ಇಸ್ರೇಲ್‌ನ 40 ಮಕ್ಕಳ ತಲೆ ಕಡಿದು ಹಮಾಸ್ ಅಟ್ಟಹಾಸ! ಇಂತಹ ನರರಾಕ್ಷಸರಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತದೆ ಎಂದರೆ ನಾಳೆ ನಿಮ್ಮ ಮಕ್ಕಳ ಗತಿಯೇನು? ಎಂಬ ಸುದ್ಧಿಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ.
ಪ್ಯಾಕ್ಟ್‌ಚೆಕ್: ಯಾವುದೇ ಸಾಕ್ಷಾಧರಗಳಿಲ್ಲದೇ ಈ ಸುದ್ಧಿಯನ್ನು ಭಾರತ ಸೇರಿದಂತೆ ಹಲವು ವಿದೇಶಿ ಮಾಧ್ಯಮಗಳು ವರದಿ ಮಾಡುತ್ತಿವೆ. ಸುದ್ಧಿಯ ಮೂಲವೆನ್ನುವ ಇಸ್ರೇಲಿ ಡಿಫೇನ್ಸ್ ಫೋರ್ಸ್(IDF) ತನ್ನ ಅಧಿಕೃತ ಪುಟದಲ್ಲಿ ಎಲ್ಲಿಯೂ ಈ ಕೃತ್ಯದ ಬಗ್ಗೆ ವರದಿ ಮಾಡಿಲ್ಲ. IDFನ ವಕ್ತಾರ ಜೊನಾಥನ್ ಕಾನ್ರಿಕಸ್ “ಗಾಝಾ ಸ್ಟ್ರೀಫ್‌ನಲ್ಲಿ “ಮಹಿಳೆಯರು, ಮಕ್ಕಳನ್ನು ಹಮಾಸ್ ಕೈಕೋಳ ತೊಡಿಸಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ, ಶಿಶುಗಳ ತಲೆಯನ್ನು ಸಹ ಕಡಿಯಲಾಗಿದೆ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಹಮಾಸ್ ಕೂಡ ಇಂತಹ ಅನಾಗರಿಕ ಕೃತ್ಯಗಳನ್ನು ನಡೆಸಬಹುದೆಂದು ನಂಬುವುದು ಕಷ್ಟ. ಎಂದು ಅವರು ಹೇಳಿದ್ದಾರೆ. ಆದರೆ ಅವರು ಎಲ್ಲಿಯೂ ಪ್ರಮುಖವಾಗಿ 40 ಮಕ್ಕಳ ತಲೆ ಕಡಿಯಲಾಗಿದೆ ಎಂದು ಉಲ್ಲೇಖಿಸಿಲ್ಲ.
SKY News ತನ್ನ ತಲೆಬರಹದಲ್ಲಿ 40 ಮಕ್ಕಳ ತಲೆ ಕಡಿಯಲಾಗಿದೆ ಎಂದು ಸುದ್ಧಿ ಬಿತ್ತರಿಸಲು ನಿರಾಕರಿಸಿದೆ ಕಾರಣ ಇದಕ್ಕೆ ಪೂರಕವಾಗಿ ಅವರಿಗೆ ಯಾವುದೇ ಪೋಟೋಗಳು ಮತ್ತು ಅಧಿಕೃತ ಮಾಹಿತಿ ತೊರೆತಿಲ್ಲ. ಈ ಸುದ್ದಿ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಮಾಧ್ಯಮಗಳು ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇನ್ನೂ ಇದೇ ರೀತಿಯ ಇನ್ನೋಂದು ಸುಳ್ಳು ಹರಿದಾಡುತ್ತಿದ್ದು, ಇಸ್ರೇಲ್ ತನ್ನ ಪ್ರಜೆಗಳಿಗೆ ಈಜಿಪ್ಟಿಗೆ ತಪ್ಪಿಸಿಕೊಳ್ಳಲು ಆದೇಶಿಸಿದೆ ಎಂಬ ಸುದ್ಧಿ ಹರಿದಾಡುತ್ತಿದೆ. ಇದು ಸಹ ಸುಳ್ಳಾಗಿದ್ದು, ಇಸ್ರೇಲ್ ಸೇನೆ ತನ್ನ ದೇಶದ ರಕ್ಷಣೆಗೆ ನಿಂತಿದೆ ಮತ್ತು ಇಸ್ರೇಲ್ ಸರ್ಕಾರವಾಗಲಿ IDF ಆಗಲಿ ಇಂತಹ ಯಾವುದೇ ಕರೆ ನೀಡಿಲ್ಲ. ಆದ್ದರಿಂದ ಇಸ್ರೇಲ್‌ನ 40 ಮಕ್ಕಳ ತಲೆ ಕಡಿದು ಹಮಾಸ್ ಅಟ್ಟಹಾಸ ನಡೆಸಿದೆ ಎಂಬುದು ಸುಳ್ಳು.
ಇದನ್ನು ಓದಿ: ಬಾಲಕನೊಬ್ಬನ ಶಿರಚ್ಛೆದ ಮಾಡಿದ ವಿಡಿಯೋ ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೈನ್ ಯುದ್ದಕ್ಕೆ ಸಂಬಂಧಿಸಿದ್ದಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.