ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ದೇಪಾಲ್ಪುರ್ ಬಿಜೆಪಿ ಅಭ್ಯರ್ಥಿ ಮನೋಜ್ ನಿರ್ಭಯ್ ಸಿಂಗ್‌ಗೆ ಮತ ಹಾಕಬೇಡಿ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ಅನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ
ಈ ವಿಡಿಯೋ ಕುರಿತು ಸತ್ಯ ಶೋಧನೆಯನ್ನ ನಡೆಸಿದಾಗ ಈ ವಿಡಿಯೋ ಎಡಿಟೆಡ್ ಎಂದು ತಿಳಿದು ಬಂದಿದೆ. ಇದೇ ನವಂಬರ್ 11 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಪ್ರದೇಶದ ದೇಪಾಲ್ಪುರ್‌ನಲ್ಲಿ ಭಾಷಣ ಮಾಡಿದ್ದಾರೆ. ಈ ಭಾಷಣದ ವಿಡಿಯೋ ಅಮಿತ್ ಶಾ ಅವರ ಯೂಟ್ಯೂಬ್ ಖಾತೆಯಲ್ಲಿ ಕೂಡ ಲಭ್ಯವಿದೆ.
ಸುಮಾರು 24 ನಿಮಿಷ 48 ಸೆಕೆಂಡ್‌ಗಳಲ್ಲಿರುವ ಈ ವಿಡಿಯೋದಲ್ಲಿ ಸರಿಯಾಗಿ 7 ನಿಮಿಷ ಎರಡು ಸೆಕೆಂಡ್‌ಗಳಲ್ಲಿ ಅಮಿತ್ ಶಾ ಅವರು ದೇಪಾಲ್ಪುರ್ ವಿಧಾನಸಭಾ ಕ್ಷೇತ್ರದ ಕುರಿತು ಮಾತನಾಡಿದ್ದಾರೆ.
ಆ ಸಂದರ್ಭದಲ್ಲಿ ಅವರು ಅವರು “ದೇಪಾಲ್ಪುರ್ ಬಿಜೆಪಿ ಅಭ್ಯರ್ಥಿ ಮನೋಜ್ ನಿರ್ಭಯ್ ಸಿಂಗ್‌ಗೆ ಮತ ಹಾಕುತ್ತಿದ್ದೇವೆ ಎಂದು ಭಾವಿಸಿ ಮತ ಹಾಕಬೇಡಿ. ಬಿಜೆಪಿಗೆ ನಾವು ಮತ ಹಾಕುತ್ತಿದ್ದೇವೆ ಎಂದು ಮತ ಹಾಕಿ. ಆಗ ರಾಜ್ಯದಲ್ಲಿ ಮೋದಿ ಅವರ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ” ಎಂಬ ಅರ್ಥದಲ್ಲಿ ಭಾಷಣ ಮಾಡಿದ್ದಾರೆ
ಆದರೆ ಇದನ್ನೇ ಎಡಿಟ್ ಮಾಡಿ “ದೇಪಾಲ್ಪುರ್ ಬಿಜೆಪಿ ಅಭ್ಯರ್ಥಿ ಮನೋಜ್ ನಿರ್ಭಯ್ ಸಿಂಗ್‌ಗೆ ಮತ ಹಾಕಬೇಡಿ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಹರಡಲಾಗುತ್ತಿದೆ.
ಇದನ್ನೂ ಓದಿ : Fact Check | ಪ್ಯಾಲೆಸ್ಟೈನ್ ಪರ ಪ್ರತಿಭಟನೆಯಲ್ಲಿ ಕತ್ತೆ ಬೆನ್ನಿನ ಮೇಲೆ ಇಸ್ರೇಲ್ ಧ್ವಜ ಬಿಡಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ