ಗಂಗಾಜಲಕ್ಕೆ ಕೇಂದ್ರ ಸರ್ಕಾರ 18% ಜಿಎಸ್‌ಟಿ ವಿಧಿಸಿದೆಯೆ?

ಇದೇ ಗುರುವಾರ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ಹೇಳಿಕೆಯನ್ನ ನೀಡಿದ್ದರು, ಆ ಹೇಳಿಕೆ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಾ ಇದೆ, ಅದರ ಸದ್ದು ಹೇಗಿದೆ ಅಂದ್ರೆ ಆಡಳಿತರೂಢ ಬಿಜೆಪಿಯ ಜಂಗಾಬಲವನ್ನೇ ಆಲುಗಾಡಿಸಿ ಬಿಟ್ಟಿದೆ..

ಅಷ್ಟಕ್ಕೂ ಕಾಂಗ್ರೆಸ್‌ ಅಧಿನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು ಅಂದ್ರೆ “ಉತ್ತರಾಖಂಡ ಸರ್ಕಾರವು ಗಂಗಾ ನೀರಿನ ಮೇಲೆ 18% ಜಿಎಸ್‌ಟಿ ವಿಧಿಸಿದೆ” ಎಂದು ಈ ಹೇಳಿಕೆತಯನ್ನ ರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದಂತೆ ಕೇಂದ್ರ ಸರ್ಕಾರವೇ ಪತರುಗುಟ್ಟಿದೆ.

ಹೀಗಾಗಿ ತಕ್ಷಣವೇ ಎಚ್ಚೆತ್ತುಕೊಂಡ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಸಾರಾ ಸಗಟಾಗಿ ತಳ್ಳಿಹಾಕಿತ್ತು. ಜೊತೆಗೆ ಇದೇ ಅಕ್ಟೋಬರ್ 12 ರಂದು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಉತ್ತರಾಖಂಡಕ್ಕೆ ಭೇಟಿ ನೀಡಿ, ಪಾರ್ವತಿ ಕುಂಡದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ಅವರ ಫೋಟೋಗಳು ಎಲ್ಲೆಡೆ ವೈರಲ್‌ ಆಗಿತ್ತು. ಈ ವೇಳೆಯೇ AICC ಅಧ್ಯಕ್ಷರು ನೀಡಿದ್ದ ಹೇಳಿಕೆ ಬಿಜೆಪಿಗೆ ಬಹುದೊಡ್ಡ ಮುಜುಗರವನ್ನ ಉಂಟು ಮಾಡಿತ್ತು.

ಅಷ್ಟಕ್ಕೂ ಖರ್ಗೆ ಅವರು ಹೇಳಿದ್ದು ಇಷ್ಟು “ಸಾಮಾನ್ಯ ಭಾರತೀಯನಿಗೆ ಮೋಕ್ಷವನ್ನು ಒದಗಿಸುವ ಮಾತೆ ಗಂಗಾ ತಾಯಿಯ ಮಹತ್ವವು ಹುಟ್ಟಿನಿಂದ ಅವನ ಜೀವನದ ಕೊನೆಯವರೆಗೂ ಬಹಳ ಪ್ರಮುಖವಾದದ್ದು, ನೀವು ಇಂದು ಉತ್ತರಾಖಂಡದಲ್ಲಿ ಇರುವುದು ಒಳ್ಳೆಯದು, ಆದರೆ ನಿಮ್ಮ ಸರ್ಕಾರವು ಪವಿತ್ರ ಗಂಗಾ ಜಲದ ಮೇಲೆಯೇ 18% ಜಿಎಸ್‌ಟಿ ವಿಧಿಸಿದೆ. ತಮ್ಮ ಮನೆಗಳಲ್ಲಿ ಗಂಗಾಜಲವನ್ನು ಆರ್ಡರ್ ಮಾಡುವವರಿಗೆ ಏನು ಹೊರೆ ಎಂದು ಒಮ್ಮೆಯೂ ನಿಮ್ಮ ಸರ್ಕಾರ ಯೋಚಿಸಲಿಲ್ಲ. ಇದು ನಿಮ್ಮ ಸರ್ಕಾರದ ಲೂಟಿ ಮತ್ತು ಬೂಟಾಟಿಕೆಯ ಪರಮಾವಧಿಯಾಗಿದೆ” ಎಂದು ಖರ್ಗೆಯವರು ಸಾಮಾಜಿಕ ಜಾಲತಾಣ ಎಕ್ಸ್‌ ( ಈ ಹಿಂದೆ ಟ್ವಿಟರ್‌)ನಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದರು,

ಖರ್ಗೆ ಅವರ ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಬಿಜೆಪಿಯ ಐಟಿ ಸೆಲ್‌ನ ಉಸ್ತುವಾರಿ ಅಮಿತ್ ಮಾಳವಿಯಾ, ಕಾಂಗ್ರೆಸ್ “ಸತ್ಯಗಳನ್ನು ತಪ್ಪಾಗಿ ನಿರೂಪಿಸುತ್ತಿದೆ” ಎಂದು ಆರೋಪಿಸಿದರು ಮತ್ತು ಜನರನ್ನು ದಾರಿತಪ್ಪಿಸುವ ಉದ್ದೇಶಪೂರ್ವಕವಾಗಿ ಈ ರೀತಿಯ ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಖರ್ಗೆಯವರ ಪೋಸ್ಟ್‌ಗೆ ಸಬೂಬು ನೀಡಲು ಮುಂದಾದ ಮಾಳವಿಯಾ 2/2017 ಅಧಿಸೂಚನೆಯ ನಮೂದು ಸಂಖ್ಯೆ 99 ರ ಅಡಿಯಲ್ಲಿ ನೀರು ಜಿಎಸ್‌ಟಿಯನ್ನು ಒಳಪಡುವುದಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ, ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿಯ (ಸಿಬಿಐಸಿ) ಸುತ್ತೋಲೆಯನ್ನು ಕೂಡ ಈ ವೇಳೆ ಉಲ್ಲೇಖಿಸಿದ್ದಾರೆ.

ಇದಾದ ಬಳಿಕ ಕೇಂದ್ರ ಸರ್ಕಾರದ CBIC ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದ್ದು, GST ಅಡಿಯಲ್ಲಿ ಗಂಗಾಜಲ್ ವಿನಾಯಿತಿ ಇದೆ ಎಂದು ತಿಳಿಸಿದೆ. “ದೇಶದಾದ್ಯಂತ ಮನೆಯವರು ಪೂಜೆಯಲ್ಲಿ ಬಳಸುವ ಗಂಗಾಜಲ ಮತ್ತು ಪೂಜಾ ಸಾಮಗ್ರಿಗೆ ಜಿಎಸ್‌ಟಿ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. 2017 ರಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ನ 14 ಮತ್ತು 15 ನೇ ಸಭೆಗಳಲ್ಲಿ ಪೂಜಾ ಸಾಮಾಗ್ರಿ ಮೇಲಿನ ಜಿಎಸ್‌ಟಿಯನ್ನು ವಿವರವಾಗಿ ಚರ್ಚಿಸಲಾಯಿತು ಮತ್ತು ಅವುಗಳನ್ನು ವಿನಾಯಿತಿ ಪಟ್ಟಿಯಲ್ಲಿ ಇರಿಸಲು ನಿರ್ಧರಿಸಲಾಯಿತು.”

“ ಆದ್ದರಿಂದ, ಜಿಎಸ್‌ಟಿಯನ್ನು ಪರಿಚಯಿಸಿದಾಗಿನಿಂದ ಈ ಎಲ್ಲಾ ಸಾಮಾಗ್ರಿಗಳಿಗೆ ವಿನಾಯಿತಿ ನೀಡಲಾಗಿದೆ, ”ಎಂದು ಸಿಬಿಐಸಿ ಎಕ್ಸ್‌ನಲ್ಲಿ ಹೇಳಿದೆ. ಜಿಎಸ್‌ಟಿ ದರಗಳು ಮತ್ತು ವಿನಾಯಿತಿಗಳನ್ನು ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸುಗಳ ಆಧಾರದ ಮೇಲೆ ನಿಗದಿಪಡಿಸಲಾಗಿದೆ, ಇದು ಒಕ್ಕೂಟ ಮತ್ತು ಎರಡೂ ಸದಸ್ಯರನ್ನು ಒಳಗೊಂಡಿರುವ ಸಂವಿಧಾನಿಕ ಸಂಸ್ಥೆಯಾಗಿದೆ”

ಇನ್ನು ಇಲ್ಲಿ ಅಚ್ಚರಿಯ ವಿಚಾರ ಏನು ಅಂದ್ರೆ CBIC ಯ ಸ್ಪಷ್ಟೀಕರಣದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಗಂಗಾಜಲ್‌ಗೆ 18% ಜಿಎಸ್‌ಟಿ ವಿಧಿಸಲಾಗುತ್ತಿದೆ ಎಂದು ಹಲವು ಫೋಟೋಗಳನ್ನು ಇಂಡಿಯಾ ಪೋಸ್ಟ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ,

ಹೀಗಾಗಿ ಇಡೀ ಕಾರ್ಯಂಗ ಇಲಾಖೆ ಕೇಂದ್ರ ಸರ್ಕಾರದ ಜೊತೆಗೆ ಸೇರಿಕೊಂಡು ಸುಳ್ಳು ಹೇಳುತ್ತಿದ್ಯಾ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡೋದಕ್ಕೆ ಪ್ರಾರಂಭವಾಗಿದೆ. ಆದರೆ ಅ.13ರಂದು ಗಂಗಾಜಲ ಬುಕ್‌ ಮಾಡಲು ತೆರಳುವವರಿಗೆ ಯಾವುದೇ ಜಿಎಸ್‌ಟಿ ಇಲ್ಲ ಎಂಬುವುದನ್ನ ತೋರಿಸಿರುವುದು ನೆಟ್ಟಿಗರನ್ನು ಇನ್ನಷ್ಟು ಅಚ್ಚರಿಗೆ ದೂಡಿದೆ.


ಇದನ್ನೂ ಓದಿ : ವ್ಯಾಪಕವಾಗಿ ಹಬ್ಬುತ್ತಿದೆ ನಕಲಿ ಜಾಹಿರಾತುಗಳು.. ನಂಬುವ ಮುನ್ನ ಒಮ್ಮೆ ಪರಿಶೀಲಿಸಿ.!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *