Fact Check : ವಿಶ್ವದ ಭ್ರಷ್ಟ ಪ್ರಧಾನಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರಿಗೆ ಎರಡನೇ ಸ್ಥಾನ ಎಂಬುದು ಸುಳ್ಳು

“ಫಾಕ್ಸ್ ನ್ಯೂಸ್ ಬಿಡುಗಡೆ ಮಾಡಿದ ಟಾಪ್ 10 ಭ್ರಷ್ಟ ಪ್ರಧಾನ ಮಂತ್ರಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ. ಅಂದಭಕ್ತರ ವಿಶ್ವಗುರು ಈಗ ಭ್ರಷ್ಟಗುರು ಸತ್ಯ ತಡವಾಗುತ್ತೆ ಆದರೆ ಸತ್ಯ ಸಾಯಲ್ಲ” ಎಂಬ ಪೋಸ್ಟ್‌ವೊಂದು ಪೇಪರ್‌ ಕಟಿಂಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ.

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ವಿಶ್ವದ ಅತ್ಯಂತ ಭ್ರಷ್ಟ ಪ್ರಧಾನ ಮಂತ್ರಿಗಳ ಬಗ್ಗೆ ಫಾಕ್ಸ್ ನ್ಯೂಸ್ ಇಂತಹ ಯಾವುದೇ ವರದಿಯನ್ನು ಪ್ರಕಟಿಸಲಿಲ್ಲ. ಫಾಕ್ಸ್ ನ್ಯೂಸ್ ಪಾಯಿಂಟ್‌ಗೂ ಮತ್ತು ಯುಎಸ್ ಮೂಲದ ಫಾಕ್ಸ್‌ ನ್ಯೂಸ್‌ ಮಾಧ್ಯಮ ಕಂಪನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ ಇದನ್ನೇ ಫಾಕ್ಸ್‌ ನ್ಯೂಸ್‌ ಎಂದು ಹಲವರು ಭಾವಿಸಿದ್ದಾರೆ.

ಇದರ ಜೊತೆಗೆ ಫಾಕ್ಸ್‌ ನ್ಯೂಸ್‌ ಪಾಯಿಂಟ್‌ ಎಂಬ ಯಾವುದೇ ಸುದ್ದಿ ವೆಬ್‌ಸೈಟ್‌ ಸಕ್ರಿಯವಾಗಿ ಈಗ ಕಾರ್ಯನಿರ್ವಹಿಸುತ್ತಿಲ್ಲ. ಈ ವರದಿಯ ಕುರಿತು ಸತ್ಯನ್ವೇಷಣೆ ನಡೆಸಿದಾಗ ಈ ವರದಿಗೆ ಯಾವುದೇ ಆಧಾರವಾಗಲಿ ಅಥವಾ ಮಾನದಂಡವನ್ನಾಗಲಿ ಈ ವೆಬ್‌ಸೈಟ್‌ ಒದಗಿಸಿಲ್ಲ.

ಇದೇ ರೀತಿಯ ಹಲವು ವರದಿಗಳನ್ನ ಈ ವೆಬ್‌ಸೈಟ್‌ ಪ್ರಕಟಿಸಿದೆ ಆದರೆ ಅವುಗಳಿಗೆ ಕೂಡ ಯಾವುದೇ ಆಧಾರವನ್ನ ಈ ವೆಬ್‌ಸೈಟ್‌ ನೀಡಿಲ್ಲ.

ಹೀಗಾಗಿ ಇದೊಂದು  ಅಜ್ಞಾತ ನಕಲಿ ವೆಬ್‌ಸೈಟ್ ಎಂಬುದನ್ನು ಈ ಹಿಂದೆಯೇ ಫ್ಯಾಕ್ಟ್‌ಲೀ ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಇನ್ನು ಇದೇ ‘ಫಾಕ್ಸ್ ನ್ಯೂಸ್ ಪಾಯಿಂಟ್’ ವೆಬ್‌ಸೈಟ್ ಈಗ ಅಂತರ್ಜಾಲದಲ್ಲಿ ಲಭ್ಯವಿಲ್ಲ. ಹಾಗಾಗಿ ವಿಶ್ವದ ಭ್ರಷ್ಟ ಪ್ರಧಾನಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರಿಗೆ ಎರಡನೇ ಸ್ಥಾನ ಎಂಬುದು ಸುಳ್ಳಾಗಿದೆ.


ಇದನ್ನೂ ಓದಿ : ಇಸ್ರೇಲ್ ಫ್ಯಾಲೆಸ್ಟೈನ್ ಯುದ್ಧ ನಿಲ್ಲಿಸಲು ಇರಾನ್ ಮೋದಿಯವರ ಸಹಾಯ ಕೇಳಿದೆ ಎಂಬುದು ಸುಳ್ಳು



ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *