ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಫೆಲೆಸ್ತೀನ್ ಮಹಿಳೆಯರು ಭಾರತೀಯ ಧ್ವಜಗಳನ್ನು ಹಿಡಿದಿಲ್ಲ

ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಫೆಲೆಸ್ತೀನ್ ಮಹಿಳೆಯರು ಭಾರತೀಯ ಧ್ವಜಗಳನ್ನು ಹಿಡಿದು ಉತ್ತರ ಗಾಝಾದಿಂದ ಪಲಾಯನ ಮಾಡುತ್ತಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: 06 ಸೆಪ್ಟೆಂಬರ್ 2023ರ ಮೊದಲ ವಾರದಲ್ಲಿ ನಡೆದ ಅರ್ಬೀನ್ ನಡಿಗೆಗಾಗಿ ಇರಾಕ್‌ನ ಕರ್ಬಾಲಾ ನಗರಕ್ಕೆ ಪ್ರಯಾಣಿಸುವಾಗ ಭಾರತೀಯ ಯಾತ್ರಿಕರು ಭಾರತದ ಧ್ವಜಗಳನ್ನು ಹಿಡಿದಿದ್ದಾರೆ. ಈ ತೀರ್ಥಯಾತ್ರೆಯು ಆಶುರಾ ಎಂಬ ಧಾರ್ಮಿಕ ಆಚರಣೆಯನ್ನು ಸೂಚಿಸುತ್ತದೆ. ಇದು ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಮತ್ತು ಮೂರನೇ ಶಿಯಾ ಇಮಾಮ್ ಹುಸೇನ್ ಇಬ್ನ್ ಅಲಿ ಅವರ ಮರಣದ ನೆನಪಿಗೆ ನಡೆಸಲಾಗುತ್ತದೆ. ಹುಸೇನ್ ಇಬ್ನ್ ಅಲಿ ಅವರ ದೇವಾಲಯವಿರುವ ಇರಾಕ್ ನ ಕರ್ಬಾಲಾ ನಗರಕ್ಕೆ ವಿಶ್ವದಾದ್ಯಂತದ ಲಕ್ಷಾಂತರ ಜನರು ಪ್ರಯಾಣಿಸುವ ನಡಿಗೆ. ಇದು ಇಸ್ರೇಲ್-ಹಮಾಸ್ ಸಂಘರ್ಷದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.

ಅರ್ಬಿಯಾ ನಡಿಗೆ 2023 ನ ಕುರಿತು ಅನೇಕ ವಿಡಿಯೋಗಳು ಯೂಟೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇದ್ದು ಅದನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಎಲ್ಲಾ ವಿಡಿಯೋಗಳಲ್ಲು ಭಾರತೀಯ ಮುಸ್ಲಿಂ ಯಾತ್ರಿಕರು ಭಾರತದ ಧ್ವಜವನ್ನು ಹಿಡಿದು ಸಾಗುವುದನ್ನು ನೀವು ಗಮನಿಸಬಹುದು.


ಇದನ್ನು ಓದಿ: ಇಸ್ರೇಲ್ ಸೈನಿಕರು ಗುಂಡುಗಳಿಗೆ ಹಂದಿ ಕೊಬ್ಬಿನ ಜಿಡ್ಡು ಹಚ್ಚಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *