Fact Check | ನೆಹರುರವರಿಗೆ ಸ್ವಾಮಿ ವಿದ್ಯಾನಂದ ವಿದೇಹ ಕಪಾಳಮೋಕ್ಷ ಮಾಡಿದ್ದರು ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಜವಾಹರಲಾಲ್ ನೆಹರು ಅವರಿಗೆ ಸ್ವಾಮಿ ವಿದ್ಯಾನಂದ ವಿದೇಹ ಅವರು ಸಾರ್ವಜನಿಕ ಸಮಾರಂಭದಲ್ಲಿ ಕಪಾಳಮೋಕ್ಷ ಮಾಡಿದ್ದರು. ಆ ಸಂದರ್ಭದಲ್ಲಿ ಈ ಫೋಟೋ ಸೆರೆಹಿಡಿಯಲಾಗಿದೆ” ಎಂಬ ಪೋಸ್ಟ್‌ ವೈರಲ್‌ ಆಗಿದೆ. ಕಳೆದ ಹಲವು ತಿಂಗಳುಗಳಿಂದ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಆದರೆ ಈ ಕುರಿತ ಫ್ಯಾಕ್ಟ್‌ಚೆಕ್‌ ನಡೆಸಿದಾಗ ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು 1962 ರ ಬಿಹಾರದ ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಸಭೆಯ ಸಂದರ್ಭದಲ್ಲಿ ತೆಗೆಯಲಾಗಿದೆ. ಈ ಸಭೆಯಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ನೂಕುನುಗ್ಗಲು ತಡೆಯಲು ಭದ್ರತಾ ಸಿಬ್ಬಂದಿ ಜವಾಹರಲಾಲ್ ನೆಹರು ಅವರಿಗೆ ರಕ್ಷಣೆ ನೀಡುತ್ತಿರುವುದಾಗಿದೆ.

ಇನ್ನು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸ್ವಾಮಿ ವಿದ್ಯಾನಂದ್ ವಿದೇಹ್ ಅವರು ಜವಾಹರಲಾಲ್ ನೆಹರು ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧ ಪಟ್ಟ ಹಾಗೆ ಹುಡುಕಿದಾಗ ಈ ಕುರಿತು ಯಾವುದೇ ಅಧಿಕೃತವಾದ ಮಾಹಿತಿ ಲಭ್ಯವಾಗಿಲ್ಲ ಮತ್ತು ಈ ರೀತಿಯ ಸುಳ್ಳನ್ನು ಹಲವು ವರ್ಷಗಳಿಂದ ಹರಡಲಾಗುತ್ತಿದೆ.

ಒಂದು ವೇಳೆ ಕಾರ್ಯಕ್ರಮವೊಂದರಲ್ಲಿ ಸ್ವಾಮಿ ವಿದ್ಯಾನಂದ್ ವಿದೇಹ್ ಅವರು ಜವಾಹರಲಾಲ್ ನೆಹರು ಅವರಿಗೆ ಕಪಾಳಮೋಕ್ಷ ಮಾಡಿದ್ದು ನಿಜವೇ ಆಗದ್ದರೆ ಅದು ಇತಿಹಾಸದಲ್ಲಿ ಉಲ್ಲೇಖವಾಗಬೇಕಿತ್ತು ಮತ್ತು ಹಾಗೆ ಸಾರ್ವಜನಿಕವಾಗಿ ಒಬ್ಬ ಪ್ರಧಾನಿಗೆ ಕಪಾಳಮೋಕ್ಷ ಮಾಡಿದವರು ಕೂಡ ಜೈಲು ಸೇರ ಬೇಕಾಗಿತ್ತು. ಆದರೆ ಇಂತಹ ಯಾವುದೇ ಬೆಳವಣಿಗೆಗಳು ಕೂಡ ನಡೆದಿಲ್ಲವಾದರಿಂದ ಇದೊಂದು ಸುಳ್ಳು ಸುದ್ದಿಯಾಗಿದೆ.


ಇದನ್ನು ಓದಿ: ರೈಲಿನ ಹಾರ್ನ್‌ನಿಂದ ನಮಾಜ್‌ಗೆ ತೊಂದರೆಯೆಂದು ಮುಸ್ಲಿಮರಿಂದ ರೈಲು ನಿಲ್ದಾಣ ಧ್ವಂಸ ಎಂಬುದು ಸುಳ್ಳು



ವಿಡಿಯೋ ನೋಡಿ: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್ ಮೋದಿ ಘೋಷಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *