Fact Check | ಆಫ್ರಿಕನ್ ರಾಷ್ಟ್ರ ಅಂಗೋಲಾ ಇಸ್ಲಾಂ ಧರ್ಮವನ್ನು ನಿಷೇಧಿಸಿದೆ ಎಂಬುದು ಸುಳ್ಳು

“ಆಫ್ರಿಕನ್ ರಾಷ್ಟ್ರವಾದ ಅಂಗೋಲಾ ಇಸ್ಲಾಂ ಧರ್ಮವನ್ನು ನಿಷೇಧಿಸಿದೆ ಮತ್ತು ಅಲ್ಲಿರುವ ಮಸೀದಿಗಳನ್ನು ನಾಶಮಾಡುತ್ತಿದೆ. ಆಫ್ರಿಕಾದಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೀತಿಯಾದ ಬೆಳವಣಿಗೆ ನಡೆಯುತ್ತಿದೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪತ್ರಿಕೆಗಳು ಹಾಗೂ ಮಸೀದಿಗಳನ್ನು ಧ್ವಂಸಗೊಳಿಸುವ  ಫೋಟೋದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ ರೀತಿಯ ಸುದ್ದಿಯನ್ನ ಕಳೆದ 10 ವರ್ಷಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. 2013ರಿಂದ ಹಂಚಿಕೊಳ್ಳಲಾಗುತ್ತಿರುವ ಈ ಫೋಟೋಗಳಲ್ಲಿ ಮಸೀದಿಗಳನ್ನ ಧ್ವಂಸ ಮಾಡುತ್ತಿರುವುದನ್ನ ಕಾಣಬಹುದಾಗಿದೆ. ಇದನ್ನೇ ಬಳಸಿಕೊಂಡು ಸಾಕಷ್ಟು ಮಂದಿ ಅಂಗೋಲಾದಲ್ಲಿ ಇಸ್ಲಾಂ ಧರ್ಮವನ್ನು ನಿಷೇಧಿಸಲಾಗಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ.

ಆದರೆ ಇದುವರೆಗೂ ಈ ಕುರಿತು  ಯಾವುದೇ ವರದಿಗಳು ನಿಖರ ವರದಿಗಳು ಕಂಡು ಬಂದಿಲ್ಲ. ಈ ಹಿಂದೆ ಅಂಗೋಲಾ ದೇಶದಲ್ಲಿ ಸರ್ಕಾರದ ಅನುಮತಿ ಪಡೆಯದೆ ನಿರ್ಮಿಸಲಾದ ಮಸೀದಿಗಳನ್ನ ಧ್ವಂಸ ಮಾಡಲಾಗಿತ್ತು. ಇದನ್ನ ಅಂಗೋಲಾ ಸರ್ಕಾರ ಕಾನೂನು ಬದ್ಧವಾಗಿಯೇ ಮಾಡಿತ್ತು. ಜೊತೆಗೆ ಕೆಲ ಮಸೀದಿಗಳನ್ನು ಸರ್ಕಾರಿ ಜಾಗದ ಬಳಿ ಕೂಡ ನಿರ್ಮಾಣ ಮಾಡಲಾಗಿತ್ತು. ಹಾಗಾಗಿ ಆ ಮಸೀದಿಗಳನ್ನ ತೆರವು ಮಾಡದೇ ಬೇರೆ ದಾರ ಅಲ್ಲಿನ ಸರ್ಕಾರಕ್ಕೆ ಇರಲಿಲ್ಲ.

ಈ ಬಗ್ಗೆ ಅಲ್ಲಿನ ಸರ್ಕಾರವೇ ಈ ಹಿಂದೆ ಸ್ಪಷ್ಟನೆ ನೀಡಿತ್ತು ಮತ್ತು ಈ ಕುರಿತು ಬಿಬಿಸಿ ವರದಿ ಮಾಡಿತ್ತು. ಇನ್ನು ಯಾವಾಗ ಈ ಫೋಟೋಗಳ ಜೊತೆ ಅಂಗೋಲಾದಲ್ಲಿ ಇಸ್ಲಾಂ ಧರ್ಮವನ್ನು ನಿಷೇಧಿಸಲಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹಂಚಿಕೊಳ್ಳಲಾಯಿತೋ ಆಗಲೇ ಆಂಗೋಲಾ ಸರ್ಕಾರ ಜೊತೆಗೆ ಇಸ್ಲಾಂ ಧರ್ಮವನ್ನು ನಿಷೇಧಿಸಲಾಗಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಈ ರೀತಿ ಹಲವು ಬಾರಿ ಅಲ್ಲಿನ ಸರ್ಕಾರ ಸ್ಪಷ್ಟ ಪಡಿಸಿದರು ಕಳೆದ 10 ವರ್ಷಗಳಿಂದಲೂ ಕೂಡ ಸಾಕಷ್ಟು ಮಂದಿ ಇದೇ ರೀತಿಯಾದ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ : ವಿಶ್ವದ ಭ್ರಷ್ಟ ಪ್ರಧಾನಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರಿಗೆ ಎರಡನೇ ಸ್ಥಾನ ಎಂಬುದು ಸುಳ್ಳು


ಈ ವಿಡಿಯೋ ನೋಡಿ : ವಿಶ್ವದ ಭ್ರಷ್ಟ ಪ್ರಧಾನಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರಿಗೆ ಎರಡನೇ ಸ್ಥಾನ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *