ಸಾಮಾಜಿಕ ಜಾಲತಾಣದಲ್ಲಿ ರತನ್ ಟಾಟಾ ಅವರ ಜಾಹಿರಾತು ವಿಡಿಯೋವೊಂದು ವೈರಲ್ ಆಗಿದೆ ಅದರಲ್ಲಿ ಅವರು “ಹಲವಾರು ಮಂದಿ ನನ್ನ ಬಳಿ ಬೇಗ ಶ್ರೀಮಂತರಾಗುವುದು ಹೇಗೆ ಎಂದು ಕೇಳುತ್ತಾರೆ. ಅದಕ್ಕೆ ನನ್ನ ಉತ್ತರ ಭಾರತದಲ್ಲಿರುವ ನನ್ನ ಗೆಳೆಯ ಅಮಿರ್ ಖಾನ್ ಆತ ಏವಿಯೇಟರ್ ಎಂಬ ಗೇಮ್ ಸಂಸ್ಥೆ”
” ಏವಿಯೇಟರ್ ಗೇಮ್ ಸಂಸ್ಥೆಯ ಮಾಲಿಕ ಅಮಿರ್ ಖಾನ್‌ನಿಂದ ಹಲವಾರು ಮಂದಿ ಸಿರಿವಂತರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನೀವು ಕೂಡ ಈತನ ಏವಿಯೇಟರ್ ಟೀಮ್‌ಗೆ ಸೇರಿ ಗೇಮ್ ಆಡಿ” ಎಂದು ರತನ್ ಟಾಟಾ ಅವರು ಏವಿಯೇಟರ್ ಗೇಮ್ ಕಂಪನಿಯ ಕುರಿತು ಹೆಮ್ಮೆಯ ಮಾತುಗಳನ್ನ ಆಡಿದ್ದಾರೆ ಎಂದು ಏವಿಯೇಟರ್ ಗೇಮ್ ಸಂಸ್ಥೆಯ ಮಾಲೀಕನೆಂದು ಕರೆಯಲ್ಪಡುವ ಅಮಿರ್ ಖಾನ್ ಹಂಚಿಕೊಂಡಿದ್ದಾನೆ.
ಈ ವಿಡಿಯೋ ಕುರಿತು ಇಂಡಿಯಾ ಟುಡೆ ಫ್ಯಾಕ್ಟ್‌ಚೆಕ್ ನಡೆಸಿದ್ದು ಇದೊಂದು ಡೀಪ್ ಫೇಕ್ ವಿಡಿಯೋ ಆಗಿದೆ ಎಂಬುದನ್ನು ಬಯಲಿಗೆಳೆದಿದೆ. ಅಸಲಿಗೆ ಈ ವಿಡಿಯೋ 2015ರ ಜೂನ್ ತಿಂಗಳಿನಲ್ಲಿ ರತನ್ ಟಾಟಾ ಅವರು HEC ಪ್ಯಾರಿಸ್ ಬಿಸಿನೆಸ್ ಸ್ಕೂಲ್‌ನಲ್ಲಿ ಪ್ರಶಸ್ತಿ ಸ್ವೀಕರಿಸಲು ತೆರಳಿದ್ದ ಸಂದರ್ಭದ್ದಾಗಿದೆ. ಆ ವಿಡಿಯೋ ಮತ್ತು ಏವಿಯೇಟರ್ ಗೇಮ್ ವಿಡಿಯೋದಲ್ಲಿ ರತನ್ ಟಾಟಾ ಅವರು ಕಾಣಿಸಿಕೊಂಡಿರುವ ರೀತಿ ಹೋಲಿಕೆಯಾಗುತ್ತಿದೆ”
ಈ ವಿಡಿಯೋದಲ್ಲಿ ರತನ್ ಟಾಟಾ ಅವರ ವಾಯ್ಸ್ ಅನ್ನು ಎಡಿಟ್ ಮಾಡಲಾಗಿದ್ದು ಅದಕ್ಕೆ ಅವರ ಲಿಪ್ ಸಿಂಕ್ ಆಗುವಂತೆ ಗ್ರಾಫಿಕ್ಸ್ ಮಾಡಿ ಡೀಪ್ ಫೇಕ್ ಮುಖಾಂತರ ವಿಡಿಯೋ ತಯಾರಿಸಿ ರತನ್ ಟಾಟಾ ಅವರು ಏವಿಯೇಟರ್ ಗೇಮ್ ಆಡಲು ಸಲಹೆ ನೀಡಿದ್ದಾರೆ ಎಂದು ಸುಳ್ಳು ಹರಡಲಾಗಿದೆ. ಇದರ ಜೊತೆಗೆ ಈ ಏವಿಯೇಟರ್ ಕಂಪನಿ ಬೆಟ್ಟಿಂಗ್ ಗೇಮ್ ಕಂಪನಿಯ ಕಂಪನಿಯ ಅಮಿರ್ ಖಾನ್ ವಿರುದ್ಧ ಹಲವು ಪ್ರಕರಣಗಳು ಕೂಡ ಇವೆಯೆಂದು ಇಂಡಿಯಾ ಟುಡೆ ವರದಿ ಮಾಡಿದೆ.