ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ನಿಲ್ಲಿಸಲು ಇರಾನ್ ಮೋದಿಯವರ ಸಹಾಯ ಕೇಳಿದೆ ಎಂಬುದು ಸುಳ್ಳು

ಇಸ್ರೇಲ್ ಹಮಾಸ್‌ ಯುದ್ಧ ಪ್ರಾರಂಭವಾದ ದಿನಗಳಿಂದ ಭಾರತೀಯ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿಯವರ ಸಹಾಯವನ್ನು ಇಸ್ರೇಲ್ ಬಯಸಿದೆ ಅಥವಾ ಫ್ಯಾಲಸ್ಟೈನ್ ಬಯಸುತ್ತಿದೆ ಎಂದು ಹೇಳುತ್ತಲೇ ಬರುತ್ತಿವೆ. ಜಗತ್ತಿನ ದೊಡ್ಡಣ್ಣ ಅಮೇರಿಕ ನರೇಂದ್ರ ಮೋದಿಯವರ ಸಹಾಯ ಬಯಸುತ್ತಿದೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿವೆ.

ಇತ್ತೀಚೆಗೆ, ಅಂದು ಕಾಶ್ಮೀರದ ಸಮಸ್ಯೆ ಬಗೆಹರಿಸಲು ವಿಶ್ವಸಂಸ್ಥೆ ಸಹಾಯ ಕೋರಿದ್ದ ಜವಾಹರಲಾಲ್ ನೆಹರು ಇಂದು ಇಸ್ರೇಲ್ ಫ್ಯಾಲೆಸ್ಟೈನ್ ಯುದ್ಧ ನಿಲ್ಲಿಸಲು ಭಾರತದ ಪ್ರಧಾನಿ ಮೋದಿಯ ಸಹಾಯ ಕೇಳಿದ ಇರಾನ್ ದೇಶ. ಎಂಬ ಪೋಸ್ಟರ್‌ ಒಂದು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್‌: ಇದೇ ನವೆಂಬರ್ 13 ರಂದು ಪ್ರಧಾನಿ ನರೇಂದ್ರ ಮೋದಿ ಇರಾನಿನ ಅಧ್ಯಕ್ಷ ಸಯ್ಯದ್ ಇಬ್ರಾಹಿಮ್ ರೈಸಿಯವರಿಗೆ ಕರೆ ಮಾಡಿ ಇಸ್ರೇಲ್-ಹಮಾಸ್ ಸಂಘರ್ಷದ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ “ತುರ್ತು ಪರಿಸ್ಥಿತಿ” ಕುರಿತು ಚರ್ಚಿಸಿದ್ದಾರೆ. ಜೊತೆಗೆ, ಎರಡೂ ದೇಶಗಳ ನಡುವಿನ ಸಹಕಾರ ಮತ್ತು ಪ್ರದೇಶಿಕ ಸಂಪರ್ಕವನ್ನು ಸುಧಾರಿಸುವ ಕುರಿತು ಮಾತನಾಡಿದ್ದಾರೆ. ಮೋದಿಯವರು ಯುದ್ಧ ಆರಂಭವಾದಾಗಿನಿಂದ ಇಸ್ರೇಲ್, ಪ್ಯಾಲೇಸ್ಟೈನ್, ಇಂಗ್ಲೆಂಡ್, ಯುಎಇ ದೇಶಗಳ ಮುಖಂಡರೊಂದಿಗೆ ಪರಿಸ್ಥಿತಿ ನಿಭಾಯಿಸಿ ಮರಳಿ ಸಹಜ ಸ್ಥಿತಿಗೆ ತರುವುದರ ಕುರಿತು ಮಾತನಾಡಿದ್ದಾರೆ.

ಇಸ್ರೇಲ್ ಮತ್ತು ಹಮಾಸ್‌ ನಡುವಿನ ಸಂಘರ್ಷವನ್ನು ಸುಧಾರಿಸಲು ಭಾರತವು ಪಶ್ಚಿಮ ಏಷ್ಯಾ ಪ್ರದೇಶದ ಪ್ರಮುಖ ದೇಶಗಳನ್ನು ಮಧ್ಯಸ್ಥಿಕೆಗೆ ಕರೆಯುತ್ತಿದೆ. ಆದ್ದರಿಂದ ಮೋದಿಯವರು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಯುಎಇಯ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಹಲವು ದೇಶದ ಮುಖ್ಯಸ್ಥರೊಂದಿಗೆ ಈಗಾಗಲೇ ಚರ್ಚಿಸಿದೆ. ಕಳೆದ ಒಂದು ತಿಂಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ-2 ಅವರೊಂದಿಗೆ ಮೋದಿಯವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಯುದ್ಧ ನಿಲ್ಲಿಸಲು ಇರಾನ್ ಮೋದಿಯವರ ಸಹಾಯ ಕೇಳಿದೆ ಎಂಬುದು ಸುಳ್ಳು.


ಇದನ್ನು ಓದಿ: ಜವಹರಲಾಲ್ ನೆಹರೂರವರ ಕುರಿತ ಸರಣಿ ಸುಳ್ಳುಗಳು


ವಿಡಿಯೋ ನೋಡಿ: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದಕ್ಕೆ ಆಧಾರಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *