Fact Check : ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೆಸರಿನಲ್ಲಿ ವೈರಲ್‌ ಆಗುತ್ತಿದೆ ನಕಲಿ ಟ್ವೀಟ್‌..!

“ಭಾರತೀಯರಿಗೆ ಮಂದಿರಗಳು ಬೇಕಾಗಿವೆ. ಕಾಂಗ್ರೆಸ್‌ ಐಐಟಿ, ಐಐಎಂ, ಕಾಲೇಜುಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು, ರೈಲ್ವೆ, ಅಣೆಕಟ್ಟುಗಳು, ಇಸ್ರೋದಂತಹ ಸಂಸ್ಥೆಗಳನ್ನು 70 ವರ್ಷಗಳಿಂದ ನಿರ್ಮಿಸುತ್ತಲೇ ಇತ್ತು. ಅದನ್ನು ಇಂದು ಮಾರಾಟ ಮಾಡಬೇಕಾಗಿದೆ” ಎಂದು ಮನಮೋಹನ್‌ ಸಿಂಗ್‌ ಟ್ವೀಟ್ ಮಾಡಿದ್ದಾರೆ ಎಂದು ಪೋಸ್ಟ್‌ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದರ ಕುರಿತು ಸಾಕಷ್ಟು ಮಂದಿ ಸತ್ಯ ಏನು ಎಂದು ಅವಲೋಕನ ಮಾಡದೆ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪೋಸ್ಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದರ ಜೊತೆಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಕುರಿತು ನ್ಯೂಸ್‌ ಮೀಟರ್‌ ತಂಡ ಫ್ಯಾಕ್ಟ್‌ಚೆಕ್‌ ನಡೆಸಿದೆ. ಬಳಿಕ ಈ ರೀತಿಯ ಯಾವುದೇ ಟ್ವೀಟ್ ಅನ್ನು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಮಾಡಿಲ್ಲ ಎಂದು ಪತ್ತೆ ಹಚ್ಚಿದೆ.  ವೈರಲ್‌ ಟ್ವೀಟ್‌ ಅನ್ನು ನಕಲಿ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಆ ಖಾತೆಯ ಮೂಲವನ್ನು ಹುಡುಕಿದಾಗ ಇದೀಗ ಆ ಖಾತೆಯೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿಲ್ಲ ಎಂಬುದು ತಿಳಿದು ಬಂದಿದೆ .

ಒಂದು ವೇಳೆ ಈ ಪೋಸ್ಟ್‌ ನಿಜವೇ ಆಗಿದ್ದರೆ ಈ ವೈರಲ್‌ ಪೋಸ್ಟ್‌ ಕುರಿತು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆದರೆ ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ ಕುರಿತು ಯಾವುದೇ ಒಂದು ಮಾಧ್ಯಮವು ಕೂಡ ಈ ಕುರಿತು ವರದಿ ಪ್ರಕಟ ಮಾಡಿಲ್ಲ. ಹಾಗಾಗಿ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ .

Leave a Reply

Your email address will not be published. Required fields are marked *