ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವಂತಹ ಸುಳ್ಳು ಸುದ್ದಿಗಳನ್ನ ಇತ್ತೀಚೆಗಿನ ದಿನಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಳ್ಳು ಸುದ್ದಿಗಳನ್ನೇ ನಿಜವೆಂದು ನಂಬಿ ಸಾಕಷ್ಟು ಶೇರ್ ಕೂಡ ಮಾಡುತ್ತಾರೆ.
ಇದೀಗ ಇಂತಹದ್ದೆ ಒಂದು ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದಲ್ಲಿ “ಇತ್ತೀಚೆಗೆ ಶಾಂತಿಯುತವಾಗಿ ಹೈದರಾಬಾದ್‌ನಲ್ಲಿ ಹಿಂದೂಗಳ ಹಬ್ಬವಾದ ‘ಬತುಕಮ್ಮ’ ಆಡುತ್ತಿದ್ದ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದುಗಳು ಜಾಗೃತರಾಗಬೇಕು ಇದನ್ನು ಹಂಚಿಕೊಳ್ಳಿ” ಎಂದು ವಿಡಿಯೋವೊಂನ್ನು ಹಾಕಿ ಶೇರ್ ಮಾಡಲಾಗುತ್ತಿದೆ.
Fact Check : ಈ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಇದು 2018ರ ವಿಡಿಯೋವಾಗಿದ್ದು, ಈ ಮಹಿಳೆಯರು ಯಾವುದೇ ಅನುಮತಿಯನ್ನು ಪಡೆಯದೆ ಚಾರ್ಮಿನಾರ್‌ನಲ್ಲಿ ಬತುಕಮ್ಮ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಈ ಮೂಲಕ ಕೋಮು ಸೌಹರ್ದಕ್ಕೆ ಧಕ್ಕೆ ಬರುವ ಸಾಧ್ಯತೆ ಇದ್ದುದ್ದರಿಂದ ಪೊಲೀಸರು ಈ ಮಹಿಳೆಯರನ್ನ ಅಂದು ಬಂಧಿಸಿದ್ದರು.
ಈ ವಿಡಿಯೋ ಕುರಿತು ಇದೇ ಅ. 18ರಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಸಂದೀಪ್ ಶಾಂಡಿಲಿಯಾ ಟ್ವೀಟ್ ಮಾಡಿದ್ದು, ಇದು ಹಳೆಯ ವಿಡಿಯೋ ಎಂದು ಸ್ಪಷ್ಟ ಪಡಿಸಿದ್ದಾರೆ.
ಹಾಗಾಗಿ ಇದು ಇತ್ತೀಚೆಗಿನ ವಿಡಿಯೋ ಮತ್ತು ಆ ಮಹಿಳೆಯರು ಶಾಂತಿಯುತವಾಗಿ ಬತುಕಮ್ಮ ಹಬ್ಬವನ್ನು ಆಚರಿಸುತ್ತಿದ್ದರು ಎಂಬುವುದು ಸುಳ್ಳು ಸುದ್ದಿಯಾಗಿದೆ.
ಈ ವಿಡಿಯೋ ನೋಡಿ : ಅಂಬೇಡ್ಕರ್‌ರವರ ಪ್ರತಿ ಸಾಧನೆಯ ಹಿಂದಿದೆಯೆ ಬ್ರಾಹ್ಮಣರ ಪಾತ್ರ? – ಬಾಬಾ ಸಾಹೇಬರ ಬಗ್ಗೆ ಹರಡಿರುವ ಹಸಿ ಸುಳ್ಳುಗಳು
ಈ ಸುದ್ದಿಯನ್ನೂ ಓದಿ ; ಬೇಡ್ಕರ್‌ರವರಿಗೆ ಪ್ರತಿ ಹಂತದಲ್ಲಿ ಬ್ರಾಹ್ಮಣರು ಸಹಾಯ ಮಾಡಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.