ಬಾಲಕನೊಬ್ಬನ ಶಿರಚ್ಛೆದ ಮಾಡಿದ ವಿಡಿಯೋ ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೈನ್ ಯುದ್ದಕ್ಕೆ ಸಂಬಂಧಿಸಿದ್ದಲ್ಲ

ಹಮಾಸ್ ಉಗ್ರಗಾಮಿಗಳು ಪ್ಯಾಲೆಸ್ತೈನಿನ ಮುಗ್ದ ಬಾಲಕನೊಬ್ಬನ ಶಿರಚ್ಛೆದ ಮಾಡಿದ್ದಾರೆ. ಇದು ಕಾಶ್ಮೀರದ ಹತ್ಯಾಕಂಡವನ್ನು ನೆನಪಿಸುತ್ತಿದೆ. ಇವರು ಮನುಷ್ಯರಲ್ಲ, ಇವರ ನಂಬಿಕೆಗಳೆ ಇವರನ್ನು ಪ್ರಾಣಿಯನ್ನಾಗಿಸಿವೆ. ಇಂತಹ ಹಂದಿಗಳನ್ನು ಸೆಕ್ಯುಲರ್‌ಗಳು ಬೆಂಬಲಿಸುತ್ತಿದ್ದಾರೆ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದು ಸಿರಿಯಾದ ಉತ್ತರ ಅಲೆಪ್ಪೋದ ಹಂದರಾತ್‌ನಲ್ಲಿ 2016ರ ಹರಕಾತ್ ನೌರ್ ಅಲ್-ದಿನ್ ಅಲ್-ಝೆಂಕಿ ಉಗ್ರಗಾಮಿಗಳು ಕ್ರೂರವಾಗಿ ಪ್ಯಾಲೆಸ್ತೈನ್ ನಿರಾಶ್ರಿತ ಶಿಬಿರದಲ್ಲಿದ್ದ ಅಬ್ದುಲ್ಲಾ ಇಸ್ಸಾ ಎಂಬ 12 ವರ್ಷದ ಬಾಲಕನೊಬ್ಬನ ಶಿರಚ್ಛೆದ ಮಾಡಿದ್ದ ವಿಡಿಯೋ ಆಗಿದೆ. ಇದು 2016ರ ಸಿರಿಯಾ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ. ಮತ್ತು ಈ ಘಟನೆಯ ಕುರಿತು ಅನೇಕ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದ್ದರಿಂದ ಇದು ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೈನ್ ಯುದ್ದಕ್ಕೆ ಸಂಬಂಧಿಸಿದ್ದಲ್ಲ.

ವಿಶ್ವಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಮುಗ್ಧ ಮಗುವಿನ ವಿರುದ್ಧದ “ಕ್ರೂರ ಅಪರಾಧ” ವನ್ನು ಸಿರಿಯಾ ಸರ್ಕಾರ ಖಂಡಿಸಿದೆ, ಬಾಲಕ ಅಲೆಪ್ಪೊದ ಅಂಚಿನಲ್ಲಿರುವ ಹಂದರಾತ್ನ ಪ್ಯಾಲೆಸ್ಟೈನ್ ನಿರಾಶ್ರಿತರ ಶಿಬಿರದ ಪ್ಯಾಲೆಸ್ಟೀನಿಯನ್ ಎಂದು ಹೇಳಿದೆ. ಈತ ಕೇವಲ ಬಾಲಕನೋ ಅಥವಾ ಬಾಲ ಸೈನಿಕನೋ ಇನ್ನೂ ಸರಿಯಾದ ವಿವರಣೆಯಿಲ್ಲ. ನೌರ್ ಅಲ್-ದಿನ್ ಅಲ್-ಝೆಂಕಿ ಈ ಹಿಂದೆ ಸಿರಿಯಾದಲ್ಲಿ ಬಂಡುಕೋರ ಗುಂಪುಗಳನ್ನು ಬೆಂಬಲಿಸುವ ಉದ್ದೇಶದಿಂದ ಸಿಐಎ ನಡೆಸುವ ಕಾರ್ಯಕ್ರಮದಲ್ಲಿ ಅಮೇರಿಕದಿಂದ ಆರ್ಥಿಕ ನೆರವು ಸಹ ಪಡೆದಿದ್ದರು. ಅಮ್ನೆಸ್ಟಿ ಇಂಟರ್ನ್ಯಾಷನಲ್‌ನ ವರದಿಯ ಪ್ರಕಾರ, ಈ ಗುಂಪು 2014 ಮತ್ತು 2015 ರ ಅವಧಿಯಲ್ಲಿ ಅಲೆಪ್ಪೊದಲ್ಲಿ ಪತ್ರಕರ್ತರು ಮತ್ತು ಹ್ಯೂಮಿಟೇರಿಯನ್ ಕಾರ್ಮಿಕರ ಅಪಹರಣ ಮತ್ತು ಚಿತ್ರಹಿಂಸೆಯಲ್ಲಿ ಭಾಗಿಯಾಗಿದೆ. ಸಿರಿಯಾದ ಸಂಘರ್ಷವು 2011 ರಲ್ಲಿ ಸರ್ಕಾರಿ ವಿರೋಧಿ ಪ್ರದರ್ಶನಗಳ ದಮನದೊಂದಿಗೆ ಪ್ರಾರಂಭವಾಗಿ ನಂತರ ಬಹು-ರಂಗದ ಯುದ್ಧವಾಗಿ ವಿಕಸನಗೊಂಡಿದೆ, ಇದು 280,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಲಕ್ಷಾಂತರ ಜನರಿಗೆ ತಮ್ಮ ಮನೆಗಳಿಲ್ಲದಂತೆ ಮಾಡಿ ನಿರಾಶ್ರಿತರನ್ನಾಗಿಸಿದೆ.


ಇದನ್ನು ಓದಿ: ಹಮಾಸ್‌ ನವರು ಕೊಂದು, ಅರೆಬೆತ್ತಲೆ ಸ್ಥಿತಿಯಲ್ಲಿ ವಾಹನದಲ್ಲಿ ಒಯ್ದ ಮಹಿಳೆಯ ಚಿತ್ರ ಇದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *