸುದ್ದಿ. ನನ್ನ ತಂದೆ ಚೆನ್ನಾಗಿದ್ದಾರೆ. ಕೇಂಬ್ರಿಡ್ಜ್‌ನಲ್ಲಿ ಅವರೊಟ್ಟಿಗೆ ಒಂದು ವಾರ ನಮ್ಮ ಕುಟುಂಬ ಸಮಯ ಕಳೆದಿದ್ದೇವೆ. ನಮಗೆ ಬೈ ಹೇಳುವಾಗ ಅವರ ಅಪ್ಪುಗೆ ಎಂದಿನಂತೆ ಶಕ್ತಿಯುತವಾಗಿತ್ತು. ಅವರು ಹಾರ್ವರ್ಡ್‌ನಲ್ಲಿ ವಾರಕ್ಕೆ 2 ಕೋರ್ಸ್‌ಗಳನ್ನು ಕಲಿಸುತ್ತಿದ್ದಾರೆ. ಜೆಂಡರ್ ಪುಸ್ತಕದ ಕುರಿತು ಕೆಲಸ ಮಾಡುತ್ತಿದ್ದಾರೆ – ಎಂದಿನಂತೆ ಬ್ಯುಸಿ ಆಗಿದ್ದಾರೆ ಎಂದಿದ್ದಾರೆ.

ಹಾಗಾಗಿ ಅಮರ್ತ್ಯ ಸೆನ್ ನಿಧನ ಎಂಬುದು ಸುಳ್ಳು ಸುದ್ದಿಯಾಗಿದೆ.


ಇದನ್ನೂ ಓದಿ; ಪಾಕಿಸ್ತಾನ – ಬಾಂಗ್ಲಾದೇಶ ಕಾರಿಡಾರ್‌ಗೆ ಒಪ್ಪಿದ್ದಕ್ಕಾಗಿ ಗಾಂಧಿಯನ್ನು ಗೋಡ್ಸೆ ಕೊಂದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *