ಇಸ್ರೇಲ್ – ಪ್ಯಾಲೇಸ್ತೀನ್ ಹೆಸರಿನಲ್ಲಿ ಹರದಾಡುತ್ತಿವೆ ನಕಲಿ ವಿಡಿಯೋ-ಫೋಟೊಗಳು

ಇಸ್ರೇಲ್

ಪ್ಯಾಲೇಸ್ತೀನ್‌ನಲ್ಲಿ ಹಮಾಸ್‌ನವರು ಚಿಕ್ಕ ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿ ಪಂಜರದಲ್ಲಿ ಕೂಡಿಹಾಕಿದ್ದಾರೆ ಎಂಬ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸತ್ಯ: ಪ್ಯಾಲೆಸ್ಟೈನ್ ನ್ಯೂಸ್ ಹೆಸರಿನ ಯೂಟ್ಯೂಬ್ ಚಾನೆಲ್‌ನಿಂದ ಜನವರಿ 2020ರಲ್ಲಿಯೇ ಈ ವಿಡಿಯೋ ಅಪ್ಲೋಡ್ ಆಗಿದ್ದು, ಆನಂತರ ಡಿಲೀಟ್ ಮಾಡಲಾಗಿದೆ. ವಿಡಿಯೋ ಚಿತ್ರೀಕರಿಸುತ್ತಿರುವ ವ್ಯಕ್ತಿ ನಗುತ್ತಿರುವುದನ್ನು ಕೇಳಬಹುದು. “ಇದು ಹಳೆಯ ವಿಡಿಯೋ, ತನ್ನ ಮಕ್ಕಳು ಕೋಳಿ ಪಂಜರದಲ್ಲಿ ಆಟವಾಡುತ್ತಿರುವುದನ್ನು ಕಂಡ ತಂದೆ ತಮಾಷೆಗೆಂದು ಲಾಕ್ ಮಾಡಿ ವಿಡಿಯೋ ಮಾಡಿದ್ದಾರೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಇತ್ತೀಚಿನ ಇಸ್ರೇಲ್ – ಪ್ಯಾಲೇಸ್ತೀನ್ ವಿವಾದಕ್ಕೂ ಮೊದಲೇ ಅಪ್ಲೋಡ್ ಆಗಿದೆ. ಹಾಗಾಗಿ ಪ್ಯಾಲೇಸ್ತೀನ್‌ನಲ್ಲಿ ಮಕ್ಕಳನ್ನು ಪಂಜರದಲ್ಲಿ ಕೂಡಿ ಹಾಕಿ ಒತ್ತೆಯಾಳಾಗಿ ಇಟ್ಟಿದ್ದಾರೆ ಎಂಬುದು ಸುಳ್ಳು.

ಹಮಾಸ್‌ನವರು ಕಿಡ್ನಾಪ್ ಮಾಡಿದ ಗಾಜಾದಲ್ಲಿರುವ ಯಹೂದಿ ಮಗು ಇದು ಎಂದು ಮತ್ತೊಂದು ವಿಡಿಯೋ ಹರಿದಾಡುತ್ತಿದೆ.

ವಾಸ್ತವದಲ್ಲಿ ಆಗಸ್ಟ್ 8, 2023 ರಂದೇ ಈ ವಿಡಿಯೋ ಟಿಕ್‌ ಟಾಕ್‌ನಲ್ಲಿ ಪೋಸ್ಟ್ ಆಗಿದೆ. ಆ ಮಗು ಯಹೂದಿ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಇದು ಹಳೆಯ ವಿಡಿಯೋ ಆಗಿದ್ದು, ಪ್ರಸ್ತುತ ಬಿಕ್ಕಟ್ಟಿಗೆ ಸಂಬಂಧಿಸಿಲ್ಲ.

ಪ್ಯಾಲೇಸ್ತೀನ್‌ನಲ್ಲಿ ಬಾಂಬ್‌ ದಾಳಿಗೆ ಒಳಗಾದ ಮನೆಯಲ್ಲಿ ಪುಟ್ಟ ಅನಾಥ ಬಾಲಕ ಎಂಬ ಫೋಟೊ ಸಹ ಹರಿದಾಡುತ್ತಿದೆ.

ಸತ್ಯ: ಈ ಫೋಟೊ ನಿಜವಲ್ಲ. ಇದು AI ಫೋಟೊವೆ ಅಥವಾ ಅಲ್ಲವೇ ಎಂದು https://www.aiornot.com/ ನಲ್ಲಿ ಸರ್ಚ್ ಮಾಡಿದಾಗ, ಇದು AI ನಿಂದ ಸೃಷ್ಟಿಸಿದ್ದಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಪ್ಯಾಲೇಸ್ತೀನ್‌ನಲ್ಲಿ ಬಾಂಬ್‌ ದಾಳಿಗೆ ಒಳಗಾದ ಮನೆಯಲ್ಲಿ ಪುಟ್ಟ ಅನಾಥ ಬಾಲಕ ಎಂಬುದು ಸುಳ್ಳು.


ಇದನ್ನೂ ಓದಿ: ಇಸ್ರೇಲ್‌ನ 40 ಮಕ್ಕಳ ತಲೆ ಕಡಿದು ಹಮಾಸ್ ಅಟ್ಟಹಾಸ ನಡೆಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *