ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ ದೇಶದ ರಾಜಕೀಯಕ್ಕೆ ಸಂಬಂಧ ಪಟ್ಟಂತೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಾದ ಸುಳ್ಳು ಸುದ್ದಿಗಳು ಹರಡಲು ಪ್ರಾರಂಭವಾಗುತ್ತಿದೆ. ಇದರಿಂದ ಜನರನ್ನು ರಾಜಕೀಯವಾಗಿ ದಾರಿ ತಪ್ಪಿಸುವಲ್ಲಿ ಕೆಲ ರಾಜಕೀಯ ಪಕ್ಷಗಳು ಯಶಸ್ವಿಯಾಗುತ್ತಿದ್ದಾರೆ. ಇದರಂತೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುಳ್ಳು ಸುದ್ದಿಯೊಂದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ನೀಡಿಲಾಗಿದೆ. ಸಂಪೂರ್ಣವಾಗಿ ಓದಿ.
ಸುಳ್ಳು : ಬ್ರಿಟೀಷರಿಂದ ಭಾರತ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕಾದರೆ ಕಾಂಗ್ರೆಸ್‌ನಿಂದ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿತ್ತು. ಆ ಒಪ್ಪಂದವನ್ನು ರಹಸ್ಯವಾಗಿ ಇಡಲಾಗಿದೆ. ಆ ಒಪ್ಪಂದದ ಪ್ರಕಾರ ಭಾರತದ ಸಂವಿಧಾನದಲ್ಲಿ ಕೆಲವು ನಿಯಮಗಳಿಗೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಮತ್ತು ಭಾರತವು ಬ್ರಿಟನ್ ರಾಜನಿಗೆ ಹತ್ತು ಶತಕೋಟಿಗಳ ಪಿಂಚಣಿಯನ್ನು ಪಾವತಿಸಬೇಕು ಹಾಗೂ 30 ಸಾವಿರ ಟನ್ ಗೋಮಾಂಸವನ್ನು ಬ್ರಿಟನ್‌ಗೆ ರಪ್ತುಮಾಡಬೇಕು ಕಾಂಗ್ರೆಸ್ ಸರ್ಕಾರದ ಲೋಪಗಳಿಂದ ಭಾರತ ಈ ರೀತಿಯಾದ ಒಪ್ಪಂದವನ್ನು ಮುಂದುವರೆಸಿದೆ ಇದನ್ನು ಹಿಮ್ಮೆಟ್ಟಿಸಬೇಕಾದರೆ 2024ರಲ್ಲಿ ಮತ್ತೊಮ್ಮೆ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರಲೇ ಬೇಕಾಗಿದೆ.
ಸತ್ಯ; ಇದೊಂದು ಕಪೋಕಲ್ಪಿತ ಸುಳ್ಳು ಸುದ್ದಿಯಾಗಿದ್ದು, ಈ ರೀತಿಯ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದೆ, ಆದರೆ ಬ್ರಿಟೀಷರಿಂದ ಭಾರತ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕಾದರೆ ಒಪ್ಪಂದವೊಂದಕ್ಕೆ ಭಾರತ ಸಹಿ ಹಾಕಿತ್ತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಮತ್ತು ಭಾರತಕ್ಕೆ ತನ್ನ ಸಂವಿಧಾನವನ್ನ ರಚಿಸಿಕೊಳ್ಳುವ ಹಾಗೂ ಸಂವಿಧಾನದಲ್ಲಿನ ಯಾವುದೇ ಆರ್ಟಿಕಲ್‌ಗಳನ್ನು ತಿದ್ದುಪಡಿ ಮಾಡುವ ಮುಕ್ತ ಅವಕಾಶವನ್ನು ಭಾರತ ಹೊಂದಿದೆ. ಇದರ ಜೊತೆಗೆ ಭಾರತ ಯಾವುದೇ ದೇಶದ ಯಾವುದೇ ರಾಣಿ ಅಥವಾ ರಾಜನಿಗೆ ಪಿಂಚಣಿಯಾಗಿ ಹಣ ಕೊಡುತ್ತಿರುವುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ, ಇನ್ನು ಭಾರತದಿಂದ ವಿದೇಶಗಳಿ ಗೋಮಾಂಸ ರಪ್ತು ನಿಷೇಧಿಸಲಾಗಿದೆ ಹಾಗೂ ಎಮ್ಮೆ ಮಾಂಸ ರಪ್ತಿಗೆ ಅನುಮತಿ ನೀಡಲಾಗಿದೆ. ಹಾಗಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂಬುವುದು ಶುದ್ಧಸುಳ್ಳಿನ ಸಂಗತಿಯಾಗಿದೆ..
ಇದನ್ನೂ ಓದಿ ; ಬಾಲಕನೊಬ್ಬನ ಶಿರಚ್ಛೆದ ಮಾಡಿದ ವಿಡಿಯೋ ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೈನ್ ಯುದ್ದಕ್ಕೆ ಸಂಬಂಧಿಸಿದ್ದಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.