ಮಧ್ಯಪ್ರದೇಶದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಹಿಂದೂ ಸಂತರು ನಿರಾಕರಿಸಿದ್ದಾರೆ ಎಂಬುದು ಸುಳ್ಳು

ಪಂಚರಾಜ್ಯಗಳ ಚುನಾವಣೆಗಳು ಜರುಗುತ್ತಿವೆ. ಆಯಾ ರಾಜ್ಯಗಳಲ್ಲಿ  ವಿವಿಧ ರಾಜಕೀಯ ಪಕ್ಷಗಳು ತೀವ್ರವಾದ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಈ ನಡುವೆ ತಮ್ಮ ಎದುರಾಳಿ ಅಭ್ಯರ್ಥಿಯನ್ನು, ಪಕ್ಷವನ್ನು ಹಿಮ್ಮೆಟ್ಟಿಸಲು ಅನೇಕ ಸುಳ್ಳು ಸುದ್ದಿಗಳನ್ನು, ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ.

ಈಗ, ಮಧ್ಯಪ್ರದೇಶದಲ್ಲಿ ಹಿಂದೂ ಸಾಧು-ಸಂತರು ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿ ಪರ ಪ್ರಚಾರ ಮಾಡಲು ನಿರಾಕರಿಸಿದ್ದಾರೆ, ಈ ಬಾರಿ ಬಿಜೆಪಿ ಕೇವಲ 50 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಹೇಳಿದ್ದಾರೆ ಎಂಬ ವಿಡಿಯೋ ಒಂದು ಹಲವು ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್‌: 28 ಏಪ್ರಿಲ್ 2020ರಂದು ಕರೋನಾ ಹೆಚ್ಚಳದ ಕುರಿತು ವಿವಿಧ ವರ್ಗಗಳ ಜೊತೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಡೆಸಿದ ಚರ್ಚೆ ಇದಾಗಿದೆ. ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕರೋನ ಬಿಕ್ಕಟ್ಟಿನ ಕುರಿತು ಮಾತನಾಡಲಾಗಿದೆ ಹೊರತು ಚುನಾವಣೆ ಬಗ್ಗೆ ಅಲ್ಲ. ಆದರೆ ಆಡಿಯೋ ಎಡಿಟ್ ಮಾಡಿ ನಕಲಿ ಆಡಿಯೋ ಸೇರಿಸಿ ತಿರುಚಲಾಗಿದೆ. ಆದ್ದರಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಹಿಂದೂ ಸಂತರು ನಿರಾಕರಿಸಿದ್ದಾರೆ ಎಂಬುದು ಸುಳ್ಳು.

ಇದರ ಮೂಲ ವಿಡಿಯೋ IBC 24’s ಎಂಬ ಯೂಟೂಬ್ ಚಾನೆಲ್ ನಲ್ಲಿ ಪ್ರಕಟಿಸಿದ್ದು ನೀವು ಇಲ್ಲಿ ನೋಡಬಹುದು.


ಇದನ್ನು ಓದಿ: ರೈಲಿನ ಹಾರ್ನ್‌ನಿಂದ ನಮಾಜ್‌ಗೆ ತೊಂದರೆಯೆಂದು ಮುಸ್ಲಿಮರಿಂದ ರೈಲು ನಿಲ್ದಾಣ ಧ್ವಂಸ ಎಂಬುದು ಸುಳ್ಳು


ವಿಡಿಯೋ ನೋಡಿ: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್ ಮೋದಿ ಘೋಷಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *