ಬಿಜೆಪಿಗೆ ಮತ ನೀಡಬೇಡಿ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರು ಹೇಳಿಲ್ಲ

BJP

ಪಂಚರಾಜ್ಯಗಳ ಚುನಾವಣೆಯ ಈ ಸಂದರ್ಭದಲ್ಲಿ ಅನೇಕ ಸುಳ್ಳು ಸುದ್ದಿಗಳು ಆರೋಪ-ಪ್ರತ್ಯಾರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನೂ ಹಲವು ಎಡಿಟೆಡ್ ವಿಡಿಯೋಗಳನ್ನು ಜನ ಸತ್ಯವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರು ಲೋಧಿ ಸಮಾಜವನ್ನು ಕಡೆಗಣಿಸಿರುವ ಕಾರಣಕ್ಕಾಗಿ ಈ ಬಾರಿ ಬಿಜೆಪಿಗೆ ಓಟು ನೀಡದಂತೆ ಜನರಲ್ಲಿ ಕೇಳಿಕೊಂಡಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗುತ್ತಿದೆ.

ಫ್ಯಾಕ್ಟ್‌ಚೆಕ್‌: ಈ ವಿಡಿಯೋ 1 ಫೆಬ್ರವರಿ 2023ರಂದು ಭೋಪಾಲ್‌ನ ಅಯೋಧ್ಯೆ ನಗರದ ಹನುಮಾನ್ ದೇವಸ್ಥಾನದಲ್ಲಿ ಮದ್ಯ ನೀತಿಯ ಕುರಿತು ಉಮಾ ಭಾರತಿಯವರು ನಡೆಸಿದ ಪತ್ರಿಕಾಗೋಷ್ಠಿಯಾಗಿದೆ. ಮದ್ಯ ಮಾರುವ ಬಾರ್ ಗಳಲ್ಲಿ ದನದ ಕೊಟ್ಟಿಗೆಗಳನ್ನು ತೆರೆಯುವುದಾಗಿ ಹೇಳಿದ್ದರು. ಇದನ್ನು ಒನ್ ಇಂಡಿಯಾ (ಹಿಂದಿ) ವರದಿ ಮಾಡಿದೆ. ಮೂಲ ವಿಡಿಯೋದಲ್ಲಿ ಎಲ್ಲಿಯೂ ಉಮಾಭಾರತಿಯವರು ಬಿಜೆಪಿಗೆ ಓಟು ನೀಡಬೇಡಿ ಎಂದು ಕೇಳಿಕೊಂಡಿಲ್ಲ, ಆದರೆ ಅವರ ಆಡಿಯೋ ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.

ಮಧ್ಯಪ್ರದೇಶದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಎಡಿಟೆಡ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವುಗಳಲ್ಲಿ ಅನೇಕ ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಬಯಲುಗೊಳಿಸಿದೆ. ಮುಂಬರುವ ಲೋಕಸಭಾ ಚುನಾವಣೆಯವರೆಗೂ ಈ ಸುಳ್ಳು ಸುದ್ದಿಗಳು ಮುಂದುವರೆಯಲಿದ್ದು, ಸುದ್ದಿಗಳನ್ನು ನಂಬುವ ಮೊದಲು ಪರಿಶೀಲಿಸಿ.


ಇದನ್ನು ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಹಿಂದೂ ಸಂತರು ನಿರಾಕರಿಸಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: ಮಸೀದಿ ಭೂಮಿ ಮತ್ತು ಆರ್ಟಿಕಲ್‌ 370 ವಾಪಸ್ಸು ಪಡೆಯುತ್ತೇವೆ ಎಂದು ಕಮಲ್‌ ನಾಥ್‌ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *