ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮೋದಿ ಹೆಸರಿನಲ್ಲಿ ಓಟು ಕೇಳಿ ಎಂದು ಹೇಳಿಲ್ಲ

ಪಂಚರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಷ್ಟ್ರ ರಾಜಕಾರಣದಲ್ಲಿ ತ್ರೀವ್ರವಾದ ಸಂಚಲನ ಶುರುವಾಗಿದೆ. ರಾಷ್ಟ್ರೀಯ ಪಕ್ಷಗಳ ಆರೋಪ, ಪ್ರತ್ಯಾರೋಪಗಳ ನಡುವೆ ಕೆಲವು ಸುಳ್ಳು ಸುದ್ದಿಗಳು ಸಹ ಹರಿದಾಡುತ್ತಿವೆ. ಇತ್ತೀಚಿಗೆ ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‌ರವರು ತಮ್ಮ ಪಕ್ಷದ ಆಂತರಿಕ ಸಭೆಯಲ್ಲಿ “ಬೆಲೆ ಏರಿಕೆಯಿಂದ, ನಿರುದ್ಯೋಗದಿಂದ ಮಧ್ಯಪ್ರದೇಶದ ಜನ ಬಿಜೆಪಿಯ ಕುರಿತು ಬೇಜಾರಾಗಿದ್ದಾರೆ. ಸರ್ವೆಗಳು ಸಹ ನಮ್ಮ ಪಾರ್ಟಿಯ ಸ್ಥಿತಿ ಚಿಂತಾಜನಕವಾಗಿವೆ ಎಂದು ಹೇಳುತ್ತಿವೆ. ಹಾಗಾಗಿ ನಾನು ಎಲ್ಲರಿಗೂ ಹೇಳುತ್ತಿರುವುದು, ಚುನಾವಣೆಗಾಗಿ ಎಲ್ಲರು ತೀವ್ರವಾಗಿ ಕೆಲಸ ಮಾಡಿ, ಪ್ರತೀ ಜಿಲ್ಲೆ, ಹಳ್ಳಿಗಳಿಗೂ ಹೋಗಿ, ಮುಖ್ಯವಾಗಿ ನಮ್ಮ ಓಟು ಕಡಿಮೆ ಇರುವ ಇಂದೋರ್, ಉಜ್ಜೈನಿ ಮತ್ತು ದಮ್ಹೋಗೆ ಹೋಗಿ, ಹೆಚ್ಚೆಚ್ಚು ಕಾರ್ಯಕರ್ತರನ್ನು ಈ ಭಾಗಗಳಿಗೆ ಕಳಿಸಿ. ನರೇಂದ್ರ ಮೋದಿಯವರ ಪತ್ರ ತೋರಿಸಿ. ಮೋದಿಯ ಹೆಸರಿನಲ್ಲಿ ಓಟು ಕೇಳಿ” ಎಂದು ಹೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅವುಗಳನ್ನು ನೀವು ಇಲ್ಲಿ ನೋಡಬಹುದು.


ಫ್ಯಾಕ್ಟ್‌ಚೆಕ್: ಇದು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಜೂನ್ 26ರಂದು ಭೂಪಾಲ್‌ನಲ್ಲಿ ರಾಜ್ಯಕ್ಕೆ ಆಗಮಿಸಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಕುರಿತು ನಡೆಸಿದ ರಿವ್ಯೂ ಮೀಟಿಂಗ್ ಆಗಿದೆ. ಈ ಸಭೆಯ ಫೋಟೋಗಳನ್ನು ಮುಖ್ಯಮಂತ್ರಿಗಳ ಅಧಿಕೃತ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ತಮ್ಮ ಮಾತಿನ ನಡುವೆ ಶಿವರಾಜ್ ಸಿಂಗ್ ಚೌಹಾನ್‌ರವರು ಎಲ್ಲಿಯೂ ಮೋದಿಯವರ ಹೆಸರಿನಲ್ಲಿ ಓಟು ಕೇಳುವಂತೆ ಹೇಳಿಲ್ಲ.

ANI ಸಹ ಈ ಪ್ರಧಾನಿ ಮೋದಿಯವರ ಆಗಮನದ  ಸುದ್ದಿಯನ್ನು ವರದಿ ಮಾಡಿದೆ. ಆದ್ದರಿಂದ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವ ಮಾತುಗಳು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‌ರವರದ್ದು ಎಂಬುದು ಸುಳ್ಳು. ಈ ವೈರಲ್ ವಿಡಿಯೋ ಎಡಿಟೆಡ್ ಆಗಿದೆ.


ಇದನ್ನು ಓದಿ: ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ರಾಮಮಂದಿರದ ವಿರುದ್ಧ ವಾದಿಸಲು 24 ಜನ ವಕೀಲರನ್ನು ನೇಮಿಸಿರಲಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *