ಕಳೆದ ಹಲವು ದಿನಗಳಿಂದ ಇಸ್ರೇಲ್ ಮತ್ತು ಪ್ಯಾಲಸ್ಟೈನ್ ಯುದ್ಧಕ್ಕೆ ಸಂಬಂಧಿಸಿದಂತೆ ಹಲವು ಸುಳ್ಳು ಸುದ್ಧಿಗಳು ಹರಿದಾಡುತ್ತಿದ್ದು. ಹಮಾಸ್ ಪ್ಯಾರಾಗ್ಲೈಡರ್ ಹೈ ವೋಲ್ಟೇಜ್ ವಿದ್ಯುತ್ ಲೈನ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಅವರು ಇದಕ್ಕೆ ಅರ್ಹರಾಗಿದ್ದರೇ? ಹೌದು ಅಥವಾ ಇಲ್ಲ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಪ್ಯಾಕ್ಟ್‌ಚೆಕ್: ಇದು ಜೂನ್ 16, 2023 ರಂದು, ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಸುಮಾರು ಅರವತ್ತು ವರ್ಷದ ಪ್ರವಾಸಿಗನೊಬ್ಬ ದಕ್ಷಿಣ ಕೊರಿಯಾದ ಸಿಯೋಂಗ್ಸಾನ್-ಯುಪ್, ಸಿಯೋಗ್ವಿಪೊ-ಸಿ, ಜೆಜು-ಡೊ ಬಳಿ ಅಧಿಕ ವೋಲ್ಟೇಜ್ ತಂತಿಯ ಮೇಲೆ ಅಪಘಾತಕ್ಕೀಡಾಗಿದ್ದ ಹಳೆಯ ವಿಡಿಯೋ. ಇದು ನಾಲ್ಕು ತಿಂಗಳ ಹಿಂದೆಯಿಂದ ಟ್ವಿಟರ್(X) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಕ್ಷಿಣ ಕೊರಿಯಾದ @babaedream ಎಂಬ ವೆಬ್‌ಸೈಟ್‌ವೊಂದು ಈ ಅಪಘಾತದ ಘಟನೆಯನ್ನು ಹಿಂದೆಯೇ ವರದಿ ಮಾಡಿದೆ. @v.daum.net ಹೆಸರಿನ ಮತ್ತೊಂದು ದಕ್ಷಿಣ ಕೊರಿಯಾದ ವೆಬ್‌ಸೈಟ್ ಸಹ ಇದನ್ನು ವರದಿ ಮಾಡಿದೆ.
ಆದ್ದರಿಂದ ಇದು ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೈನ್ ಯುದ್ದಕ್ಕೆ ಸಂಬಂಧಿಸಿದಲ್ಲ ಮತ್ತು ಪ್ಯಾರಾಗ್ಲೈಡಿಂಗ್ ಮಾಡುತ್ತಿರುವವರು ಹಮಾಸ್ ಉಗ್ರರು ಎಂಬುದು ಸುಳ್ಳು.
ಇದನ್ನು ಓದಿ: “ಭಾರತ್ ಮಾತಾ ಕಿ ಜೈ” ಘೋಷಣೆ ಕೂಗಿದ್ದಕ್ಕಾಗಿ ವೃದ್ಧನನ್ನು ಥಳಿಸಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.