Fact Check : “ಜಾತ್ಯತೀತತೆಯು ಭಾರತದ ಹಿರಿಮೆಯನ್ನು ನಾಶಪಡಿಸುತ್ತಿದೆ” ಎಂದು ದಲೈಲಾಮಾರವರು ಹೇಳಿಲ್ಲ.!

“ಭಾರತವು ಒಂದು ಅದ್ಭುತ ಹಿಂದೂ ರಾಷ್ಟ್ರ ಆದರೆ ಜಾತ್ಯತೀತರು ಈ ದೇಶವನ್ನು ಹಾಳು ಮಾಡುತ್ತಿದ್ದಾರೆ ಈ ಭಾರತವನ್ನು ಕಾಪಾಡುವ ಸಾಮರ್ಥ್ಯ ಹಿಂದುತ್ವಕ್ಕೆ ಮಾತ್ರ ಇದೆ” ಎಂದು  ದಲೈ ಲಾಮಾ ರವರು ಹೇಳಿಕೆಯನ್ನು ನೀಡಿದ್ದಾರೆ ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹಲವು ವರ್ಷಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ ರೀತಿಯಾಗಿ ದಲೈ ಲಾಮ ಅವರೇ ಹೇಳಿರುವಂತಹ ಅಧಿಕೃತ ಹೇಳಿಕೆಗಳು ಎಲ್ಲಿಯೂ ಕಂಡು ಬಂದಿಲ್ಲ. ಒಂದು ವೇಳೆ ಲಾಮ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದೇ ಆಗಿದ್ದಲ್ಲಿಆ ಕುರಿತು ಅಧಿಕೃತ ವರದಿಗಳನ್ನು ಹಲವು ಮಾಧ್ಯಮಗಳು ಮಾಡಬೇಕಿತ್ತು. ಆದರೆ ಇಂತಹ ಯಾವುದೇ ವರದಿಗಳು ಕೂಡ ಕಂಡು ಬಂದಿಲ್ಲ.

ಇನ್ನು ಇದಕ್ಕೆ ಪೂರಕವಾಗಿ ದಲೈ ಲಾಮ ಅವರ ಸಾಮಾಜಿಕ ಜಾಲತಾಣಗಳನ್ನ ಕೂಡ ಪರಿಶೀಲಿಸಲಾಗಿದೆ. ಅವರ ಯಾವುದೇ ಖಾತೆಯಲ್ಲೂ ಇಂತಹ ಹೇಳಿಕೆಗಳುಳ್ಳ ಪೋಸ್ಟ್‌ಗಳು ಕಂಡು ಬಂದಿಲ್ಲ. ಆದರೆ ದಲೈಲಾಮ ಅವರು ಜಾತ್ಯತೀತತೆಯನ್ನು ಸಮರ್ಥಿಸಿಕೊಂಡಿರುವುದರ ಕುರಿತು ಮಾಹಿತಿ ಲಭ್ಯವಾಗಿದೆ. ಹಾಗೂ ಈ ಕುರಿತು ವರದಿಗಳು ಆಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಅದರಲ್ಲಿ ಅವರು ” “ಭಾರತವು ಜಾತ್ಯತೀತ ಸಂಪ್ರದಾಯವನ್ನು ಅನುಸರಿಸುತ್ತದೆ; ಇದು ಎಲ್ಲಾ ಧರ್ಮಗಳನ್ನು, ನಾಸ್ತಿಕರನ್ನು ಸಹ ಸಮಾನವಾಗಿ ಗೌರವಿಸುತ್ತದೆ, ಇದು ಅನನ್ಯವಾಗಿದೆ. ವಿವಿಧ ಧರ್ಮಗಳು ಸಹೋದರತೆಯಿಂದ ಒಟ್ಟಿಗೆ ಬಾಳುವುದು ಭಾರತದ ಹಿರಿಮೆ ” ಎಂಬ ಹೇಳಿಕೆಯನ್ನು ನೀಡುವ ಮೂಲಕ ಭಾರತದ ಜಾತ್ಯತೀತ ನಿಲುವುಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಹೀಗಾಗಿ ದಲೈ ಲಾಮ ಅವರು ಜಾತ್ಯತೀತತೆಯ ವಿರುದ್ಧ ಮಾತನಾಡಿದ್ದಾರೆ ಮತ್ತು ಹಿಂದುತ್ವ ಒಂದೇ ಭಾರತವನ್ನು ರಕ್ಷಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದ ಪೋಸ್ಟ್‌ ಆಗಿದೆ.

Leave a Reply

Your email address will not be published. Required fields are marked *