ನೆನ್ನೆಯಷ್ಟೆ ಮಧ್ಯಪ್ರದೇಶದ ಚುನಾವಣೆ ನಡೆದಿದೆ, ಇಡೀ ದೇಶವೇ ಡಿಸೆಂಬರ್ 3ರಂದು ಪ್ರಕಟವಾಗುವ ಪಂಚರಾಜ್ಯಗಳ ಪಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಈ ಬಾರಿ ಮಧ್ಯಪ್ರದೇಶದ ಚುನಾವಣಾ ಪ್ರಚಾರಕ್ಕಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಸುಳ್ಳನ್ನೆ ತಮ್ಮ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಈ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸುಳ್ಳು ಸುದ್ದಿಗಳು, ಆಪಾದನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇತ್ತೀಚೆಗೆ, 2016 ರಲ್ಲಿ, ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ಮಂದಸೌರ್‌ನಲ್ಲಿ ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ಕೇಳಿದ ರೈತರ ಮೇಲೆ ಗುಂಡು ಹಾರಿಸಿತು ಅದರಲ್ಲಿ ಆರು ಮಂದಿ ರೈತರು ಮೃತಪಟ್ಟರು ಎಂಬ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗುತ್ತಿದೆ.
ಫ್ಯಾಕ್ಟ್‌ಚೆಕ್: ಇದು 1 ನವೆಂಬರ್ 2017ರಲ್ಲಿ ಜಾರ್ಖಂಡ್‌ನ ಖುಂಟಿ ಪೋಲಿಸ್ ಠಾಣೆಯ ಪೋಲಿಸರು ನಡೆಸಿದ ತರಬೇತಿ ಪೂರ್ವಾಭ್ಯಾಸದ ಅಣಕು ಡ್ರಿಲ್ ನ ವೀಡಿಯೊ ಆಗಿದೆ. ಆದರೆ 2017 ರಲ್ಲಿ ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂದಸೌರ್ ಜಿಲ್ಲೆಯ ಪಿಪ್ಲಿಯಾ ಮಂಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೋಲಿಸರು ನಡೆಸಿದ ಗೋಲಿಬಾರ್ ನಿಂದ ಆರು ಮಂದಿ ರೈತರು ಮೃತಪಟ್ಟಿದ್ದರು.
ಪ್ರತಿಭಟನೆ ತೀವ್ರಗೊಂಡಿದ್ದರಿಂದ ರೈತರು ಸಾರ್ವಜನಿಕ ವಾಹನಗಳ ಮೇಲೆ ಬೆಂಕಿ ಇಟ್ಟರು, ಪೋಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು ಆಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದರು ಎಂದು ವರದಿಯಲ್ಲಿ ಹೇಳಲಾಯಿತು. ಆದ್ದರಿಂದ ಹರಿದಾಡುತ್ತಿರುವ ಪೋಲಿಸರ ಅಣಕು ಡ್ರಿಲ್‌ನ ವಿಡಿಯೋವಿಗೂ ಮತ್ತು ರೈತರ ಸಾವಿಗೂ ಯಾವುದೇ ಸಂಬಂಧವಿಲ್ಲ.
ಇದನ್ನು ಓದಿ: ಪಶ್ಚಿಮ ಬಂಗಾಳದ ಚುನಾವಣೆಯ ಹಳೆಯ ವಿಡಿಯೋವನ್ನು ಮಧ್ಯಪ್ರದೇಶಕ್ಕೆ ಸೇರಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ವಿಡಿಯೋ ನೋಡಿ: ಈಗ ಇಂಡೋನೇಷ್ಯಾದಲ್ಲಿ ಗಣಪತಿ ಚಿತ್ರವಿರುವ ನೋಟುಗಳು ಚಲಾವಣೆಯಲ್ಲಿಲ್ಲ | Indonesia | Currency | Ganesha |
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ