ಕೊಯಮತ್ತೂರಿನಲ್ಲಿ ಬಿರಿಯಾನಿ ಜಿಹಾದ್‌ ನಡೆಯುತ್ತಿದೆ ಎಂಬುದು ಸುಳ್ಳು

ಸಮಾಜದಲ್ಲಿ ಕೋಮು ಸಾಮಾರಸ್ಯ ಕದಡಲು ಕೆಲ ಕಿಡಿಗೇಡಿಗಳು ಒಂದಲ್ಲ ಒಂದು ರೀತಿಯಾದ ಸುಳ್ಳು ಸುದ್ದಿಗಳನ್ನು ಹಬ್ಬುತ್ತಲೇ ಇದ್ದಾರೆ. ಇದೀಗ ಇಂತಹದ್ದೆ ಒಂದು ಸುದ್ದಿಯನ್ನು ವ್ಯಾಪಕವಾಗಿ ಹಬ್ಬಲು ಪ್ರಯತ್ನಿಸುತ್ತಿರುವ ಕಿಡಿಗೇಡಿಗಳು ಸಮಾಜದ ಸಾಮರಸ್ಯ ಕದಡಲು ಪ್ರಯತ್ನಿಸಿದ್ದಾರೆ.

ಕೊಯಮತ್ತೂರಿನಲ್ಲಿ ಬಿರಿಯಾನಿ ಜೆಹಾದ್.. ಮುಸಲ್ಮಾನರಿಂದ ಲೈಂಗಿಕ ಸಾಮರ್ಥ್ಯದ ಮೇಲೆ ಹಾರ್ಮೋನಿನ ಪರಿಣಾಮಗಳನ್ನು ಬೀರುವ ಡಗ್ಸ್‌ಗಳನ್ನ ಮಿಶ್ರಣ ಮಾಡಿ ಬಿರಿಯಾನಿ ತಯಾರಿಸಿ ಅದನ್ನು ಹಿಂದೂಗಳಿಗೆ ಮಾರಲಾಗುತ್ತಿತ್ತು. ಈಗ ಈ ಬಿರಿಯಾನಿ ಜಿಹಾದ್‌ ಮಾಡುತ್ತಿದ್ದವರನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ” ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿತ್ತು.

ಈ ಸುದ್ದಿಯನ್ನು ಅದೆಷ್ಟೋ ಮಂದಿ ಪರಿಶೀಲನೆ ನಡೆಸದೆ ವ್ಯಾಪಕವಾಗಿ ಹಬ್ಬುತ್ತಿದ್ದರು, ಆದರೆ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಅಲ್ಲಿ ಸಿಕ್ಕ ಮಾಹಿತಿ ಬೇರೆಯದ್ದೇ ಆಗಿತ್ತು.

Fact Check ; ಅಸಲಿಗೆ ಇದೊಂದು ನಕಲಿ ಫೋಟೋಗಳಾಗಿದ್ದು, ಈ ಚಿತ್ರದಲ್ಲಿರುವ ಮೂರು ಫೋಟೋಗಳು ಬೇರೆ ಬೇರೆಯದ್ದಾಗಿವೆ. ಈ ಪೋಸ್ಟರ್‌ನ ಮೊದಲ ಚಿತ್ರದಲ್ಲಿ ಪೊಲೀಸರು ಬಂಧಿಸಿರುವುದು 2019 ರ ಉತ್ತರ ಪ್ರದೇಶದ ಫೊಟೋವಾಗಿದೆ, ಎರಡನೇ ಚಿತ್ರದಲ್ಲಿರುವ ಮಾತ್ರೆಗಳ ಫೋಟೋ 2019 ರಲ್ಲಿ ಡೈಲಿ ಮಿರರ್ ಶ್ರೀಲಂಕಾ ಪ್ರಕಟಿಸಿದ ಲೇಖನದಲ್ಲಿ ಪತ್ತೆಹಚ್ಚಲಾಗಿದೆ, ಇನ್ನು ಮೂರನೆಯ ಫೋಟೋ 2016 ರಂದು ಪೋಸ್ಟ್ ಮಾಡಿದ YouTube ವೀಡಿಯೊದ ಥಂಬ್‌ನೇಲ್ ಆಗಿದೆ, ಹೀಗಾಗಿ ಕೊಯಮತ್ತೂರು ನಗರ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಮಾರ್ಚ್ 2, 2020 ರಂದು ಈ ಫೋಟೋ ನಕಲಿ ಎಂದು ಸ್ಪಷ್ಟ ಪಡಿಸಿದ್ದಾರೆ.

ಹಾಗಾಗಿ ಈ ಚಿತ್ರದಲ್ಲಿ ಹಂಚಿಕೊಂಡಿರುವ ಹಾಗೆ ಕೆಲ ಮುಸಲ್ಮಾನರು ಬಿರಿಯಾನಿಯಲ್ಲಿ ಲೈಂಗಿಕ ಸಾಮರ್ಥ್ಯದ ಮೇಲೆ ಹಾರ್ಮೋನಿನ ಪರಿಣಾಮಗಳನ್ನು ಬೀರುವ ಡಗ್ಸ್‌ಗಳನ್ನ ಮಿಶ್ರಣ ಮಾಡಿ ಮಾರುತ್ತಿದ್ದರು ಮತ್ತು ಪೊಲೀಸರಿಂದ ಬಂಧನಕ್ಕೊಳಪಟ್ಟರು ಎಂಬುವುದು ಸುಳ್ಳು ಸುದ್ದಿಯಾಗಿದೆ.


ಇದನ್ನೂ ಓದಿ : ಇಸ್ರೇಲ್‌ನಲ್ಲಿ ಬಂದೂಕುಧಾರಿ ವ್ಯಕ್ತಿ ಭಾರತೀಯ ಮಹಿಳೆಯರನ್ನು ಕೊಂದಿದ್ದಾನೆ ಎಂಬುದು ಸುಳ್ಳು ಸುದ್ದಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *